ಸೈಬೀರಿಯಾ ಬಳಿ ನಾಪತ್ತೆಯಾಗಿದ್ದ ರಷ್ಯಾದ ವಿಮಾನ ಪತ್ತೆ; 18 ಪ್ರಯಾಣಿಕರೂ ಸೇಫ್
28 ಜನರು ಪ್ರಯಾಣಿಸಬಹುದಾದ ವಿಮಾನವೊಂದು ಸೈಬೀರಿಯಾದ ಟಾಮ್ಸ್ಕ್ ಎಂಬಲ್ಲಿ ನಾಪತ್ತೆಯಾಗಿತ್ತು. ರಷ್ಯಾದ ಆ ವಿಮಾನ ಈಗ ಪತ್ತೆಯಾಗಿದೆ.
ಮಾಸ್ಕೋ: ಸೈಬೀರಿಯಾ ಬಳಿ ಇಂದು ಮಧ್ಯಾಹ್ನದ ವೇಳೆ ನಾಪತ್ತೆಯಾಗಿದ್ದ ರಷ್ಯಾದ ವಿಮಾನ ಪತ್ತೆಯಾಗಿದ್ದು, ವಿಮಾನದಲ್ಲಿದ್ದ 15 ಪ್ರಯಾಣಿಕರು ಹಾಗೂ ಮೂವರು ವಿಮಾನದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ರಷ್ಯಾದ ವಿಮಾನಯಾನ ಏಜೆನ್ಸಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
28 ಜನರು ಪ್ರಯಾಣಿಸಬಹುದಾದ ವಿಮಾನವೊಂದು ಸೈಬೀರಿಯಾದ ಟಾಮ್ಸ್ಕ್ ಎಂಬಲ್ಲಿ ನಾಪತ್ತೆಯಾಗಿತ್ತು. ಆ ವಿಮಾನ ಎಲ್ಲಿ ಹೋಯಿತು, ಏನಾಯಿತೆಂಬ ಬಗ್ಗೆ ಯಾವುದೇ ಮಾಹಿತಿಯೂ ಸಿಕ್ಕಿರಲಿಲ್ಲ. ಆಂಟೊನೊವ್ An-28 ರಷ್ಯಾದ ಈ ವಿಮಾನದಲ್ಲಿ ಒಟ್ಟು 18 ಜನರು ಪ್ರಯಾಣಿಸುತ್ತಿದ್ದರು. ಆ ವಿಮಾನ ಸೈಬೀರಿಯಾ ದಾಟುತ್ತಿದ್ದಂತೆ ರಡಾರ್ ವ್ಯಾಪ್ತಿಯಿಂದ ಹೊರಹೋಗಿತ್ತು. ಹೀಗಾಗಿ, ಆ ವಿಮಾನ ಅಪಘಾತಕ್ಕೀಡಾಗಿರಬಹುದು ಎಂದು ಊಹಿಸಲಾಗಿತ್ತು.
Russian plane goes missing in Siberia with at least 13 people on board, reports AFP
— ANI (@ANI) July 16, 2021
ಆದರೀಗ ಆ ವಿಮಾನ ಪತ್ತೆಯಾಗಿದ್ದು, ಪ್ರಯಾಣಿಕರೆಲ್ಲರೂ ಜೀವಂತವಾಗಿದ್ದಾರೆ ಎಂದು ತಿಳಿದುಬಂದಿದೆ. ವಿಮಾನದಲ್ಲಿ 15 ಪ್ರಯಾಣಿಕರು ಸೇರಿದಂತೆ ಮೂವರು ವಿಮಾನದ ಸಿಬ್ಬಂದಿಗಳಿದ್ದರು. ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿತ್ತು. ಆ ವಿಮಾನದಲ್ಲಿದ್ದವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗುತ್ತಿದೆ…
ಇದನ್ನೂ ಓದಿ: 13 ಪ್ರಯಾಣಿಕರಿದ್ದ ರಷ್ಯಾದ ವಿಮಾನ ಸೈಬೀರಿಯಾ ಸಮೀಪ ನಾಪತ್ತೆ
ಇದನ್ನೂ ಓದಿ: ವಿಮಾನದ ಬಾಲ ನೋಡಿ ಫಟಾಫಟ್ ಅಂತ ಒಂದೇ ನಿಮಿಷದಲ್ಲಿ ಅತೀ ಹೆಚ್ಚು ವಿಮಾನಗಳನ್ನು ಗುರುತಿಸಿ ವಿಶ್ವದಾಖಲೆ ಬರೆದ ಪೋರಿ
(Missing Russian Plane In Siberia Found all 18 On Board Alive)