ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ, 4ನೇ ತರಗತಿ ಬಾಲಕಿ ಸಾವು, ಸ್ಥಳದಲ್ಲಿ ರಕ್ತದ ಕಲೆಗಳೇ ಇಲ್ಲ
ಜೈಪುರದ ಖಾಸಗಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ 9 ವರ್ಷದ ಬಾಲಕಿ ಶನಿವಾರ ಸಾವನ್ನಪ್ಪಿದ್ದಾಳೆ. ಪೊಲೀಸರ ಪ್ರಕಾರ, ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕಿ ಕಂಬಿಬೇಲಿಯನ್ನು ಹತ್ತಿ ಜಿಗಿಯುತ್ತಿರುವುದು ಕಂಡುಬಂದಿದ್ದು, ಆ ಪ್ರದೇಶದ ಇತರ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಸುಮಾರು 47 ಅಡಿ ಎತ್ತರದಿಂದ ಬಿದ್ದ ಈ ಅಪಘಾತವು ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿತ್ತು.

ಜೈಪುರ, ನವೆಂಬರ್ 02: ಜೈಪುರದ ಖಾಸಗಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿ 9 ವರ್ಷದ ಬಾಲಕಿ ಶನಿವಾರ ಸಾವನ್ನಪ್ಪಿದ್ದಾಳೆ. ಪೊಲೀಸರ ಪ್ರಕಾರ, ಸಿಸಿಟಿವಿ ದೃಶ್ಯಾವಳಿಯಲ್ಲಿ ಬಾಲಕಿ ಕಂಬಿಬೇಲಿಯನ್ನು ಹತ್ತಿ ಜಿಗಿಯುತ್ತಿರುವುದು ಕಂಡುಬಂದಿದ್ದು, ಆ ಪ್ರದೇಶದ ಇತರ ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಸುಮಾರು 47 ಅಡಿ ಎತ್ತರದಿಂದ ಬಿದ್ದ ಈ ಬಾಲಕಿಯ ಸಾವು(Death) ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿತ್ತು.
ಪ್ರಾಥಮಿಕ ಸಾಕ್ಷ್ಯಾಧಾರಗಳು ಆತ್ಮಹತ್ಯೆ ಎಂದು ಸೂಚಿಸುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಕೃತ್ಯದ ಹಿಂದಿನ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ನೀರಜಾ ಮೋದಿ ಶಾಲೆಯ ನಾಲ್ಕನೇ ಮಹಡಿಯಿಂದ ಹಾರಿದ 4 ನೇ ತರಗತಿ ವಿದ್ಯಾರ್ಥಿನಿ ಅಮೈರಾಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಮಾನಸರೋವರ್ ಸ್ಟೇಷನ್ ಹೌಸ್ ಅಧಿಕಾರಿ (SHO) ಲಖನ್ ಖತಾನಾ ತಿಳಿಸಿದ್ದಾರೆ.
ಅಧಿಕಾರಿಗಳು ಶಾಲೆಗೆ ತಲುಪಿದಾಗ, ಬಾಲಕಿ ಬಿದ್ದಿದ್ದ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದ್ದು, ಯಾವುದೇ ರಕ್ತದ ಕಲೆಗಳು ಕಾಣಿಸುತ್ತಿರಲಿಲ್ಲ. ಬಾಲಕಿಯ ಪೋಷಕರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅನುಮಾನಾಸ್ಪದ ಸಾವು ಎಂದು ಆರೋಪಿಸಿದ್ದಾರೆ. ಶಿಕ್ಷಕರು ಮತ್ತು ಸಿಬ್ಬಂದಿಯ ಪಾತ್ರದ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದರು, ಶಾಲಾ ಆವರಣದಲ್ಲಿ ಇಂತಹ ಘಟನೆ ಹೇಗೆ ಸಂಭವಿಸಬಹುದು ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ಓದಿ: ದೇವನಹಳ್ಳಿ: ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಯತ್ನ; ಇಬ್ಬರ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ
ಘಟನೆಯ ಬಗ್ಗೆ ನೀರ್ಜಾ ಶಾಲಾ ಆಡಳಿತ ಮಂಡಳಿ ಮೌನ ವಹಿಸಿದೆ. ಶಾಲಾ ಆಡಳಿತ ಮಂಡಳಿ ಸರಿಯಾಗಿ ಮಾತುಕತೆ ನಡೆಸಿಲ್ಲ ಅಥವಾ ಪ್ರಾಂಶುಪಾಲರ ಸಂಪರ್ಕ ಸಂಖ್ಯೆಯನ್ನು ಹಂಚಿಕೊಳ್ಳಲು ಮುಂದೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಶಿಕ್ಷಣ ಇಲಾಖೆಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಹೇಳಿದ್ದಾರೆ.
ಅಮೈರಾ ಪೋಷಕರಿಗೆ ಅವಳೊಬ್ಬಳೇ ಮಗಳು. ಆಕೆಯ ತಾಯಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಾರೆ ಮತ್ತು ಆಕೆಯ ತಂದೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ ಮತ್ತು ಅವರು ಮಾನಸರೋವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಎಸ್‌ಎಫ್‌ಎಸ್ ಪ್ರದೇಶದ ನಿವಾಸಿಗಳು. ಘಟನೆಯ ಸುಮಾರು ಆರು ಗಂಟೆಗಳ ನಂತರ, ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ನಂತರ ಅವರು ಎಫ್‌ಐಆರ್ ದಾಖಲಿಸಿದ್ದಾರೆ. ತನಿಖೆಯ ನಂತರ ಅಮೈರಾ ಸಾವಿನ ಹಿಂದಿನ ನಿಖರವಾದ ಕಾರಣ ಹೊರಬರಲಿದೆ ಎಂದು ಎಸ್‌ಎಚ್‌ಒ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




