ಉತ್ತರಾಖಂಡದಲ್ಲಿ 35 ಕಿಮೀ ದೂರ ಹಿಮ್ಮುಖವಾಗಿ ಚಲಿಸಿದ ರೈಲು; ಅದರ ವೇಗಕ್ಕೆ ಪ್ರಯಾಣಿಕರು ಕಂಗಾಲು !

| Updated By: Digi Tech Desk

Updated on: Mar 18, 2021 | 2:53 PM

ಖಟಿಮಾ ಎಂಬಲ್ಲಿ ರೈಲು ನಿಂತ ಬಳಿಕ, ಪ್ರಯಾಣಿಕರನ್ನು ತನಕ್​ಪುರಕ್ಕೆ ಬಸ್​​ ಮೂಲಕ ಕಳಿಸಲಾಗಿದೆ. ರೈಲು ಹಿಮ್ಮುಖವಾಗಿ ಚಲಿಸಿದೆ ಹೊರತು ಯಾರಿಗೂ ಯಾವುದೇ ಅಪಾಯವಾಗಲಿಲ್ಲ.

ಉತ್ತರಾಖಂಡದಲ್ಲಿ 35 ಕಿಮೀ ದೂರ ಹಿಮ್ಮುಖವಾಗಿ ಚಲಿಸಿದ ರೈಲು; ಅದರ ವೇಗಕ್ಕೆ ಪ್ರಯಾಣಿಕರು ಕಂಗಾಲು !
ಹಿಮ್ಮುಖವಾಗಿ ಚಲಿಸಿದ ರೈಲು
Follow us on

ರೈಲು ಹಿಮ್ಮುಖವಾಗಿ ಚಲಿಸಿದ್ದನ್ನು ನೀವೆಲ್ಲಾದರೂ ನೋಡಿದ್ದೀರಾ? ಅರೆ, ಟ್ರೇನ್​ ಹಿಮ್ಮುಖವಾಗಿ ಚಲಿಸಲು ಹೇಗೆ ಸಾಧ್ಯ ಎಂದು ನೀವು ಯೋಚಿಸುತ್ತಿದ್ದರೆ.. ವೈರಲ್​ ಆಗಿರುವ ಈ ವಿಡಿಯೋವನ್ನು ನೋಡಲೇಬೇಕು. ದೆಹಲಿಯಿಂದ ಉತ್ತರಾಖಂಡಕ್ಕೆ ಸಂಚರಿಸುತ್ತಿದ್ದ, ಪ್ರಯಾಣಿಕರಿದ್ದ ರೈಲು 35 ಕಿ.ಮೀ.ದೂರ ಹಿಮ್ಮುಖವಾಗಿ ಚಲಿಸಿದೆ. ಹೀಗೆ ಅಷ್ಟು ದೂರ ಹಿಮ್ಮುಖವಾಗಿಯೇ, ವೇಗವಾಗಿ ಚಲಿಸಿದ ರೈಲು ಕೊನೆಗೆ ಉತ್ತರಾಖಂಡ ಖಟಿಮಾ ಎಂಬಲ್ಲಿ ನಿಂತಿದೆ.

ಪೂರ್ಣಗಿರಿ ಜನಶತಾಬ್ದಿ ಎಕ್ಸ್​​ಪ್ರೆಸ್​ ರೈಲು ದೆಹಲಿಯಿಂದ ಉತ್ತರಾಖಂಡ್​ದ ತನಕ್​ಪುರಕ್ಕೆ ತೆರಳುತ್ತಿತ್ತು. ಆಗ ರೈಲ್ವೆ ಹಳಿಯ ಮೇಲೆ ಅಡ್ಡಾಡುತ್ತಿದ್ದ ಪ್ರಾಣಿಯನ್ನು ಕಂಡ ರೈಲು ಚಾಲಕ, ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಬ್ರೇಕ್​ ಹಾಕಿದ್ದಾರೆ. ಇದಾದ ಬಳಿಕ ಚಾಲಕ ಲೊಕೊಮೋಟಿವ್​ ಮೇಲೆ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದಾರೆ. ಹಾಗಾಗಿ ರೈಲು ಒಂದೇ ಸಮ ಹಿಮ್ಮುಖವಾಗಿ ಚಲಿಸಿದೆ. ಅದರಲ್ಲಿದ್ದ ಪ್ರಯಾಣಿಕರಂತೂ ತುಂಬ ಕಂಗಾಲಾಗಿದ್ದರು.

ಖಟಿಮಾ ಎಂಬಲ್ಲಿ ರೈಲು ನಿಂತ ಬಳಿಕ, ಪ್ರಯಾಣಿಕರನ್ನು ತನಕ್​ಪುರಕ್ಕೆ ಬಸ್​​ ಮೂಲಕ ಕಳಿಸಲಾಗಿದೆ. ರೈಲು ಹಿಮ್ಮುಖವಾಗಿ ಚಲಿಸಿದೆ ಹೊರತು ಯಾರಿಗೂ ಯಾವುದೇ ಅಪಾಯವಾಗಲಿಲ್ಲ. ಲೋಕೋ ಪೈಲಟ್​ ಮತ್ತು ಗಾರ್ಡ್​​ನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಈಶಾನ್ಯ ರೈಲ್ವೆ ಆಡಳಿತ ತಿಳಿಸಿದೆ.

Published On - 2:32 pm, Thu, 18 March 21