ಸ್ಪಿನ್ ಬೊಲ್ದಾಕ್ ಪ್ರವೇಶಿಸಿದ ತಾಲಿಬಾನಿಗಳು: ತಾಲಿಬಾನ್​ಗೆ ಪಾಕಿಸ್ತಾನ ನಿರ್ಣಾಯಕ ಬೆಂಬಲ ಒದಗಿಸುತ್ತಿದೆ ಎಂದ ಅಫ್ಘಾನಿಸ್ತಾನ ಉಪಾಧ್ಯಕ್ಷ

ತಾಲಿಬಾನ್ ಬಾತ್ಮೀದಾರ ಜಮಿಯುಲ್ಲಾ ಮುಜಾಹಿದ್, ಸದರಿ ಪ್ರದೇಶದ ಮುಖ್ಯದ್ವಾರವನ್ನು ತಮ್ಮ ಪಡೆ ವಶಪಡಿಸಿಕೊಂಡಿದೆ ಎಂದು ವಾಟ್ಸ್ಯಾಪ್ ಸಂದೇಶದಲ್ಲಿ ಹೇಳಿದ್ದು, ದೋಸ್ತುಮ್​ನ ಪಡೆಗಳು ನಗರವನ್ನು ಬಿಟ್ಟು ವಿಮಾನ ನಿಲ್ದಾಣದ ಕಡೆ ಹೋಗಿವೆ ಅಂತಲೂ ತಿಳಿಸಿದ್ದಾರೆ. ಜೊವ್ಜಾನ್ ಗವರ್ನರ್ ಅವರು ತಾಲಿಬಾನಿಗಳು ಪ್ರಾಂತ್ಯದ ದ್ವಾರಕ್ಕೆ ಸನಿಹ ಬಂದಿರುವುದನ್ನು ಖಚಿತಪಡಿಸಿದ್ದಾರೆ.

ಸ್ಪಿನ್ ಬೊಲ್ದಾಕ್ ಪ್ರವೇಶಿಸಿದ ತಾಲಿಬಾನಿಗಳು: ತಾಲಿಬಾನ್​ಗೆ ಪಾಕಿಸ್ತಾನ ನಿರ್ಣಾಯಕ ಬೆಂಬಲ ಒದಗಿಸುತ್ತಿದೆ ಎಂದ ಅಫ್ಘಾನಿಸ್ತಾನ ಉಪಾಧ್ಯಕ್ಷ
ಅಫ್ಘಾನಿಸ್ತಾನದ ಸ್ಪಿನ್ ಬೊಲ್ದಾಕ್ ಗಡಿ ಪ್ರದೇಶ

ತಾಲಿಬಾನ್ ಯೋಧರು ವಶಪಡಿಸಿಕೊಂಡಿರುವ ತನ್ನ ಪ್ರದೇಶಗಳನ್ನು ವಾಪಸ್ಸು ಪಡೆಯಲು ಯುದ್ದ ಪ್ರದೇಶವೆಂದೇ ಗುರುತಿಸಿಕೊಂಡಿರುವ ಸ್ಪಿನ್ ಬೊಲ್ದಾಕ್​ನಲ್ಲಿ ಅಫ್ಘಾನಿಸ್ತಾನ ಶುಕ್ರವಾರದಂದು ಸೇನಾ ಕಾರ್ಯಾಚರಣೆ ಆರಂಭಿಸಿದೆ. ಪಾಕಿಸ್ತಾನ್ ಸರಹದ್ದಿಗೆ ಅಂಟಿಕೊಂಡಿರುವ ಸದರಿ ಪ್ರದೇಶದಲ್ಲಿ ತಾಲಿಬಾನಿಗಳು ತಮ್ಮ ಹಿಡಿತವನ್ನು ಬಿಗಿಗೊಳಿಸಿದ್ದಾರೆ ಎಂದು ವರದಿಯಾಗಿದೆ. ಎಎಫ್​ಪಿ ಸುದ್ದಿಸಂಸ್ಥೆಯ ಪ್ರಕಾರ ಹತ್ತಾರು ತಾಲಿಬಾನಿ ಗಾಯಗೊಂಡಿದ್ದು ಅವರಿಗೆ ಪಾಕಿಸ್ತಾನದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ತಾಲಿಬಾನ್ ನುಸುಳುಕೋರ ಎಂದು ಹೇಳಿಕೊಂಡಿರುವ ಮುಲ್ಲಾ ಮಹಮ್ಮದ್ ಹುಸ್ಸೇನ್ ಹೆಸರಿನ ವ್ಯಕ್ತಿಯು ನಮ್ಮ ಒಬ್ಬ ಸಂಗಡಿಗ ಮರಣಿಸಿದ್ದಾನೆ ಮತ್ತು ಸುಮಾರು 12 ಜನ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದಲ್ಲಿರುವ ಚಮನ್ ಎಂಬ ಪ್ರದೇಶದಿಂದ (ಗಡಿ ಪ್ರದೇಶದಿಂದ ಮೂರು ಕಿಮೀ ದೂರದಲ್ಲಿದೆ) ಸುದ್ದಿಸಂಸ್ಥೆಗೆ ಹೇಳಿದ್ದಾನೆ.

ದೀರ್ಘಕಾಲದಿಮದ ತಾಲಿಬಾನ್ ಸಂಘಟನೆಯ ಶತ್ರುವಾಗಿರುವ ಅಬ್ದುಲ್ ರಶೀದ್ ದೋಸ್ತುಮ್​ನ ಭದ್ರ ಕೋಟೆಯಾಗಿದ್ದ ಪ್ರದೇಶವನ್ನು ತಾಲಿಬಾನ್ ಆಕ್ರಮಿಸಿಕೊಳ್ಳುವ ಹಂತದಲ್ಲಿದೆ ಮತ್ತ್ತು ಈ ಸಂಘಟನೆಯ ಬಾತ್ಮೀದಾರ ಹೇಳಿರುವ ಹಾಗೆ ಜೊವ್ಜಾನ್ ಪ್ರಾವಿನ್ಸ್ ಪ್ರಾಂತ್ಯದ ರಾಜಧಾನಿಯಾಗಿರುವ ಶೆಬರ್ಘಾನ್​ಗೆ ಅಲ್ಲಿನ ಮಿಲಿಟರಿ ಪಡೆಗಳು ಪಲಾಯನಗೈದಿವೆ.

ತಾಲಿಬಾನ್ ಬಾತ್ಮೀದಾರ ಜಮಿಯುಲ್ಲಾ ಮುಜಾಹಿದ್, ಸದರಿ ಪ್ರದೇಶದ ಮುಖ್ಯದ್ವಾರವನ್ನು ತಮ್ಮ ಪಡೆ ವಶಪಡಿಸಿಕೊಂಡಿದೆ ಎಂದು ವಾಟ್ಸ್ಯಾಪ್ ಸಂದೇಶದಲ್ಲಿ ಹೇಳಿದ್ದು, ದೋಸ್ತುಮ್​ನ ಪಡೆಗಳು ನಗರವನ್ನು ಬಿಟ್ಟು ವಿಮಾನ ನಿಲ್ದಾಣದ ಕಡೆ ಹೋಗಿವೆ ಅಂತಲೂ ತಿಳಿಸಿದ್ದಾರೆ. ಜೊವ್ಜಾನ್ ಗವರ್ನರ್ ಅವರು ತಾಲಿಬಾನಿಗಳು ಪ್ರಾಂತ್ಯದ ದ್ವಾರಕ್ಕೆ ಸನಿಹ ಬಂದಿರುವುದನ್ನು ಖಚಿತಪಡಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ದೋಸ್ತುಮ್ ಉತ್ತರ ಭಾಗದಲ್ಲಿ ಬೃಹತ್ ಗಾತ್ರದ ಮಿಲಿಟರಿ ಪಡೆಯ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದರು. ಅವರ ಪಡೆಯು 1990 ರಿಂದ ತಾಲಿಬಾನಿಗಳ ಜೊತೆ ಉಗ್ರ ಕಾಳಗದಲ್ಲಿ ತೊಡಗಿವೆ. ಸಾವಿರಾರು ನುಸುಳುಕೋರ ಯುದ್ಧಕೈದಿಗಳನ್ನು ಸಾಮೂಹಿಕ ಹತ್ಯೆ ನಡೆಸಿದ ಆರೋಪ್ ದೋಸ್ತುಮ್ ಮೇಲಿದೆ.

ಗಡಿಯಾಚೆ ಯುದ್ಧ ತೀವ್ರಗೊಳ್ಳುತ್ತಿದ್ದಂತೆಯೇ, ಕಾಬೂಲ್ ಮತ್ತು ಇಸ್ಲಾಮಾಬಾದ್​ ನಡುವೆ ಮಾತಿನ ಯುದ್ಧ ತಾರಕಕ್ಕೇರಿದೆ. ಅಫ್ಘಾನಿಸ್ತಾನದ ಉಪಾಧ್ಯಕ್ಷರು, ಪಾಕಿಸ್ತಾನದ ಸೇನೆ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ತಾಲಿಬಾನ್ ಉಗ್ರರಿಗೆ ವಾಯು ಸೇನೆಯ ಮೂಲಕ ನೆರವು ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಆದರೆ, ಪಾಕಿಸ್ತಾನ ಈ ಆಪಾದನೆಯನ್ನು ಬಲವಾಗಿ ನಿರಾಕರಿಸಿದೆ. ಪಾಕ್ ವಿದೇಶಾಂಗ ಸಚಿವಾಲಯ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿ, ‘ನಮ್ಮ ಸೇನೆ ಮತ್ತು ಜನರ ಸರಕ್ಷತೆಗಾಗಿ ನಮ್ಮ ಪ್ರಾಂತ್ಯದೊಳಗೆ ಮಾತ್ರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ,’ ಎಂದು ಹೇಳಿದೆ. ಹಾಗೆಯೇ, ಅಫ್ಘಾನಿಸ್ತಾನವು ತನಗೆ ಸೇರಿದ ಪ್ರಾಂತ್ಯವನ್ನು ರಕ್ಷಿಸಿಕೊಳ್ಳಲು ಅದಕ್ಕೆ ಅಧಿಕಾರ ಇದೆಯೆಂಬ ಅಂಶವನ್ನು ಪಾಕಿಸ್ತಾನ ಅಂಗೀಕರಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬುಧವಾರದಂದು ತಾಲಿಬಾನ್ ವಶಪಡಿಸಿಕೊಂಡಿರುವ ಸ್ಪಿನ್ ಬೊಲ್ದಾಕ್​ ನಿವಾಸಿಗಳು ಈ ಗಡಿ ಪ್ರದೇಶ ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ನುಸುಳುಕೋರರು ಮತ್ತು ಸೇನೆಯ ನಡುವೆ ಭೀಕರ ಕಾಳಗ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಗಡಿ ಪ್ರದೇಶವನ್ನು ದಾಟಿದರೆ, ಪಾಕಿಸ್ತಾನದ ಬಲೂಚಿಸ್ತಾನ್​ಗೆ ನೇರ ಸಂಪರ್ಕ ಸಿಗುತ್ತದೆ. ತಾಲಿಬಾನದ ಪ್ರಮುಖ ನಾಯಕರೆಲ್ಲ ದಶಕಗಳಿಂದ ಇಲ್ಲಿ ತಳವೂರಿದ್ದಾರೆ.

ಗಡಿ ಪ್ರದೇಶದಲ್ಲಿ ಯುದ್ಧ ಜಾರಿಯಲ್ಲಿರುವಾಗಲೇ, ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಇಸ್ಲಾಮಾಬಾದ್​ನಲ್ಲಿ ಒಂದು ವಿಶೇಷ ಸಭೆ ಆಯೋಜಿಸುವುದಾಗಿ ಪಾಕಿಸ್ತಾನ ಗುರುವಾರದಂದು ಹೇಳಿಕೆ ನೀಡಿತ್ತು. ಈ ಸಭೆಗೆ ಆದು ತಾಲಿಬಾನ್ ಅಧಿಕಾರಿಗಳನ್ನು ಆಹ್ವಾನಿಸಿಲ್ಲ. ಆದರೆ, ಅಫ್ಘಾನಿಸ್ತಾನ ಅಧ್ಯಕ್ಷ್ಯ ಅಷ್ರಫ್ ಘನಿ ಅವರ ಸಹಾಯಕರೊಬ್ಬರು ನೀಡಿರುವ ಹೇಳಿಕೆಯ ಪ್ರಕಾರ, ಮಧ್ಯವರ್ತಿಗಳು ಈಗಾಗಲೇ ಕತಾರ್​ಗೆ ಹೊರಟಿರುವುದರಿಂದ ಸಭೆಯನ್ನು ಮುಂದೂಡುವಂತೆ ಪಾಕಿಸ್ತಾನಕ್ಕೆ ಅಧ್ಯಕ್ಷರು ತಿಳಿಸಿದ್ದಾರೆಂದು ಹೇಳಿದ್ದಾರೆ.

ತಾಲಿಬಾನಿಗಳು ನಡೆಸುತ್ತಿರುವ ಆಕ್ರಮಣದ ಪ್ರಮಾಣ ಮತ್ತು ವೇಗ ಯುದ್ಧ ವಿಶ್ಲಷಕರನ್ನು ದಂಗುಬಡಿಸಿದೆ. ಅವರ ಹೋರಾಟದ ತೀವ್ರತೆಯನ್ನು ಗಮನಿದರೆ ಅಫ್ಘಾನಿಸ್ತಾನ ಸರ್ಕಾರ ಯುಧ್ಧ ವಿರಾಮ ಘೋಷಿಸಿ ಶಾಂತಿ ಮಾತುಕತೆಗೆ ಆಹ್ವಾನಿಸುವಂಥ ಆನಿವಾರ್ಯತೆಯನ್ನು ಸೃಷ್ಟಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಗುರುವಾರದಂದು ಹೇಳಿಕೆಯೊಂದನ್ನು ನೀಡಿರುವ ಅಫ್ಘನ್ ಅಧಿಕಾರಿಯೊಬ್ಬರು ಬದ್ಘೀಸ್ ಪ್ರಾಂತ್ಯದ ಖಲಾ-ಇ-ನಾವ್ ಎಂಬಲ್ಲಿ ತಾಲಿಬಾನ್ ನಾಯಕರೊಂದಿಗೆ ಯುದ್ಧವಿರಾಮವನ್ನು ಚರ್ಚಿಸಲಾಗಿದೆ ಎಂದಿದ್ದಾರೆ. ಈ ಭಾಗದಲ್ಲಿ ಕಳೆದ ವಾರ ಭೀಕರ ಕಾಳಗ ನಡೆದಿತ್ತು.

ಇದನ್ನೂ ಓದಿ: ತಾಲೀಬಾನ್​ ಜೊತೆಗೆ ಮಾತುಕತೆ ಮುರಿದುಬಿದ್ದರೆ ಭಾರತದ ಸೇನಾ ಸಹಾಯ ಕೋರುತ್ತೇವೆ: ಅಫ್ಗನ್ ಸರ್ಕಾರ