ಮತ್ತೊಮ್ಮೆ ಉಪರಾಷ್ಟ್ರಪತಿಯನ್ನು ಅನುಕರಣೆ ಮಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ

ಅನುಕರಣೆ ಮಾಡುವುದು ಒಂದು ಕಲೆ. ಯಾರಿಗಾದರೂ ಕಲೆ ಅರ್ಥವಾಗದಿದ್ದರೆ ನಾನೇನು ಮಾಡಲಿ?, ಯಾರಿಗಾದರೂ ಹಾಸ್ಯ ಅರ್ಥವಾಗದಿದ್ದರೆ, ಸುಸಂಸ್ಕೃತ ಮನಸ್ಸು ಇಲ್ಲದಿದ್ದರೆ, ಯಾರೋ ತನ್ನನ್ನು ಗುರಿಯಾಗಿಸಿದರೆ, ನಾನು ಅಸಹಾಯಕ ಎಂದು ಅವರು ಉಪರಾಷ್ಟ್ರಪತಿ ಹೆಸರು ಉಲ್ಲೇಖಿಸದೇ ಕಲ್ಯಾಣ್ ಬ್ಯಾನರ್ಜಿ ಹೇಳಿದ್ದು, ಮತ್ತೊಮ್ಮೆ ಉಪರಾಷ್ಟ್ರಪತಿಯನ್ನು ಅಣಕ ಮಾಡಿದ್ದಾರೆ.

ಮತ್ತೊಮ್ಮೆ ಉಪರಾಷ್ಟ್ರಪತಿಯನ್ನು ಅನುಕರಣೆ ಮಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ
ಕಲ್ಯಾಣ್ ಬ್ಯಾನರ್ಜಿ
Follow us
|

Updated on: Dec 25, 2023 | 1:40 PM

ಕೋಲ್ಕತ್ತಾ ಡಿಸೆಂಬರ್ 25: ಸಂಸತ್ತಿನ ಆವರಣದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಖರ್ (Jagdeep Dhankhar)ಅವರನ್ನು ಅಣಕಿಸಿ ವಿವಾದಕ್ಕೀಡಾಗಿರುವ ತೃಣಮೂಲ ಕಾಂಗ್ರೆಸ್ ಸಂಸದ ಕಲ್ಯಾಣ್ ಬ್ಯಾನರ್ಜಿ (Kalyan Banerjee) ಅವರು “ಹಾಸ್ಯವನ್ನು ಅರ್ಥಮಾಡಿಕೊಳ್ಳದಿದ್ದರೆ” ಮತ್ತು ಮಿಮಿಕ್ರಿಯನ್ನು ಮೆಚ್ಚುವ “ಸುಸಂಸ್ಕೃತ ಮನಸ್ಸು” ಹೊಂದಿಲ್ಲದಿದ್ದರೆ ನಾನು ಈ ವಿಷಯದಲ್ಲಿ “ಅಸಹಾಯಕ” ಎಂದು ಹೇಳಿದ್ದಾರೆ. ತಮ್ಮ ಲೋಕಸಭಾ ಕ್ಷೇತ್ರ ಸೆರಾಂಪೋರ್‌ನಲ್ಲಿ ರಾಜಕೀಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, ಲೋಕಸಭೆಯೊಳಗೆ ಮಿಮಿಕ್ರಿ ಮಾಡಿದ ಮೊದಲ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ (Narendra Modi) ಎಂದು ಹೇಳಿದ್ದಾರೆ. ವೇದಿಕೆಯಲ್ಲಿ ಮೋದಿಯನ್ನು ಅನುಕರಣೆ ಮಾಡಿದ ಬ್ಯಾನರ್ಜಿ,”ಅವರು ಹಾಗೆ ಮಾಡಿದರು, ನಾವು ನಕ್ಕೆವು. ನಾವೇನೂ ದೂರಲಿಲ್ಲ ಎಂದಿದ್ದಾರೆ.

ಅನುಕರಣೆ ಮಾಡುವುದು ಒಂದು ಕಲೆ. ಯಾರಿಗಾದರೂ ಕಲೆ ಅರ್ಥವಾಗದಿದ್ದರೆ ನಾನೇನು ಮಾಡಲಿ?, ಯಾರಿಗಾದರೂ ಹಾಸ್ಯ ಅರ್ಥವಾಗದಿದ್ದರೆ, ಸುಸಂಸ್ಕೃತ ಮನಸ್ಸು ಇಲ್ಲದಿದ್ದರೆ, ಯಾರೋ ತನ್ನನ್ನು ಗುರಿಯಾಗಿಸಿದರೆ, ನಾನು ಅಸಹಾಯಕ ಎಂದು ಅವರು ಉಪರಾಷ್ಟ್ರಪತಿ ಹೆಸರು ಉಲ್ಲೇಖಿಸದೇ ಬ್ಯಾನರ್ಜಿ ಹೇಳಿದ್ದಾರೆ.

ಅದು ನಿಮ್ಮ ಬಗ್ಗೆ ಎಂದು ನೀವು ಏಕೆ ಭಾವಿಸುತ್ತೀರಿ ಎಂದು ಅರ್ಥವಾಗುತ್ತಿಲ್ಲ. ಅವರು ಬೆಳಗ್ಗಿನಿಂದ ರಾತ್ರಿವರೆಗೆ ಅಳುತ್ತಿದ್ದಾರೆ. ಅವರು ಮಗುವಿನಂತೆ ಅಳುತ್ತಿರುವುದೇಕೆ ಎಂದು ಹೇಳಿದ ಟಿಎಂಸಿ ಸಂಸದರು, ಯಾರೋ ತನ್ನನ್ನು ಚುಡಾಯಿಸಿದ ಬಗ್ಗೆ ತನ್ನ ತಾಯಿಗೆ ದೂರು ನೀಡುತ್ತಿರುವ ಮಗುವನ್ನು ಅನುಕರಿಸಿದ್ದಾರೆ.

ತೃಣಮೂಲ ಸಂಸದರ ಅಣಕು ತನಗೆ ನೋವು ತಂದಿದೆ. ನಾನು ಜಾಟ್ ಸಮುದಾಯದ ರೈತನ ಮಗನೆಂದು ಅವಮಾನಿಸಲಾಗಿದೆ ಎಂದು ಧನ್ಖರ್ ಹೇಳಿದ್ದಾರೆ. ಅದೇ ವೇಳೆ ಬ್ಯಾನರ್ಜಿ ಅವರು ಅನುಕರಿಸುತ್ತಿದ್ದಾಗ ಅದನ್ನು ಚಿತ್ರೀಕರಿಸಿದ್ದಕ್ಕಾಗಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧವೂ ಧನ್ಖರ್ ವಾಗ್ದಾಳಿ ನಡೆಸಿದ್ದರು.

ರೈತನ ಮಗನೆಂದು ಅವಮಾನಿಸಲಾಗಿದೆ ಎಂಬ ಉಪರಾಷ್ಟ್ರಪತಿ ಹೇಳಿಕೆಗೆ ತಿರುಗೇಟು ನೀಡಿದ ತೃಣಮೂಲ ಸಂಸದರು, ನೀವು ಎಷ್ಟು ದಿನ ಹೊಲದಲ್ಲಿ ದುಡಿದಿದ್ದೀರಿ ಎಂಬುದನ್ನು ದೇಶದ ಜನತೆ ಹೇಳಿ ಎಂದು ನಾನು ಸವಾಲು ಹಾಕುತ್ತೇನೆ. ದೇಶದ ಕೋಟ್ಯಂತರ ರೈತರು ಅವರಷ್ಟು (ಧನ್ಖರ್) ಆಸ್ತಿಯನ್ನು ಸಂಗ್ರಹಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ನೀವು ರೈತನ ಮಗ ಅಂತ ಹೇಳುತ್ತೀರಿ. ₹ 20 ಲಕ್ಷದ ಸೂಟ್ ಹಾಕುತ್ತೀರಿ. ಈ ಚಳಿಯಲ್ಲಿ ಭಾರತದ ಎಷ್ಟೋ ರೈತರಿಗೆ ಕಂಬಳಿ ಕೂಡ ಕೊಡಲು ಆಗುವುದಿಲ್ಲ. ಹಾಗಾಗಿ ಅಂತಹ ಸ್ಥಿತಿಗೆ ಏರಿದ ಮೇಲೆ ಅವರ ಮನೆಗೆ ಎಷ್ಟು ಲಕ್ಷ ಕಂಬಳಿ ಕಳಿಸಿದ್ದೀರಿ. ದಯವಿಟ್ಟು ಜನರಿಗೆ ತಿಳಿಸಿ. ನೀವು ರೈತನ ಮಗ ಅಂತ ಹೇಳಿದ್ದೀರಿ, ಹಾಗಾದರೆ ಹೇಳಿ, ನೀವು ವಕೀಲ ವೃತ್ತಿಯಲ್ಲಿ ಎಷ್ಟು ಸಲ ರೈತರಿಗಾಗಿ ಕೇಸ್ ವಾದಿಸಿದ್ದೀರಿ? ನಾನು ಮಾಡಿದ್ದೇನೆ, 40 ವರ್ಷ ಬಡವರಿಗಾಗಿ ಕೇಸ್ ವಾದಿಸಿದ್ದೇನೆ ಎಂದಿದ್ದಾರೆ ಕಲ್ಯಾಣ್ ಬ್ಯಾನರ್ಜಿ .

ಬಿಜೆಪಿ ಸಂಸದ ಮತ್ತು ಮಾಜಿ ಕುಸ್ತಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲ್ಲಿಕ್ ಅವರನ್ನು ಉಪರಾಷ್ಟ್ರಪತಿ ಏಕೆ ಬೆಂಬಲಿಸಲಿಲ್ಲ ಎಂದು ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಬಿಜೆಪಿ ಸಂಸದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಾಕ್ಷಿ ಮಲಿಕ್ ಮತ್ತು ಇತರ ಕುಸ್ತಿಪಟುಗಳು ಆರೋಪಿಸಿದ್ದಾರೆ. “ನೀವು ಒಂದು ಮಾತನ್ನೂ ಮಾತನಾಡಲಿಲ್ಲ, ಏಕೆ? ದಯವಿಟ್ಟು ಉತ್ತರಿಸಿ. “ಅಂತಹ ಉನ್ನತ ಹುದ್ದೆಯಲ್ಲಿದ್ದರೂ ನಾನು, ನಾನು, ನಾನು ಮಾತ್ರ ಎಂದು ಬ್ಯಾನರ್ಜಿ ಧನ್ಖರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ವಿಪಕ್ಷ ಸಂಸದರ ಪ್ರತಿಭಟನೆ ವೇಳೆ ಜಗದೀಪ್ ಧನ್ಖರ್​​ನ್ನು ಅನುಕರಣೆ ಮಾಡಿದ ಟಿಎಂಸಿ ಎಂಪಿ

ಉಪರಾಷ್ಟ್ರಪತಿಯವರು ಪ್ರಧಾನಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಬ್ಯಾನರ್ಜಿ, “ನೀವು ಪ್ರತಿಪಕ್ಷಗಳ ಧ್ವನಿಗೆ ತಡೆಯೊಡ್ಡಿದ್ದೀರಿ. ನೀವು ನರೇಂದ್ರ ಮೋದಿಯನ್ನು ಈ ಶತಮಾನದ ‘ಮಹಾಪುರುಷ’ ಎಂದು ಹೇಳುತ್ತೀರಿ, ನೀವು ಅವರನ್ನು ಎಷ್ಟು ಹೊಗಳುತ್ತೀರಿ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ