Valentine’s Day 2023: ಪ್ರೇಮಿಗಳ ದಿನದಂದು ನೀವು ಒಂಟಿ​​​​ ಎಂದು ಚಿಂತಿಸದಿರಿ, ಈ ಟಿಪ್ಸ್​​​ ಫಾಲೋ ಮಾಡಿ

ವ್ಯಾಲೆಂಟೈನ್ಸ್ ಡೇ ಸಮೀಪಿಸುತ್ತಿದೆ, ಆದರೆ ಪ್ರೇಮಿಯೇ ಇಲ್ಲ, ನಾನು ಹೇಗೆ ಆಚರಿಸಲಿ ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ನಿಮ್ಮ ಸಂತೋಷವನ್ನು ನೀವು ಕಂಡುಕೊಳ್ಳಲು ಈ ಕೆಳಗಿನ ಟಿಪ್ಸ್​​ ಫಾಲೋ ಮಾಡಿ.

Valentine's Day 2023: ಪ್ರೇಮಿಗಳ ದಿನದಂದು ನೀವು ಒಂಟಿ​​​​ ಎಂದು ಚಿಂತಿಸದಿರಿ, ಈ ಟಿಪ್ಸ್​​​ ಫಾಲೋ ಮಾಡಿ
ಪ್ರೇಮಿಗಳ ದಿನImage Credit source: Mix 95.7
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Feb 11, 2023 | 3:55 PM

ನೀವು ನಿಮ್ಮನ್ನು ಸಂತೋಷವಾಗಿರಿಸುವುದು ತುಂಬಾ ಮುಖ್ಯ. ಪ್ರೇಮಿಗಳ ದಿನದಂದು ಪ್ರೇಮಿಗಳು, ಸಂಗಾತಿಗಳು ಸಂಭ್ರಮದಿಂದ ವ್ಯಾಲೆಂಟೈನ್ಸ್ ಡೇ ಆಚರಿಸುತ್ತಿದ್ದರೆ, ನಿಮಗೆ ಯಾರು ಇಲ್ಲ ಎಂದು ಚಿಂತಿಸಿದಿರಿ. ಬದಲಾಗಿ ನಿಮ್ಮನ್ನು ನೀವು ಪ್ರೀತಿಸಿ. ಸ್ನೇಹಿತರೊಂದಿಗೆ ರೋಡ್ ಟ್ರಿಪ್ ಮಾಡುವುದರಿಂದ ಹಿಡಿದು ಸೋಲೋ ಟ್ರಿಪ್​​​​ ವರೆಗೆ ಎಲ್ಲ ಕ್ಷಣಗಳನ್ನು ಸಂತೋಷದಿಂದ ಆಚರಿಸಿ.ವ್ಯಾಲೆಂಟೈನ್ಸ್ ಡೇ ಎಂದರೆ ಬರೀ ಪ್ರೇಮಿಗಳು, ದಂಪತಿಗಳು ಮಾತ್ರ ಆಚರಿಸುವ ದಿನ ಮಾತ್ರವಲ್ಲ ಬದಲಾಗಿ ನೀವು ಪ್ರೀತಿಸುವ ನಿಮ್ಮ ಸ್ನೇಹಿತರು, ಕುಟುಂಬದವರು ಹಾಗೂ ನಿಮ್ಮ ಮುದ್ದಿನ ಸಾಕು ಪ್ರಾಣಿಯೊಂದಿಗೆ ನೀವು ಆಚರಿಸಿ ಆನಂದಿಸಿ. ಆದ್ದರಿಂದ ಪ್ರೇಮಿ ಇಲ್ಲದಿದ್ದರೂ ನೀವು ಸಂತೋಷವಾಗಿರಲು ಈ ಕೆಳಗಿನ ಟಿಪ್ಸ್​​​ ಫಾಲೋ ಮಾಡಿ.

ಪ್ರೇಮಿ ಇಲ್ಲದಿದ್ದರೂ ನೀವು ಸಂತೋಷವಾಗಿರಲು ಈ ಕೆಳಗಿನ ಟಿಪ್ಸ್​​​ ಫಾಲೋ ಮಾಡಿ:

ಸೋಲೋ ಟ್ರಿಪ್ ಪ್ಲಾನ್​​ ಮಾಡಿ:

ಈ ಪ್ರೇಮಿಗಳ ವಾರದಲ್ಲಿ ನೀವು ಒಂಟಿಯಾಗಿದ್ದೇನೆ ಎಂದು ಯೋಜಿಸದೇ ಸೋಲೋ ಟ್ರಿಪ್​​​ ಪ್ಲಾನ್​​​. ಇದು ನಿಮ್ಮನ್ನು ನೀವು ಕಂಡುಕೊಳ್ಳಲು ಹಾಗು ನಿಮ್ಮನ್ನು ನೀವು ಸಂತೋಷವಾಗಿಡಲು ಸಹಾಯ ಮಾಡುತ್ತದೆ. ಒಂದು ಒಳ್ಳೆಯ ಪ್ರಶಾಂತ ಸ್ಥಳವನ್ನು ಆಯ್ಕೆ ಮಾಡಿ ಸುಂದರ ಕ್ಷಣಗಳನ್ನು ಕಳೆಯಿರಿ.

ಹೊರಗೆ ಸಮಯ ಕಳೆಯಿರಿ:

ಪ್ರೇಮಿಗಳ ದಿನದಂದು ಮನೆಯಲ್ಲಿಯೇ ಕುಳಿತು ಚಿಂತಿಸುವ ಬದಲು ಹೊರಗಡೆ ಸುತ್ತಾಡಿ. ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನಿಮ್ಮ ನೆಚ್ಚಿನ ರೆಸ್ಟೋರೆಂಟ್‌ಗೆ ಭೇಟಿ ನೀಡಿ. ಮೂವಿ ಟಿಕೇಟ್​​​ ಬುಕ್​​ ಮಾಡಿ. ಹೀಗೆ ದಿನ ಪೂರ್ತಿ ಹೊರಗಡೆ ಸಮಯ ಕಳೆಯಿರಿ.

ಇದನ್ನೂ ಓದಿ: ನಿಮ್ಮಲ್ಲಿ ಈ ಗುಣವಿದ್ದರೆ ಮಾತ್ರ ನಿಮ್ಮ ಪ್ರೀತಿ ನಿಜವಾಗಿರಲು ಸಾಧ್ಯ

ಪಿಕ್​​ ನಿಕ್​​:

ಸುಂದರವಾದ ಸ್ಥಳವನ್ನು ಮೊದಲೇ ಹುಡುಕಿ. ಸರೋವರ, ಸುಂದರವಾದ ಉದ್ಯಾನವನ್ನು ಆಯ್ಕೆ ಮಾಡಿ ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸುಂದರಕ್ಷಣವನ್ನು ಕಳೆಯಿರಿ.

ಹೌಸ್ ಪಾರ್ಟಿ ಆಯೋಜಿಸಿ:

ನಿಮಗೆ ಹೊರಗಡೆ ಸುತ್ತಾಡಲು ಇಷ್ಟವಿಲ್ಲದಿದ್ದರೆ ಮನೆಯಲ್ಲಿಯೇ ನೀವು ಪಾರ್ಟಿಯನ್ನು ಆಯೋಜಿಸುವುದರ ಮೂಲಕ ಕುಟುಂಬದವರೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 3:53 pm, Sat, 11 February 23

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ