ಮೀರತ್: ಶೋರೂಂನ ಲಿಫ್ಟ್‌ನಲ್ಲಿ ತಲೆ ಸಿಲುಕಿ ಉದ್ಯಮಿ ಸಾವು
ಶೋರೂಂನ ಲಿಫ್ಟ್(Lift)ನಲ್ಲಿ ತಲೆ ಸಿಲುಕಿ ಉದ್ಯಮಿಯೊಬ್ಬರು ಮೃತಪಟ್ಟಿರುವ ಘಟನೆ ಮೀರತ್ನ ಸೂರಜ್ಕುಂಡದಲ್ಲಿ ನಡೆದಿದೆ. ದೇವನಗರದಲ್ಲಿರುವ ತಮ್ಮ ಶೋ ರೂಂನಲ್ಲಿ ಲಿಫ್ಟ್‌ನಲ್ಲಿ ಸಿಲುಕಿಕೊಂಡು 63 ವರ್ಷದ ಉದ್ಯಮಿ ಮೃತಪಟ್ಟಿದ್ದಾರೆ.ಉದ್ಯಮಿ ಹರ್ವಿಂದರ್ ಸಿಂಗ್ ದುರಂತ ಸಾವು ಕಂಡಿದ್ದಾರೆ. ಇಂಡಿಯನ್ ಸ್ಪೋರ್ಟ್ಸ್ ಹೌಸ್ ಮಾಲೀಕ ಸಿಂಗ್ ಶನಿವಾರ ಸಂಜೆ ಎರಡನೇ ಮಹಡಿಗೆ ಹೋಗಲು ಕಾರ್ಗೋ ಲಿಫ್ಟ್ ಬಳಸುತ್ತಿದ್ದಾಗ ವಿದ್ಯುತ್ ಕಡಿತಗೊಂಡಿತ್ತು.

ಮೀರತ್, ಜುಲೈ 27: ಶೋರೂಂನ ಲಿಫ್ಟ್(Lift)ನಲ್ಲಿ ತಲೆ ಸಿಲುಕಿ ಉದ್ಯಮಿಯೊಬ್ಬರು ಮೃತಪಟ್ಟಿರುವ ಘಟನೆ ಮೀರತ್ನ ಸೂರಜ್ಕುಂಡದಲ್ಲಿ ನಡೆದಿದೆ. ದೇವನಗರದಲ್ಲಿರುವ ತಮ್ಮ ಶೋ ರೂಂನಲ್ಲಿ ಲಿಫ್ಟ್‌ನಲ್ಲಿ ಸಿಲುಕಿಕೊಂಡು 63 ವರ್ಷದ ಉದ್ಯಮಿ ಮೃತಪಟ್ಟಿದ್ದಾರೆ.ಉದ್ಯಮಿ ಹರ್ವಿಂದರ್ ಸಿಂಗ್ ದುರಂತ ಸಾವು ಕಂಡಿದ್ದಾರೆ. ಇಂಡಿಯನ್ ಸ್ಪೋರ್ಟ್ಸ್ ಹೌಸ್ ಮಾಲೀಕ ಸಿಂಗ್ ಶನಿವಾರ ಸಂಜೆ ಎರಡನೇ ಮಹಡಿಗೆ ಹೋಗಲು ಕಾರ್ಗೋ ಲಿಫ್ಟ್ ಬಳಸುತ್ತಿದ್ದಾಗ ವಿದ್ಯುತ್ ಕಡಿತಗೊಂಡಿತ್ತು.
ತಲೆಯನ್ನು ಹೊರಗೆ ತಲೆ ಹಾಕಿ ನೋಡುತ್ತಿದ್ದಾಗ ಏಕಾಏಕಿ ವಿದ್ಯುತ್ ಆನ್ ಆಗಿ ಲಿಫ್ಟ್ ಚಲಿಸಲು ಆರಂಭಿಸಿತ್ತು. ಅವರ ತಲೆ ಲಿಫ್ಟ್ ಮಧ್ಯೆ ಸಿಕ್ಕಿಬಿದ್ದಿತ್ತು. ಸಿಸಿಟಿವಿಯಲ್ಲಿ ಸಿಬ್ಬಂದಿ ಅವರನ್ನು ಗಮನಿಸಲು ಸುಮಾರು 30 ನಿಮಿಷಗಳು ಬೇಕಾಯಿತು. ನೆರೆಹೊರೆಯವರ ಸಹಾಯದಿಂದ, ಲಿಫ್ಟ್ ಅನ್ನು ಬಲವಂತವಾಗಿ ತೆರೆಯಲಾಯಿತು, ಮತ್ತು ಸಿಂಗ್ ಅವರ ದೇಹವನ್ನು ಹೊರತೆಗೆದು ನುತಿಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮತ್ತಷ್ಟು ಓದಿ: Video: ನಾನು ಬರೋದು ಕಾಣ್ಸಿಲ್ವಾ, ಲಿಫ್ಟ್ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸಿಂಗ್ ಅವರ ಪತ್ನಿ ಮತ್ತು ಇಬ್ಬರು ಪುತ್ರರು ಬದುಕುಳಿದಿದ್ದಾರೆ. ಕುಟುಂಬದಿಂದ ಆರಂಭಿಕ ಹಿಂಜರಿಕೆಯ ಹೊರತಾಗಿಯೂ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಮತ್ತೊಂದು ಘಟನೆ
ಲಿಫ್ಟ್‌ನಲ್ಲಿ ಸಿಲುಕಿ ಶಾಲಾ ಮಕ್ಕಳ ಎದುರೇ 26 ವರ್ಷದ ಶಿಕ್ಷಕಿ ಸಾವು ಮಹಾರಾಷ್ಟ್ರದ ಮುಂಬೈನಲ್ಲಿ (Mumbai) 26 ವರ್ಷದ ಶಿಕ್ಷಕಿಯೊಬ್ಬರು ಶಾಲೆಯ ಕಟ್ಟಡದ ಲಿಫ್ಟ್‌ನಲ್ಲಿ (Lift) ಸಿಲುಕಿ, ಗಾಯಗೊಂಡು ಸಾವನ್ನಪ್ಪಿದ್ದರು. ಮುಂಬೈನ ಮಲಾಡ್ ವೆಸ್ಟ್‌ನ ಎಸ್‌ವಿ ರಸ್ತೆಯಲ್ಲಿರುವ ಚಿಂಚಲಿ ಸಿಗ್ನಲ್ ಬಳಿಯ ಸೇಂಟ್ ಮೇರಿ ಇಂಗ್ಲಿಷ್ ಶಾಲೆಯಲ್ಲಿ ಮಧ್ಯಾಹ್ನ 1ರಿಂದ 2 ಗಂಟೆಯ ನಡುವೆ ಈ ಘಟನೆ ನಡೆದಿದೆ. ಮೃತ ಶಿಕ್ಷಕಿಯನ್ನು ಜಿನಾಲ್ ಫರ್ನಾಂಡಿಸ್ ಎಂದು ಗುರುತಿಸಲಾಗಿದೆ.
ಈ ವರ್ಷ ಜೂನ್‌ನಲ್ಲಿ ಅವರು ಶಾಲೆಗೆ ಸಹಾಯಕ ಶಿಕ್ಷಕಿಯಾಗಿ ಸೇರಿದ್ದರು. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಶಾಲೆಯ ಕಟ್ಟಡದ 6ನೇ ಮಹಡಿಯಲ್ಲಿ ಜಿನಾಲ್ ಫರ್ನಾಂಡಿಸ್ ತರಗತಿಯನ್ನು ಮುಗಿಸಿ ಆಫೀಸ್ ರೂಮಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಅವರು 6ನೇ ಮಹಡಿಯಲ್ಲಿ ಲಿಫ್ಟ್‌ನೊಳಗೆ ಪ್ರವೇಶಿಸಿದಾಗ ಲಿಫ್ಟ್ ಇದ್ದಕ್ಕಿದ್ದಂತೆ ಮೇಲಕ್ಕೆ ಚಲಿಸಲು ಪ್ರಾರಂಭಿಸಿತು. ಆದರೆ ಅವರ ಒಂದು ಕಾಲು ಲಿಫ್ಟ್‌ನೊಳಗೆ ಮತ್ತು ಅವರ ದೇಹವು ಹೊರಗೆ ಸಿಲುಕಿಕೊಂಡಿತ್ತು. ಇದರಿಂದಾಗಿ ಅವರಿಗೆ ಗಂಭೀರ ಗಾಯಗಳಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




