AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದಿಲ್ಲದೇ ಎರಡನೇ ಮದುವೆಯಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ತೃಣಮೂಲ ಕಾಂಗ್ರೆಸ್​ನ ಸಂಸದೆ ಮಹುವಾ ಮೊಯಿತ್ರಾ ಸದದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ. 50 ವರ್ಷದ ಮಹುವಾ, 65 ವರ್ಷದ ಪಿನಾಕಿ ಮಿಶ್ರಾ ಅವರನ್ನು ವರಿಸಿದ್ದಾರೆ. ಪಿನಾಕಿ ಮಿಶ್ರಾ ಕೂಡ ರಾಜಕಾರಣಿಯಾಗಿದ್ದು, ಒಡಿಶಾದ ಪುರಿಯ ಸಂಸದರಾಗಿದ್ದಾರೆ. ಪಿನಾಕಿ ಮಿಶ್ರಾ ಬಿಜು ಜನತಾದಳದ ನಾಯಕ.ಇತ್ತೀಚೆಗೆ ಮಹುವಾ ಮೊಯಿತ್ರಾ ಜರ್ಮನಿಯಲ್ಲಿ ಪಿನಾಕಿ ಮಿಶ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದರು, ಅವರು ಸಿಂಧೂರ ಮತ್ತು ಆಭರಣಗಳೊಂದಿಗೆ ಕಾಣಿಸಿಕೊಂಡಿದ್ದರು.

ಸದ್ದಿಲ್ಲದೇ ಎರಡನೇ ಮದುವೆಯಾದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ
ಮಹುವಾ
ನಯನಾ ರಾಜೀವ್
|

Updated on: Jun 05, 2025 | 3:30 PM

Share

ಕೋಲ್ಕತ್ತಾ, ಜೂನ್ 05: ತೃಣಮೂಲ ಕಾಂಗ್ರೆಸ್​ನ ಸಂಸದೆ ಮಹುವಾ ಮೊಯಿತ್ರಾ(Mahua Moitra) ಸದದ್ದಿಲ್ಲದೇ ಎರಡನೇ ಮದುವೆಯಾಗಿದ್ದಾರೆ. 50 ವರ್ಷದ ಮಹುವಾ, 65 ವರ್ಷದ ಪಿನಾಕಿ ಮಿಶ್ರಾ ಅವರನ್ನು ವರಿಸಿದ್ದಾರೆ. ಪಿನಾಕಿ ಮಿಶ್ರಾ ಕೂಡ ರಾಜಕಾರಣಿಯಾಗಿದ್ದು, ಒಡಿಶಾದ ಪುರಿಯ ಸಂಸದರಾಗಿದ್ದಾರೆ. ಪಿನಾಕಿ ಮಿಶ್ರಾ ಬಿಜು ಜನತಾದಳದ ನಾಯಕ.ಇತ್ತೀಚೆಗೆ ಮಹುವಾ ಮೊಯಿತ್ರಾ ಜರ್ಮನಿಯಲ್ಲಿ ಪಿನಾಕಿ ಮಿಶ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದರು, ಅವರು ಸಿಂಧೂರ ಮತ್ತು ಆಭರಣಗಳೊಂದಿಗೆ ಕಾಣಿಸಿಕೊಂಡಿದ್ದರು.

ಮಹುವಾ ಮೊದಲು ಲಾರ್ಸ್​ ಬ್ರೋರ್ಸೆನ್ ಅವರನ್ನು ವಿವಾಹವಾಗಿದ್ದರು, ನಂತರ ವಿಚ್ಛೇದನ ಪಡೆದಿದ್ದರು. ಅವರು ವಕೀಲ ಜೈ ಅನಂತ್ ದೇಹಾದ್ರಾಯಿ ಅವರೊಂದಿಗೆ ಸುಮಾರು ಮೂರು ವರ್ಷಗಳ ಕಾಲ ಸಂಬಂಧದಲ್ಲಿದ್ದರು. ತೃಣಮೂಲ ಕಾಂಗ್ರೆಸ್ ಲೋಕಸಭಾ ಸಂಸದೆ ಮಹುವಾ ಮೊಯಿತ್ರಾ ಸದ್ದಿಲ್ಲದೆ ವಿವಾಹವಾಗದ್ದಾರೆ.

ಮಹುವಾ ಅವರ ವಿವಾಹ ರಹಸ್ಯವಾಗಿಯೇ ಇತ್ತು, ಮೇ 3ರಂದೇ ಅವರ ಮದುವೆಯಾಗಿದೆ. ಜರ್ಮನಿಯ ಚಿತ್ರ ವೈರಲ್ ಆದ ಬಳಿಕ, ಅವರ ಎರಡನೇ ಮದುವೆ ರಹಸ್ಯ ಬಹಿರಂಗಗೊಂಡಿದೆ. ರಾಜಕೀಯದಲ್ಲಿ ತಮ್ಮ ತೀಕ್ಷ್ಣವಾದ ಹೇಳಿಕೆಗಳು ಮತ್ತು ಬಲವಾದ ವಿರೋಧದ ನಿಲುವಿಗೆ ಹೆಸರುವಾಸಿಯಾದ ಮಹುವಾ, ತಮ್ಮ ಹಳೆಯ ಸಂಬಂಧಗಳು ಮತ್ತು ವೈಯಕ್ತಿಕ ನಿರ್ಧಾರಗಳಿಗಾಗಿ ಹಲವು ಬಾರಿ ಮುನ್ನಲೆಗೆ ಬಂದಿದ್ದರು.

ಮತ್ತಷ್ಟು ಓದಿ:ಪ್ರಶ್ನೆಗಾಗಿ ನಗದು ಆರೋಪ: ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆ

ಹಾಗೆಯೇ ವರದಿಗಳ ಪ್ರಕಾರ, ಪಿನಾಕಿ ಮೊದಲು ಸಂಗೀತಾ ಮಿಶ್ರಾ ಅವರನ್ನು ವಿವಾಹವಾದರು. ಇಬ್ಬರೂ ಜನವರಿ 16, 1984 ರಂದು ವಿವಾಹವಾಗಿದ್ದರಯ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಪಿನಾಕಿ ಈಗ ಮಹುವಾ ಮೊಯಿತ್ರಾ ಅವರನ್ನು ಮದುವೆಯಾಗಿದ್ದಾರೆ ಎನ್ನಲಾಗಿದೆ.

ಮಹುವಾ ಅವರು ಪ್ರಸ್ತುತ ಎರಡನೇ ಅವಧಿಗೆ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 2019 ರಲ್ಲಿ ಪಶ್ಚಿಮ ಬಂಗಾಳದ ಕೃಷ್ಣನಗರ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು, ಅಲ್ಲಿ ಅವರು ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಚೌಬೆ ಅವರನ್ನು ಸೋಲಿಸಿದರು. 2024 ರ ಚುನಾವಣೆಯಲ್ಲಿ ಅವರು ಬಿಜೆಪಿಯ ಅಮೃತಾ ರಾಯ್ ಅವರನ್ನು ಸೋಲಿಸಿ ಸ್ಥಾನವನ್ನು ಉಳಿಸಿಕೊಂಡರು. ಪ್ರಶ್ನೆಗಾಗಿ ನಗದು ದೂರಿನ ಕುರಿತು ನೈತಿಕ ಸಮಿತಿಯ ವರದಿಯನ್ನು ಆಧರಿಸಿ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಸದನದ ಸದಸ್ಯತ್ವದಿಂದ ಹೊರಹಾಕುವ ನಿರ್ಣಯವನ್ನು ಲೋಕಸಭೆ ಮಾಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ