ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು; ಕನ್ನಡದಲ್ಲೇ ಟ್ವೀಟ್​ ಮಾಡಿ ಬಸವಣ್ಣನನ್ನು ಸ್ಮರಿಸಿದ ಪ್ರಧಾನಿ ಮೋದಿ

ಪ್ರಧಾನಮಂತ್ರಿ ಇಂದು ದೇಶದ ಜನರಿಗೆ ಪರಶುರಾಮ ಜಯಂತಿಯ ಶುಭಾಶಯವನ್ನೂ  ತಿಳಿಸಿದ್ದಾರೆ. ಭಗವಾನ್​ ಪರಶುರಾಮ ಕರುಣೆ, ಸಹಾನುಭೂತಿ ಮತ್ತು ಶೌರ್ಯದ ಕಾರಣಕ್ಕೆ ಪರಮಪೂಜ್ಯನಾಗಿದ್ದಾನೆ ಎಂದಿದ್ದಾರೆ.

ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು; ಕನ್ನಡದಲ್ಲೇ ಟ್ವೀಟ್​ ಮಾಡಿ ಬಸವಣ್ಣನನ್ನು ಸ್ಮರಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ
Edited By:

Updated on: May 03, 2022 | 10:49 AM

ಇಂದು ಬಸವಜಯಂತಿ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಜಗಜ್ಯೋತಿ ಬಸವೇಶ್ವರರನ್ನು ಸ್ಮರಿಸಿದ್ದಾರೆ. ಹಾಗೇ, 2022ರ ಸಮಯದಲ್ಲಿ ತಾವು ಮಾಡಿದ ಭಾಷಣದ ತುಣುಕೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಕನ್ನಡದಲ್ಲಿಯೇ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಬಸವಜಯಂತಿಯ ಈ ಶುಭಸಂದರ್ಭದಲ್ಲಿ  ಜಗದ್ಗುರು ಬಸವೇಶ್ವರರಿಗೆ ಗೌರವ ನಮನಗಳು. ಬಸವಣ್ಣನವರ ಚಿಂತನೆ, ಬೋಧನೆ ಹಾಗು ತತ್ವಾದರ್ಶಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಶಕ್ತಿ ತುಂಬುತ್ತಿದೆ ಎಂದಿದ್ದಾರೆ. 12ನೇ ಶತಮಾನದ ಸಮಾಜ ಸುಧಾರಕ, ಕವಿ ಮತ್ತು ತತ್ವಜ್ಞಾನಿ ಆಗಿರುವ ಬಸವೇಶ್ವರ ಜಯಂತಿಯನ್ನು ಸಾಮಾನ್ಯವಾಗಿ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ದಿನ ಆಚರಿಸುತ್ತಾರೆ.

ಹಾಗೇ, ಪ್ರಧಾನಮಂತ್ರಿ ಇಂದು ದೇಶದ ಜನರಿಗೆ ಪರಶುರಾಮ ಜಯಂತಿಯ ಶುಭಾಶಯವನ್ನೂ  ತಿಳಿಸಿದ್ದಾರೆ. ಭಗವಾನ್​ ಪರಶುರಾಮ ಕರುಣೆ, ಸಹಾನುಭೂತಿ ಮತ್ತು ಶೌರ್ಯದ ಕಾರಣಕ್ಕೆ ಪರಮಪೂಜ್ಯನಾಗಿದ್ದಾನೆ ಎಂದು ಅವರು ಹೇಳಿದ್ದಾರೆ.  ಇದರೊಂದಿಗೆ ಅಕ್ಷಯ ತೃತೀಯ ಹಬ್ಬದ ಶುಭಾಶಯವನ್ನೂ ತಿಳಿಸಿದ ಪ್ರಧಾನಿ, ಎಲ್ಲರಿಗೂ ಅಕ್ಷಯ ತೃತೀಯದ ಹಾರ್ದಿಕ ಶುಭಾಶಯಗಳು. ಈ ದಿನ ಪ್ರತಿಯೊಬ್ಬರ ಜೀವನದಲ್ಲೂ ಸಮೃದ್ಧಿಯನ್ನು ತರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಸಮ್ಮುಖದಲ್ಲಿ ಇಂದು ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದ ಬಸವರಾಜ ಹೊರಟ್ಟಿ

Published On - 10:49 am, Tue, 3 May 22