Mamata Banerjee Birthday ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ

ಕಲ್ಕತ್ತಾದಲ್ಲಿ (ಇಂದಿನ ಕೋಲ್ಕತ್ತಾ) ಬಂಗಾಳಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬ್ಯಾನರ್ಜಿ ಅವರು ಕೇವಲ 15 ವರ್ಷ ವಯಸ್ಸಿನವರಾಗಿದ್ದಾಗ ರಾಜಕೀಯವಾಗಿ ಸಕ್ರಿಯರಾದರು.

Mamata Banerjee Birthday ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ
ಮಮತಾ ಬ್ಯಾನರ್ಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 05, 2022 | 12:22 PM

ಕೊಲ್ಕತ್ತಾ: ಇಂದು ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ 67 ನೇ ಹುಟ್ಟುಹಬ್ಬ. ಅವರು ರಾಷ್ಟ್ರದ ‘ದೀದಿ’  ಮತ್ತು ‘ಬಂಗಾಳದ ಹುಲಿ’ ಎಂದ ಕರೆಯಲ್ಪಡುತ್ತಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಸತತ ಮೂರನೇ ಇನ್ನಿಂಗ್ಸ್‌ ತಡೆಯಲು ಭಾರತೀಯ ಜನತಾ ಪಕ್ಷದ ಆಕ್ರಮಣಕಾರಿ ಪ್ರಚಾರದ ಹೊರತಾಗಿಯೂ ದೀದಿ ಭರ್ಜರಿ ಗೆಲುವು ಸಾಧಿಸಿದ್ದರು.ಕಲ್ಕತ್ತಾದಲ್ಲಿ (ಇಂದಿನ ಕೋಲ್ಕತ್ತಾ) ಬಂಗಾಳಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಬ್ಯಾನರ್ಜಿ ಅವರು ಕೇವಲ 15 ವರ್ಷ ವಯಸ್ಸಿನವರಾಗಿದ್ದಾಗ ರಾಜಕೀಯವಾಗಿ ಸಕ್ರಿಯರಾದರು. ಅವರು 1970 ರ ದಶಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ತಮ್ಮ ರಾಜಕೀಯ ಇನ್ನಿಂಗ್ಸ್‌ಗಳನ್ನು ಪ್ರಾರಂಭಿಸಿದರು. ನಂತರ, ಅವರು ಕಾಂಗ್ರೆಸ್ ಪಕ್ಷದಿಂದ ಬೇರ್ಪಟ್ಟರು ಮತ್ತು 1998 ರಲ್ಲಿ ತೃಣಮೂಲ ಕಾಂಗ್ರೆಸ್ (TMC) ಅನ್ನು ಸ್ಥಾಪಿಸಿದರು.

‘ದೀದಿ’ ಬಗ್ಗೆ ನಿಮಗೆ ತಿಳಿದಿರದ ಕೆಲವು ಸಂಗತಿಗಳು ಇಲ್ಲಿವೆ ಮಮತಾ ಬ್ಯಾನರ್ಜಿ ಅವರು ಇತಿಹಾಸದಲ್ಲಿ ಬ್ಯಾಚುಲರ್ ಪದವಿ ಮತ್ತು ಇಸ್ಲಾಮಿಕ್ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಕಾನೂನು ಮತ್ತು ಶಿಕ್ಷಣದಲ್ಲಿ ಪದವಿಗಳನ್ನು ಸಹ ಹೊಂದಿದ್ದಾರೆ.

1984 ರಲ್ಲಿಅವರು ಪಶ್ಚಿಮ ಬಂಗಾಳದ ಜಾದವ್‌ಪುರ ಸಂಸದೀಯ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿದ್ದು ಹಿರಿಯ ಕಮ್ಯುನಿಸ್ಟ್ ರಾಜಕಾರಣಿ ಸೋಮನಾಥ್ ಚಟರ್ಜಿ ವಿರುದ್ಧ ವಿಜಯಶಾಲಿಯಾದರು, ಆ ಮೂಲಕ ಕಿರಿಯ ಸಂಸದರಲ್ಲಿ ಒಬ್ಬರಾದರು.

1975 ರಲ್ಲಿ ಮಮತಾ ಬ್ಯಾನರ್ಜಿ ಪ್ರಭಾವಿ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ಅವರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಅವರ ಕಾರಿನ ಬಾನೆಟ್ ಮೇಲೆ ನೃತ್ಯ ಮಾಡಿ ಸುದ್ದಿಯಾಗಿದ್ದರು.

1998 ರಲ್ಲಿ ಮಮತಾ ಬ್ಯಾನರ್ಜಿಯವರು ವಿವಾದಾತ್ಮಕವಾಗಿ ಸಮಾಜವಾದಿ ಪಕ್ಷದ ಸಂಸದ ದರೋಗಾ ಪ್ರಸಾದ್ ಸರೋಜ್ ಅವರ ಕಾಲರ್‌ನಿಂದ ಹಿಡಿದುಮಹಿಳಾ ಮೀಸಲಾತಿ ಮಸೂದೆಯ ವಿರುದ್ಧ ಪ್ರತಿಭಟಿಸುವುದನ್ನು ತಡೆಯುವ ಸಲುವಾಗಿ ಅವರನ್ನು ಲೋಕಸಭೆಯಿಂದ ಹೊರಗೆ ಹಾಕಿದ್ದರು.

2006 ರಲ್ಲಿ, ಮಮತಾ ಬ್ಯಾನರ್ಜಿ ಅವರು ಸಿಂಗೂರಿನಲ್ಲಿ ಟಾಟಾ ಕಾರು ಯೋಜನೆಯ ಸ್ಥಳದ ವಿರುದ್ಧ 25-ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು.

2011 ರಲ್ಲಿ ಅವರು 34 ವರ್ಷಗಳ ಸುದೀರ್ಘ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಆಡಳಿತವನ್ನು ಕೆಳಗಿಳಿಸುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾದರು.

2021 ರಲ್ಲಿ, ಮಮತಾ ಬ್ಯಾನರ್ಜಿ ಅವರು ಟೈಮ್ಸ್ ನಿಯತಕಾಲಿಕದ ‘ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು’ ಪಟ್ಟಿಯಲ್ಲಿ ಕಾಣಿಸಿಕೊಂಡರು.

ಬ್ಯಾನರ್ಜಿಯವರ ಆದ್ಯತೆಯ ಉಡುಪು- ಬಿಳಿ ಸೀರೆ.ಕಿರಿದಾದ ಏಕವರ್ಣದ ಬಾರ್ಡರ್ ಇರು ಬಿಳಿ ಕಾಟನ್ ಸೀರೆ. ಈ ಸೀರೆಗಳನ್ನು ನೇಯ್ಗೆಗೆ ಹೆಸರುವಾಸಿಯಾದ ಸ್ಥಳವಾದ ಧನೇಖಾಲಿಯಲ್ಲಿ ತಯಾರಿಸಲಾಗುತ್ತದೆ.ರವೀಂದ್ರ ಸಂಗೀತ, ಟಾಗೋರ್ ಅವರ ಹಾಡುಗಳನ್ನು ಕೋಲ್ಕತ್ತಾದ ಟ್ರಾಫಿಕ್ ಲೈಟ್ಸ್​​ನಲ್ಲಿ ಪರಿಚಯಿಸಿದ್ದು ಮಮತಾ. ಅವರು ಪೌರಾಣಿಕ ಕವಿ ಕಾಜಿ ನಜ್ರುಲ್ ಇಸ್ಲಾಂ ಅವರ ಹಾಡುಗಳು ಮತ್ತು ಕವಿತೆಗಳನ್ನು ಪ್ರೀತಿಸುತ್ತಾರೆ. ಮಮತಾ ಕವಿಯತ್ರಿ ಕೂಡಾ ಹೌದು.

ಪೂರ್ಣ ಸಮಯ ರಾಜಕೀಯಕ್ಕೆ ಸೇರುವ ಮೊದಲು, ಬ್ಯಾನರ್ಜಿ ಸ್ಟೆನೋಗ್ರಾಫರ್, ಪ್ರಾಥಮಿಕ ಶಾಲಾ ಶಿಕ್ಷಕ, ಖಾಸಗಿ ಬೋಧಕ ಮತ್ತು ಸೇಲ್ಸ್​​ಗರ್ಲ್   ಆಗಿ ಕೆಲಸ ಮಾಡಿದ್ದರು.

ಮಮತಾ ಬ್ಯಾನರ್ಜಿ ಅವರು ಕವನ, ಪ್ರಬಂಧಗಳು ಮತ್ತು ಕಾದಂಬರಿಗಳ ಹಲವಾರು ಸಂಪುಟಗಳನ್ನು ರಚಿಸಿದ್ದಾರೆ. ಮಮತಾ ಉತ್ತಮ ಚಿತ್ರಕಲೆಗಾರರೂ ಆಗಿದ್ದಾರೆ. ಅವರ ಅನೇಕ ಪೇಂಟಿಂಗ್‌ಗಳನ್ನು ಮಾರಾಟ ಮಾಡಿ ಹಣವನ್ನು ತಮ್ಮ ಪಕ್ಷಕ್ಕೆ ನೀಡಿದ್ದಾರೆ.

ಬ್ಯಾನರ್ಜಿ ಬಂಗಾಳಿ ಜಾನಪದ ಕಲೆಯನ್ನು ಪ್ರೀತಿಸುತ್ತಾರೆ.ಅವರು ರಾಜ್ಯದ ದೂರದ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಕರಕುಶಲ ವಸ್ತುಗಳನ್ನು ಖರೀದಿಸುತ್ತಾರೆ. ಬ್ಯಾನರ್ಜಿ ಅವರು ಟೆಕ್ ಸೇವಿ. ತಮ್ಮ ಸರ್ಕಾರದ ಸಾಧನೆಗಳನ್ನು ಪೋಸ್ಟ್ ಮಾಡಲು ಸಾಮಾಜಿಕ ಮಾಧ್ಯಮವನ್ನು ನಿಯಮಿತವಾಗಿ ಬಳಸುತ್ತಾರೆ. ಫೇಸ್ ಬುಕ್ ನಲ್ಲಿ ಕೇಳಿದ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ.

ಇದನ್ನೂ ಓದಿ: Goa Politics: ಕಾಂಗ್ರೆಸ್ ಮಾತು ಕೇಳಿ ಬಿಜೆಪಿಯೊಂದಿಗೆ ಅರೆಹೊಂದಾಣಿಕೆ ರಾಜಕಾರಣ ನಾವು ಮಾಡಲ್ಲ: ಮಮತಾ ಬ್ಯಾನರ್ಜಿ

Published On - 12:11 pm, Wed, 5 January 22

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ