AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಯಾಣಿಕರೇ ದಯವಿಟ್ಟು ಗಮನಿಸಿ, ರೈಲಿನಲ್ಲಿ ಈ ವಸ್ತುವನ್ನು ಕೊಂಡೊಯ್ದರೆ ಜೈಲೇ ಗತಿ

ಆರಾಮದಾಯಕ ಹಾಗೆಯೇ ಟಿಕೆಟ್ ಹಣ ಕೂಡ ಕಡಿಮೆಯಾಗಿರುವ ಕಾರಣ ಜನರು ಬಸ್ ಬದಲು ರೈಲು ಪ್ರಯಾಣ ಆಯ್ದುಕೊಳ್ಳುತ್ತಾರೆ. ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವಾದ ಭಾರತೀಯ ರೈಲ್ವೆ(Indian Railway) ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಸುರಕ್ಷಿತ ಮತ್ತು ಸುಗಮ ಕಾರ್ಯಾಚರಣೆ , ರೈಲ್ವೆ ಪ್ರಯಾಣಿಕರಿಗಾಗಿ ವಿವರವಾದ ನಿಯಮಗಳನ್ನು ಜಾರಿಗೊಳಿಸಿದೆ,ಅವುಗಳಲ್ಲಿ ಹಲವು ಇನ್ನೂ ಸಾಮಾನ್ಯ ಪ್ರಯಾಣಿಕರಿಗೆ ಪರಿಚಯವಿಲ್ಲ.ಈ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ಕೂಡ ವಿಧಿಸಬಹುದು.

ಪ್ರಯಾಣಿಕರೇ ದಯವಿಟ್ಟು ಗಮನಿಸಿ, ರೈಲಿನಲ್ಲಿ ಈ ವಸ್ತುವನ್ನು ಕೊಂಡೊಯ್ದರೆ ಜೈಲೇ ಗತಿ
ರೈಲು
ನಯನಾ ರಾಜೀವ್
|

Updated on: Nov 26, 2025 | 9:37 AM

Share

ನವದೆಹಲಿ, ನವೆಂಬರ್ 26: ಆರಾಮದಾಯಕ ಹಾಗೆಯೇ ಟಿಕೆಟ್ ಹಣ ಕೂಡ ಕಡಿಮೆಯಾಗಿರುವ ಕಾರಣ ಜನರು ಬಸ್ ಬದಲು ರೈಲು ಪ್ರಯಾಣ ಆಯ್ದುಕೊಳ್ಳುತ್ತಾರೆ. ವಿಶ್ವದ ನಾಲ್ಕನೇ ಅತಿದೊಡ್ಡ ರೈಲು ಜಾಲವಾದ ಭಾರತೀಯ ರೈಲ್ವೆ(Indian Railway) ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಸುರಕ್ಷಿತ ಮತ್ತು ಸುಗಮ ಕಾರ್ಯಾಚರಣೆಗಾಗಿ ರೈಲ್ವೆ ಪ್ರಯಾಣಿಕರಿಗಾಗಿ ವಿವರವಾದ ನಿಯಮಗಳನ್ನು ಜಾರಿಗೊಳಿಸಿದೆ,ಅವುಗಳಲ್ಲಿ ಹಲವು ಇನ್ನೂ ಸಾಮಾನ್ಯ ಪ್ರಯಾಣಿಕರಿಗೆ ಪರಿಚಯವಿಲ್ಲ.ಈ ನಿಯಮಗಳನ್ನು ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಜೈಲು ಶಿಕ್ಷೆ ಕೂಡ ವಿಧಿಸಬಹುದು.

ಹೆಚ್ಚಿನ ಪ್ರಯಾಣಿಕರಿಗೆ ಸ್ಟೌವ್‌ಗಳು, ಗ್ಯಾಸ್ ಸಿಲಿಂಡರ್‌ಗಳು, ಸುಡುವ ರಾಸಾಯನಿಕಗಳು, ಪಟಾಕಿಗಳು, ಗ್ರೀಸ್ ಮತ್ತು ಸ್ಫೋಟಕಗಳಂತಹ ವಸ್ತುಗಳನ್ನು ರೈಲುಗಳಲ್ಲಿ ನಿಷೇಧಿಸಲಾಗಿದೆ ಎಂದು ತಿಳಿದಿದೆ. ಆದರೆ ತಿನ್ನುವ ವಸ್ತು ಕೂಡ ಅಪಾಯವನ್ನು ತಂದೊಡ್ಡಬಹುದು ಎಂಬುದು ನಿಮಗೆ ಗೊತ್ತೇ?, ಭಾರತೀಯ ರೈಲ್ವೆಯಲ್ಲಿ ಒಣಗಿದ ಕಾಯನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಇದರ ಹೊರ ಕವಚವು ಒರಟಾಗಿರುತ್ತದೆ, ಮತ್ತು ನಾರುಗಳಿರುತ್ತವೆ ಇದು ಬೆಂಕಿಯ ಅಪಾಯವನ್ನುಂಟು ಮಾಡಬಹುದು ಎಂದು ಭಾವಿಸಲಾಗಿದೆ.ರೈಲ್ವೆ ಕಾಯ್ದೆಯ ಸೆಕ್ಷನ್ 164 ಮತ್ತು 165 ರ ಅಡಿಯಲ್ಲಿ  ಒಣ ತೆಂಗಿನಕಾಯಿಯನ್ನು ಅಪಾಯ ವರ್ಗಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಮತ್ತಷ್ಟು ಓದಿ:ಭಾರತೀಯ ರೈಲ್ವೆ ಗರಿಮೆ… ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ಎಂಜಿನ್ ಅಭಿವೃದ್ದಿ; ಅಗ್ಗದ ಪ್ರಯಾಣಕ್ಕೆ ಅಮೃತ್ ಭಾರತ್ 2.0

ಯಾರದ್ದೇ ಬ್ಯಾಗ್​ನಲ್ಲಿ ಒಣ ತೆಂಗಿನಕಾಯಿ ಕಂಡುಬಂದರೆ ಭಾರಿ ದಂಡ ತೆರಬೇಕಾಗುತ್ತದೆ ಅಥವಾ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ರೈಲ್ವೆ ಕಾಯ್ದೆಯ ಸೆಕ್ಷನ್ 164 ರ ಅಡಿಯಲ್ಲಿ, ಅನುಮತಿಯಿಲ್ಲದೆ ಸುಡುವ ಅಥವಾ ಅಪಾಯಕಾರಿ ವಸ್ತುಗಳನ್ನು ಸಾಗಿಸುವುದರಿಂದ 1,000 ರೂ.ನಿಂದ ರಿಂದ 5,000 ಸಾವಿರದವರೆಗೂ ದಂಡ ವಿಧಿಸಬಹುದು. ಗಂಭೀರ ಪ್ರಕರಣಗಳಲ್ಲಿ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದು.

ಧಾರ್ಮಿಕ ಉದ್ದೇಶಗಳಿಗಾಗಿ ಪ್ರಯಾಣಿಸುವ ಪ್ರಯಾಣಿಕರು ಪೂಜಾ ಸಾಮಗ್ರಿಗಳ ಜೊತೆಗೆ ಒಂದು ಅಥವಾ ಎರಡು ತೆಂಗಿನಕಾಯಿಗಳನ್ನು ಕೊಂಡೊಯ್ಯಲು ಅನುಮತಿ ಇದೆ. ಆದಾಗ್ಯೂ, ದೊಡ್ಡ ಪ್ರಮಾಣದಲ್ಲಿ ತೆಂಗಿನಕಾಯಿಗಳನ್ನು ಸಾಗಿಸುವುದು, ವಿಶೇಷವಾಗಿ ದೇವಾಲಯದ ಅರ್ಪಣೆಗಾಗಿ ಡಜನ್‌ಗಟ್ಟಲೆ ಸಾಗಿಸುವುದನ್ನು ನಿಷೇಧಿಸಲಾಗಿದೆ.

ಹೆಚ್ಚುವರಿಯಾಗಿ, 1898 ರ ಭಾರತೀಯ ರೈಲ್ವೆ ಕಾಯ್ದೆಯಡಿಯಲ್ಲಿ ರೈಲುಗಳಲ್ಲಿ ಮದ್ಯಪಾನ ಮಾಡುವುದು ಅಥವಾ ಮಾದಕ ದ್ರವ್ಯಗಳ ಪ್ರಭಾವದಲ್ಲಿ ಪ್ರಯಾಣಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಪ್ರಯಾಣಿಕರು ಕುಡಿದಿರುವುದು, ಅಶಿಸ್ತಿನ ವರ್ತನೆ ಅಥವಾ ಅಡಚಣೆ ಉಂಟುಮಾಡುವುದು ಕಂಡುಬಂದರೆ ಅವರ ಟಿಕೆಟ್‌ಗಳು ಅಥವಾ ರೈಲ್ವೆ ಪಾಸ್‌ಗಳನ್ನು ಸ್ಥಳದಲ್ಲೇ ರದ್ದುಗೊಳಿಸಬಹುದು.

ಹೈಡ್ರೋಕ್ಲೋರಿಕ್ ಆಮ್ಲ, ಶೌಚಾಲಯ ಸ್ವಚ್ಛಗೊಳಿಸುವ ಆಮ್ಲ, ಹುಲ್ಲು, ಒಣಗಿದ ಎಲೆಗಳು, ತ್ಯಾಜ್ಯ ಕಾಗದದ ಬಂಡಲ್‌ಗಳು, ಎಣ್ಣೆ, ಗ್ರೀಸ್ ಮತ್ತು ಇತರ ಸುಡುವ ಅಥವಾ ಅಪಾಯಕಾರಿ ವಸ್ತುಗಳಂತಹ ಅಪಾಯಕಾರಿ ದ್ರವಗಳನ್ನು ಕೊಂಡೊಯ್ಯುವಂತಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ