ಜೈಲಿನಲ್ಲಿ ಎಎಪಿ ಸಚಿವರಿಗೆ ವಿಐಪಿ ಚಿಕಿತ್ಸೆ, ತಿಹಾರ್ ಜೈಲಿನ ಅಧಿಕಾರಿ ಅಮಾನತು

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2022 | 5:17 PM

ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರಿಗೆ ವಿಐಪಿ ಚಿಕಿತ್ಸೆ ನೀಡಿದ ಆರೋಪದ ಮೇಲೆ ದೆಹಲಿಯ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಇಂದು ಅಮಾನತುಗೊಳಿಸಲಾಗಿದೆ.

ಜೈಲಿನಲ್ಲಿ ಎಎಪಿ ಸಚಿವರಿಗೆ ವಿಐಪಿ ಚಿಕಿತ್ಸೆ, ತಿಹಾರ್ ಜೈಲಿನ ಅಧಿಕಾರಿ ಅಮಾನತು
Follow us on

ದೆಹಲಿ: ಜೈಲಿನಲ್ಲಿರುವ ಆಮ್ ಆದ್ಮಿ ಪಕ್ಷದ ಸಚಿವ ಸತ್ಯೇಂದ್ರ ಜೈನ್ ಅವರಿಗೆ ವಿಐಪಿ ಚಿಕಿತ್ಸೆ ನೀಡಿದ ಆರೋಪದ ಮೇಲೆ ದೆಹಲಿಯ ತಿಹಾರ್ ಜೈಲಿನ ಸೂಪರಿಂಟೆಂಡೆಂಟ್ ಅಜಿತ್ ಕುಮಾರ್ ಅವರನ್ನು ಇಂದು ಅಮಾನತುಗೊಳಿಸಲಾಗಿದೆ. ಸತ್ಯೇಂದ್ರ ಜೈನ್ ಬಂಧಿಸಿರುವ ಜೈಲ್ ನಂಬರ್‌ 7ರ ಸೂಪರಿಂಟೆಂಡೆಂಟ್‌ ಅವರು ಅನಗತ್ಯವಾಗಿ ಅವರಿಗೆ ವೈಯಕ್ತಿಕವಾಗಿ ಸಹಾಯ ಮಾಡಿದರೆ ಎಂದು ಜೈಲಿನಲ್ಲಿರುವ ಕನ್‌ಮನ್‌ ಸುಕೇಶ್‌ ಚಂದ್ರಶೇಖರ್‌ ಅವರು ಆರೋಪಿಸಿ ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ರಚಿಸಿದ ವಿಚಾರಣಾ ಸಮಿತಿಯ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ಅವರನ್ನು ತನಿಖೆ ನಡೆಸಿದಾಗ ಅವರು ಅನಗತ್ಯ ವಿಚಾರಕ್ಕೆ ಕೈಹಾಕಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ದೆಹಲಿ ಸರ್ಕಾರದ ಜೈಲು ಇಲಾಖೆ ತಿಳಿಸಿದೆ. ಸುಕೇಶ್ ಚಂದ್ರಶೇಖರ್ ಅವರು ಸತ್ಯೇಂದ್ರ ಜೈನ್ ಅವರಿಗೆ ರಕ್ಷಣಾ ಹಣವಾಗಿ 10 ಕೋಟಿ ರೂ.ಗಳನ್ನು ಪಾವತಿಸಲು ಒತ್ತಾಯಿಸಿದರು ಎಂದು ಆರೋಪಿಸಿದ್ದರು, ಇದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದ ಕಸಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕೈಗಾರಿಕೋದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಉನ್ನತ ವ್ಯಕ್ತಿಗಳಿಂದ ಹಣ ವಸೂಲಿ ಮಾಡಿದ ಆರೋಪದಲ್ಲಿ ಸುಕೇಶ್ ಚಂದ್ರಶೇಖರ್ 2017 ರಿಂದ ಜೈಲಿನಲ್ಲಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ದೆಹಲಿ ಸಚಿವ ಸತ್ಯೇಂದ್ರ ಜೈನ್ (Satyendar Jain) ಅವರ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್​ಶೀಟ್​​ನಲ್ಲಿ ಸಾಕಷ್ಟು ಪ್ರಬಲವಾದ ಸಾಕ್ಷಿಗಳಿವೆ ಎಂದು ದೆಹಲಿ ನ್ಯಾಯಾಲಯ ಹೇಳಿತ್ತು.

ದೆಹಲಿಯ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರದ ಸಚಿವರಾಗಿದ್ದ 57 ವರ್ಷದ ಸತ್ಯೇಂದ್ರ ಜೈನ್ ಅವರನ್ನು ಮೇ 30ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು. ಐಪಿಸಿ ಸೆಕ್ಷನ್ 109 ಮತ್ತು ಸೆಕ್ಷನ್ 13(2)ರ ಅಡಿ ಸತ್ಯೇಂದ್ರ ಜೈನ್ ಮತ್ತು ಇತರರ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದೆ.