Valentine’s Day: ಪ್ರೇಮಿಗಳ ದಿನದ ಬಗ್ಗೆ ನಿಮಗೆ ಎಷ್ಟು ಗೊತ್ತು? ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ
ಪ್ರೇಮಿಗಳ ದಿನದಂದು ನೀವು ತಿಳಿದುಕೊಳ್ಳಬೇಕಾದ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ. . ವ್ಯಾಲೆಂಟೈನ್ಸ್ ಡೇ ಎಂಬುದು ಹೇಗೆ ಹುಟ್ಟಿಕೊಂಡಿತು. ಜೊತೆಗೆ ವ್ಯಾಲೆಂಟೈನ್ಸ್ ಡೇ ಕಾರ್ಡ್‌ಗಳಲ್ಲಿ ಕಾಣಿಸಿಕೊಳ್ಳುವ ಆಕರ್ಷಕವಾದ ಬಿಲ್ಲು ಮತ್ತು ಬಾಣ ಹಿಡಿದ ಕ್ಯುಪಿಡ್ನ ಹಿಂದಿನ ಕಥೆ ಏನು?
ಪ್ರೇಮಿಗಳ ದಿನ(Valentine’s Day) ಎಂದಾಕ್ಷಣ ಬರೀ ಪ್ರೇಮಿಗಳು, ಸಂಗಾತಿಗಳು ಮುದ್ದಾಡುವ ದಿನ ಎಂದು ಭಾವಿಸಬೇಡಿ. ಪ್ರೇಮಿಗಳ ದಿನದ ಹಿಂದಿನ ಕೆಲವು ಇಂಟರೆಸ್ಟಿಂಗ್ ಸಂಗತಿಗಳನ್ನು ತಿಳಿದುಕೊಳ್ಳಿ. ಈ ದಿನದ ಆಚರಣೆಯ ಹಿಂದಿನ ಸಾಕಷ್ಟು ವಿಷಯಗಳ ಬಗ್ಗೆ ನೀವು ತಿಳಿದುಕೊಳ್ಳಿ. ವ್ಯಾಲೆಂಟೈನ್ಸ್ ಡೇ ಎಂಬುದು ಹೇಗೆ ಹುಟ್ಟಿಕೊಂಡಿತು. ಜೊತೆಗೆ ವ್ಯಾಲೆಂಟೈನ್ಸ್ ಡೇ ಕಾರ್ಡ್‌ಗಳಲ್ಲಿ ಕಾಣಿಸಿಕೊಳ್ಳುವ ಆಕರ್ಷಕವಾದ ಬಿಲ್ಲು ಮತ್ತು ಬಾಣ ಹಿಡಿದ ಕ್ಯುಪಿಡ್ನ ಹಿಂದಿನ ಕಥೆ ಏನು?, ಪ್ರೇಮಿಗಳ ದಿನದಂದು ನೀವು ತಿಳಿದುಕೊಳ್ಳಬೇಕಾದ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ. ಪ್ರೇಮಿಗಳ ದಿನ ಇನ್ನೇನು ಸಮೀಪಿಸುತ್ತಿದೆ, ಆದ್ದರಿಂದ ನೀವು ಈ ವಿಷಯಗಳನ್ನು ತಿಳಿದುಕೊಳ್ಳಿ.
ಪ್ರೇಮಿಗಳ ದಿನದಂದು ನೀವು ತಿಳಿದುಕೊಳ್ಳಬೇಕಾದ ಕೆಲವು ಇಂಟರೆಸ್ಟಿಂಗ್ ಸಂಗತಿಗಳು ಇಲ್ಲಿವೆ:
ಹಾರ್ಟ್ ಶೇಪ್ ಚಾಕೊಲೇಟ್ ಬಾಕ್ಸ್:
1861 ರಲ್ಲಿ ಮೊದಲ ಬಾರಿ ಹೃದಯಾಕಾರದ ಚಾಕೊಲೇಟ್ ಬಾಕ್ಸ್ ಪರಿಚಯಿಸಲಾಯಿತು. ಕ್ಯಾಡ್ಬರಿ ಸಂಸ್ಥಾಪಕ ಜಾನ್ ಕ್ಯಾಡ್ಬರಿ ಅವರ ಮಗ ರಿಚರ್ಡ್ ಕ್ಯಾಡ್ಬರಿ, ಅಲಂಕಾರಿಕ ಚಾಕೊಲೇಟ್ ಬಾಕ್ಸ್ ವಿನ್ಯಾಸಗೊಳಿಸಲು ಪ್ರಾರಂಭಿಸಿದರು. 1861 ರಲ್ಲಿ ಪ್ರೇಮಿಗಳ ದಿನದ ಅಂಗವಾಗಿ ಮೊದಲ ಹೃದಯದ ಆಕಾರದ ಚಾಕೊಲೇಟ್ ಬಾಕ್ಸ್ ಪರಿಚಯಿಸಲಾಯಿತು. ಇಂದು ಪ್ರತಿ ವರ್ಷ 36 ಮಿಲಿಯನ್ ಹಾರ್ಟ್ ಶೇಪ್ ಚಾಕೊಲೇಟ್‌ಗಳು ಮಾರಾಟವಾಗುತ್ತವೆ.
ಪ್ರತಿ ವರ್ಷ 250 ಮಿಲಿಯನ್ ಗುಲಾಬಿ ಗಿಡಗಳನ್ನು ಬೆಳೆಸಲಾಗುತ್ತದೆ:
ಪ್ರತಿ ವರ್ಷ ವ್ಯಾಲೆಂಟೈನ್ಸ್ ಡೇ ತಯಾರಿಗಾಗಿ ಸುಮಾರು 250 ಮಿಲಿಯನ್ ಗುಲಾಬಿಗಳನ್ನು ಬೆಳೆಯಲಾಗುತ್ತದೆ. ಈಕ್ವೆಡಾರ್, ಕೀನ್ಯಾ ಅಥವಾ ಕೊಲಂಬಿಯಾ ದೇಶಗಳಿಂದ ಪ್ರಪಂಚದಾದ್ಯಂತ ಲಕ್ಷಾಂತರ ಗುಲಾಬಿಗಳನ್ನು ಸಾಗಿಸಲಾಗುತ್ತದೆ. ಪ್ರಪಂಚದಾದ್ಯಂತ ವ್ಯಾಲೆಂಟೈನ್ಸ್ ಡೇ ಆಚರಿಸುವುದರಿಂದ ಈ ಸಮಯದಲ್ಲಿ ಶತಕೋಟಿ ಡಾಲರ್ ಮೌಲ್ಯದ ಹೂವುಗಳು, ಉಡುಗೊರೆಗಳು ಮತ್ತು ಇತರ ವಸ್ತುಗಳನ್ನು ಪ್ರೇಮಿಗಾಗಿ ಖರೀದಿಸುತ್ತಾರೆ.
ಸಿಂಗಲ್ಸ್‌ಗಾಗಿ ಅಧಿಕೃತ ವ್ಯಾಲೆಂಟೈನ್ಸ್ ಡೇಗೆ ಪರ್ಯಾಯ ದಿನವಿದೆ:
ಪ್ರತಿ ವರ್ಷ ಫೆ. 14ರಂದು ಸಿಂಗಲ್ಸ್ಗಳಿಗಾಗಿ ಅಂತರಾಷ್ಟ್ರೀಯ ಕ್ವಿರ್ಕಾಲೋನ್ ದಿನವಿದೆ. ಈ ದಿನ ವ್ಯಾಲೆಂಟೈನ್ಸ್ ಡೇ ವಿರೋಧಿ ದಿನವಲ್ಲ, ಬದಲಾಗಿ ಸ್ವಯಂ ಪ್ರೀತಿ ಮತ್ತು ಸಂಬಂಧವನ್ನು ಬೆಳೆಸಲು ಈ ದಿನವನ್ನು ಆಚರಿಸಲಾಗುತ್ತದೆ.
ಕ್ಯುಪಿಡ್ ಹಿಂದಿನ ಕಥೆ:
ವ್ಯಾಲೆಂಟೈನ್ಸ್ ಡೇ ಕಾರ್ಡ್‌ಗಳಲ್ಲಿ ಕಾಣಿಸಿಕೊಳ್ಳುವ ಆಕರ್ಷಕವಾದ ಬಿಲ್ಲು ಮತ್ತು ಬಾಣ ಹಿಡಿದ ಕ್ಯುಪಿಡ್ಗಳನ್ನು ನೋಡಿರುತ್ತೀರಿ. ಆದರೆ ಗ್ರೀಕ್ನಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಎರೋಸ್ ಅಥವಾ ಪ್ರೀತಿಯ ದೇವರು ಎಂದು ಕರೆಯಲಾಗುತ್ತಿತ್ತು. ಅಮರ ವ್ಯಕ್ತಿಯಾಗಿದ್ದು, ಜನರನ್ನು ಪ್ರೀತಿಯಲ್ಲಿ ಬೀಳುವಂತೆ ಮಾಡುವ ಬೆದರಿಸುವ ಶಕ್ತಿಯನ್ನು ಹೊಂದಿದ್ದರು. ಆದರೆ 4 ನೇ ಶತಮಾನದ ನಂತರ ರೋಮನ್ನರು ಎರೋಸ್ನ್ನು ಬಿಲ್ಲು ಮತ್ತು ಬಾಣವನ್ನು ಹೊಂದಿರುವ ಮುದ್ದಾದ ಚಿಕ್ಕ ಹುಡುಗನ ಚಿತ್ರಕ್ಕೆ ಬದಲಾಯಿಸಿಕೊಂಡರು ಮತ್ತು ಕ್ಯುಪಿಡ್ ಎಂದು ಹೆಸರಿಸಲಾಯಿತು.
ಇದನ್ನೂ ಓದಿ: ಪ್ರೇಮಿಗಳ ದಿನದಂದು ನೀವು ಒಂಟಿ ಎಂದು ಚಿಂತಿಸದಿರಿ, ಈ ಟಿಪ್ಸ್ ಫಾಲೋ ಮಾಡಿ
ಸೇಂಟ್ ವ್ಯಾಲೆಂಟೈನ್:
ಸೇಂಟ್ ವ್ಯಾಲೆಂಟೈನ್ ಒಬ್ಬ ಪಾದ್ರಿಯಾಗಿದ್ದು, ಅವರು ಚಕ್ರವರ್ತಿಗಳ ಆದೇಶಗಳನ್ನು ಧಿಕ್ಕರಿಸಿದರು ಮತ್ತು ಯುದ್ಧದಿಂದ ಗಂಡಂದಿರನ್ನು ರಕ್ಷಿಸಲು ಒಂದು ಹುಡುಗಿಯನ್ನು ರಹಸ್ಯವಾಗಿ ವಿವಾಹವಾದರು. ಈವಿಚಾರ ತಿಳಿದು ಸೇಂಟ್ ವ್ಯಾಲೆಂಟೈನ್ನ್ನು ಚಕ್ರವರ್ತಿ ಕ್ಲಾಡಿಯಸ್ II ಗೋಥಿಕಸ್ ಶಿರಚ್ಛೇದನ ಮಾಡಿದನೆಂದು ಇತಿಹಾಸ ಹೇಳುತ್ತದೆ. ವ್ಯಾಲೆಂಟೈನ್ಸ್ ಡೇಗೆ ಅದರ ಪೋಷಕ ಸಂತ, ಸೇಂಟ್ ವ್ಯಾಲೆಂಟೈನ್ ಹೆಸರನ್ನು ಇಡಲಾಗಿದೆ ಎಂದು ಹೇಳಲಾಗುತ್ತದೆ.
ಲುಪರ್ಕಾಲಿಯಾ ಹಬ್ಬ:
ಇನ್ನೊಂದು ಉಲ್ಲೇಖಗಳ ಪ್ರಕಾರ ವ್ಯಾಲೆಂಟೈನ್ಸ್ ನ್ನು ರೋಮನ್ ಹಬ್ಬವಾದ ಲುಪರ್ಕಾಲಿಯಾ ಎಂದು ಹೇಳಲಾಗುತ್ತದೆ. ಲುಪರ್ಕಾಲಿಯಾ ಹಬ್ಬವನ್ನು ಧಾರ್ಮಿಕವನ್ನಾಗಿ ಚರ್ಚ್‌ನಲ್ಲಿ ಈ ದಿನವನ್ನು ವ್ಯಾಲೆಂಟೈನ್ಸ್ ಎಂದು ಆಚರಿಸಲಾಯಿತು ಎಂಬ ನಂಬಿಕೆಯಿದೆ. ಈ ಹಬ್ಬವನ್ನು ಕೃಷಿಯ ದೇವರು ಫೌನಸ್ ಮತ್ತು ರೋಮ್‌ನ ಸ್ಥಾಪಕರಾದ ರೊಮುಲಸ್ ಮತ್ತು ರೆಮುಸ್‌ಗೆ ನೆನಪಿಗಾಗಿ ಮಾಡಲಾಗಿದೆ ಎಂದು ಹೇಳಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:09 pm, Sun, 12 February 23