ಜಮ್ಮುವಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಇಂದು ಮುಂಜಾನೆ ಮತ್ತೆ 3 ಡ್ರೋನ್​​ಗಳ ಹಾರಾಟ; ಭದ್ರತಾ ಪಡೆಗಳು ಹೈ ಅಲರ್ಟ್​

ಜಮ್ಮುವಿನಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆಯಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸೆಕ್ಯೂರಿಟಿ ಫೋರ್ಸ್​ಗಳು ಹೈ ಅಲರ್ಟ್​​ನಲ್ಲಿದ್ದು, ನಿರಂತರವಾಗಿ ಗಮನಿಸುತ್ತಿವೆ.

ಜಮ್ಮುವಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಇಂದು ಮುಂಜಾನೆ ಮತ್ತೆ 3 ಡ್ರೋನ್​​ಗಳ ಹಾರಾಟ; ಭದ್ರತಾ ಪಡೆಗಳು ಹೈ ಅಲರ್ಟ್​
ಜಮ್ಮುವಿನಲ್ಲಿ ಭದ್ರತಾ ಪಡೆ ಸಿಬ್ಬಂದಿ ಹೈ ಅಲರ್ಟ್​​
Follow us
TV9 Web
| Updated By: Lakshmi Hegde

Updated on: Jun 30, 2021 | 9:40 AM

ಜಮ್ಮುವಿನಲ್ಲಿ ಇಂದು ಮತ್ತೆ ಡ್ರೋನ್​ಗಳು ಕಾಣಿಸಿಕೊಂಡಿವೆ. ಸತತ ನಾಲ್ಕನೇ ದಿನವೂ ಹೀಗೆ ಡ್ರೋನ್​ಗಳು ಹಾರಾಟ ನಡೆಸಿದ್ದು, ಭದ್ರತಾ ಪಡೆಗಳು ಹೈ ಅಲರ್ಟ್​ ಆಗಿವೆ. ಇಂದು ಜಮ್ಮುವಿನ ಮೂರು ಪ್ರತ್ಯೇಕ ಸ್ಥಳಗಳಲ್ಲಿ ಡ್ರೋನ್​​ಗಳು ಪತ್ತೆಯಾಗಿವೆ. ಇಂದೂ ಕೂಡ ಮುಂಜಾನೆ ಹೊತ್ತಲ್ಲಿ ಮಿರಾನ್​ ಸಾಹೀಬ್​, ಕಲುಚಕ್​ ಮತ್ತು ಕುಂಜ್ವಾನಿ ಪ್ರದೇಶಗಳಲ್ಲಿ ಡ್ರೋನ್​​ಗಳು ಹಾರಾಡಿದ್ದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಕಲುಚಕ್​ ಬಳಿ ಮುಂಜಾನೆ 4.40ರ ಹೊತ್ತಿಗೆ, 4.52ರ ಸಮಯದಲ್ಲಿ ಕುಂಜ್ವಾನಿಯಲ್ಲಿ ಡ್ರೋನ್​ ಹಾರಾಡಿದ್ದಾಗಿ ಭದ್ರತಾ ಪಡೆಗಳು ಮಾಹಿತಿ ನೀಡಿವೆ. ಕಳೆದ ನಾಲ್ಕು ದಿನಗಳಲ್ಲಿ ಜಮ್ಮು ಮತ್ತು ಅಲ್ಲಿನ ಸೇನಾ ಶಿಬಿರಗಳ ಸುತ್ತ ಸುಮಾರು ಏಳು ಡ್ರೋನ್​​ಗಳು ಹಾರಾಡಿವೆ.

ಜೂ.27ರಂದು ಜಮ್ಮುವಿನ ಏರ್​ಪೋರ್ಟ್​​ನಲ್ಲಿರುವ ಏರ್​ಫೋರ್ಸ್​ ಸ್ಟೇಶನ್​ನಲ್ಲಿ ಅವಳಿ ಸ್ಫೋಟವಾಗಿತ್ತು. ಈ ಸ್ಫೋಟಕವನ್ನು ಸ್ಫೋಟಿಸಲು ಡ್ರೋನ್​​ಗಳನ್ನೇ ಬಳಸಿದ್ದಾರೆಂದು ತನಿಖೆಯಿಂದ ಗೊತ್ತಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನ ಮೂಲದ ಉಗ್ರಸಂಘಟನೆಗಳು ಸ್ಫೋಟಕವನ್ನು ಡ್ರೋನ್​ ಮೂಲಕ ಎಸೆದಿದ್ದಾರೆ ಎಂದೂ ಹೇಳಲಾಗಿದೆ. ಜಮ್ಮು ಏರ್​ಪೋರ್ಟ್​​ನಿಂದ ಅಂತಾರಾಷ್ಟ್ರೀಯ ಗಡಿ ಕೇವಲ 14 ಕಿಮೀ ದೂರ ಇದೆ. ಈ ಏರ್​ಪೋರ್ಟ್​ ಏರ್​ಫೋರ್ಸ್​ ನಿಯಂತ್ರಣದಲ್ಲಿದ್ದು, ಏರ್​ ಟ್ರಾಫಿಕ್​ ಕಂಟ್ರೋಲ್​ ಕೂಡ ಹೊಂದಿದೆ. ನಾಗರಿಕ ವಿಮಾನ ನಿಲ್ದಾಣವೂ ಹೌದು. ಹೀಗೆ ಹಾರಾಟ ನಡೆಸುತ್ತಿರುವ ಡ್ರೋನ್​ಗಳ ಮೇಲೆ ಭದ್ರತಾ ಪಡೆ ಸಿಬ್ಬಂದಿ ಗುಂಡಿನ ದಾಳಿಯನ್ನೂ ನಡೆಸುತ್ತಿದ್ದಾರೆ.

ಜಮ್ಮುವಿನಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಉಗ್ರ ಚಟುವಟಿಕೆಯಿಂದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸೆಕ್ಯೂರಿಟಿ ಫೋರ್ಸ್​ಗಳು ಹೈ ಅಲರ್ಟ್​​ನಲ್ಲಿದ್ದು, ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು, ಗೃಹ ಸಚಿವ ಅಮಿತ್​ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಜತೆ ಉನ್ನತ ಮಟ್ಟದ ಸಭೆಯನ್ನೂ ನಡೆಸಿದ್ದಾರೆ.

ಇದನ್ನೂ ಓದಿ: Petrol Price Today: ಇಂದು ಪೆಟ್ರೋಲ್​, ಡೀಸೆಲ್ ಬೆಲೆಯಲ್ಲಿ ಬದಲಾವಣೆಗಳಿಲ್ಲ! ಪ್ರಮುಖ ನಗರಗಳಲ್ಲಿನ ಇಂಧನ ದರ ವಿವರ ಗಮನಿಸಿ

(Today Again 3 drones spotted near military camps in Jammu)

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು