Valentine’s Day: ನಾಯಿಗಳಿಗೆ ಮದುವೆ ಮಾಡಿಸಿ ಪ್ರೇಮಿಗಳ ದಿನದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆ

ಹಿಂದೂಪರ ಸಂಘಟನೆಯೊಂದು ಭಾರತದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಬಾರದು ಅದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳುತ್ತಾ ಹಲವೆಡೆ ಪ್ರತಿಭಟನೆ ಶುರು ಮಾಡಿವೆ.

Valentines Day: ನಾಯಿಗಳಿಗೆ ಮದುವೆ ಮಾಡಿಸಿ ಪ್ರೇಮಿಗಳ ದಿನದ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದ ಹಿಂದೂಪರ ಸಂಘಟನೆ
ನಾಯಿಗಳ ಮದುವೆ

Updated on: Feb 14, 2023 | 10:47 AM

ಇಂದು ಪ್ರೇಮಿಗಳ ದಿನ(Valentine’s Day) ಇಡೀ ದೇಶಾದ್ಯಂತ ಪ್ರೇಮಿಗಳ ಸಂಭ್ರಮ, ಪ್ರೇಮಿಗಳು ಪರಸ್ಪರ ಉಡುಗೊರೆ ನೀಡುವುದು, ಡೇಟಿಂಗ್, ಪ್ರೊಪೋಸ್ ಮಾಡುವುದು ಸೇರಿದಂತೆ ಇಡೀ ದಿನವನ್ನು ಅರ್ಥಪೂರ್ಣವಾಗಿಸಲು ಹಾತೊರೆಯುತ್ತಿದ್ದಾರೆ. ಆದರೆ ಹಿಂದೂಪರ ಸಂಘಟನೆಯೊಂದು ಭಾರತದಲ್ಲಿ ಪ್ರೇಮಿಗಳ ದಿನವನ್ನು ಆಚರಿಸಬಾರದು ಅದು ನಮ್ಮ ಸಂಸ್ಕೃತಿಯಲ್ಲ ಎಂದು ಹೇಳುತ್ತಾ ಹಲವೆಡೆ ಪ್ರತಿಭಟನೆ ಶುರು ಮಾಡಿವೆ.

ತಮಿಳುನಾಡಿನಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪ್ರೇಮಿಗಳ ದಿನವನ್ನು ವಿರೋಧಿಸಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ಹಿಂದೂ ಮುನ್ನಾನಿಯ ಕಾರ್ಯಕರ್ತರು 2 ಬೀದಿ ನಾಯಿಗಳನ್ನು ಕರೆತಂದು, ಅದಕ್ಕೆ ಬಟ್ಟೆ ಹೊದಿಸಿ, ಹಾರ ಹಾಕಿ, ಅಣುಕು ಮದುವೆ ಮಾಡಿಸಿದ್ದಾರೆ.

ಮತ್ತಷ್ಟು ಓದಿ: Valentine’s Day: ಪ್ರೇಮಿಗಳ ದಿನದ ಬಗ್ಗೆ ನಿಮಗೆ ಎಷ್ಟು ಗೊತ್ತು? ಕೆಲವು ಇಂಟರೆಸ್ಟಿಂಗ್​​​ ಸಂಗತಿಗಳು ಇಲ್ಲಿವೆ

ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ, ಇದನ್ನು ವಿರೋಧಿಸಿ ನಾವು ನಾಯಿಗಳ ಮದುವೆಯನ್ನು ನಡೆಸಿದ್ದೇವೆ ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ.

ಪ್ರೇಮಿಗಳ ದಿನದಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ಅನುಚಿತವಾಗಿ ವರ್ತಿಸುತ್ತಾರೆ. ಇದನ್ನು ವಿರೋಧಿಸಿ ಬೀದಿ ನಾಯಿಗಳ ಮದುವೆಯನ್ನು ಮಾಡಲಾಗಿದೆ ಎಂದು ಹಿಂದೂ ಮುನ್ನಾನಿ ಕಾರ್ಯಕರ್ತರು ಹೇಳಿದ್ದಾರೆ.