Aircraft Crash: ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಟ್ರೈನಿ ಪೈಲಟ್ ಪ್ರಾಣಾಪಾಯದಿಂದ ಪಾರು

Trainer Aircraft Crashes in Madhya Pradesh: ವಿಮಾನದಲ್ಲಿ ತರಬೇತಿ ಪಡೆಯುತ್ತಿದ್ದ 22 ವರ್ಷದ ಮಹಿಳಾ ಟ್ರೈನಿ ಪೈಲಟ್ ಸುರಕ್ಷಿತರಾಗಿದ್ದಾರೆ.

Aircraft Crash: ಮಧ್ಯಪ್ರದೇಶದಲ್ಲಿ ತರಬೇತಿ ವಿಮಾನ ಪತನ; ಮಹಿಳಾ ಟ್ರೈನಿ ಪೈಲಟ್ ಪ್ರಾಣಾಪಾಯದಿಂದ ಪಾರು
ಮಧ್ಯಪ್ರದೇಶದಲ್ಲಿ ವಿಮಾನ ಪತನ
Follow us
| Updated By: ಸುಷ್ಮಾ ಚಕ್ರೆ

Updated on: Jul 17, 2021 | 6:40 PM

ಭೂಪಾಲ್: ಮಧ್ಯಪ್ರದೇಶ ರಾಜ್ಯದ ಸಾಗರ್ ಜಿಲ್ಲೆಯ ಧಾನ ಪ್ರದೇಶದಲ್ಲಿ ತರಬೇತಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿದ್ದ ತರಬೇತುದಾರ ಮಹಿಳಾ ಟ್ರೈನಿ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಶಿಮೆಸ್ ಏವಿಯೇಷನ್ ಅಕಾಡೆಮಿಗೆ ಸೇರಿದ ಸಿಂಗಲ್ ಎಂಜಿನ್ ವಿಮಾನ ಪತನಗೊಳ್ಳಲು ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ತಿಳಿಸಿದ್ದಾರೆ.

ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ವಿಮಾನದಲ್ಲಿ ತರಬೇತಿ ಪಡೆಯುತ್ತಿದ್ದ 22 ವರ್ಷದ ಮಹಿಳಾ ಟ್ರೈನಿ ಪೈಲಟ್ ಸುರಕ್ಷಿತರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ರನ್​ವೇಯಲ್ಲಿ ಆಯತಪ್ಪಿದ ವಿಮಾನ ಪೊದೆಗಳತ್ತ ಸಾಗಿ ಮಗುಚಿಬಿದ್ದಿದೆ.

ಮಧ್ಯಪ್ರದೇಶದಲ್ಲಿ ಕಳೆದ 18 ತಿಂಗಳಲ್ಲಿ ನಡೆಯುತ್ತಿರುವ 2ನೇ ವಿಮಾನ ಪತನ ಇದಾಗಿದೆ. 2020ರಲ್ಲಿ ಜನವರಿ ತಿಂಗಳಲ್ಲಿ ಇದೇ ರೀತಿ ತರಬೇತಿ ವಿಮಾನ ಪತನಗೊಂಡಿತ್ತು. ರನ್​ವೇಯಲ್ಲಿ ವಿಮಾನ ಪತನವಾಗಿ ವಿಮಾನದಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದರು.

ಇದನ್ನೂ ಓದಿ:

ಸೈಬೀರಿಯಾ ಬಳಿ ನಾಪತ್ತೆಯಾಗಿದ್ದ ರಷ್ಯಾದ ವಿಮಾನ ಪತ್ತೆ; 18 ಪ್ರಯಾಣಿಕರೂ ಸೇಫ್

ಯಡಿಯೂರಪ್ಪ ರಾಜೀನಾಮೆ..? ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಯಡಿಯೂರಪ್ಪಗೆ ವಾಪಸ್​ ಬರುವಂತೆ ಅಮಿತ್ ಶಾ ಸೂಚಿಸಿದ್ದೇಕೆ?

(Trainer Aircraft Crashes in Madhya Pradesh Sagar District Female Trainee Safe Plane Crash)