AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Goa Politics: ಕಾಂಗ್ರೆಸ್ ಮಾತು ಕೇಳಿ ಬಿಜೆಪಿಯೊಂದಿಗೆ ಅರೆಹೊಂದಾಣಿಕೆ ರಾಜಕಾರಣ ನಾವು ಮಾಡಲ್ಲ: ಮಮತಾ ಬ್ಯಾನರ್ಜಿ

TMC in Goa: ಕಾಂಗ್ರೆಸ್ ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ನೀವು ನಮ್ಮ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಬಹುದಾದರೆ ನಾವೇಕೆ ನಿಮ್ಮ ವಿರುದ್ಧ ಗೋವಾದಲ್ಲಿ ಸ್ಪರ್ಧಿಸಬಾರದು ಎಂದು ಪ್ರಶ್ನಿಸಿದರು.

Goa Politics: ಕಾಂಗ್ರೆಸ್ ಮಾತು ಕೇಳಿ ಬಿಜೆಪಿಯೊಂದಿಗೆ ಅರೆಹೊಂದಾಣಿಕೆ ರಾಜಕಾರಣ ನಾವು ಮಾಡಲ್ಲ: ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
TV9 Web
| Updated By: shivaprasad.hs|

Updated on: Dec 14, 2021 | 7:33 AM

Share

ಪಣಜಿ: ತೃಣಮೂಲ ಕಾಂಗ್ರೆಸ್ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamta Banerjee) ಸೋಮವಾರ (ಡಿ.13) ಗೋವಾದಲ್ಲಿ ‘ಖೇಲ್ ಜಾಟ್ಲೊ’ ಘೋಷಣೆ ಮೊಳಗಿಸುವ ಮೂಲಕ ವಿಧಾನಸಭೆ ಚುನಾವಣೆಗೆ ತಮ್ಮ ಪಕ್ಷದ ಬದ್ಧತೆ ಘೋಷಿಸಿದರು. ಗೋವಾದಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದುಕೊಳ್ಳುವ ಯಾವುದೇ ಮತದಾರ ಟಿಎಂಸಿಯನ್ನು ಬೆಂಬಲಿಸಬೇಕು ಎಂದು ಕೋರಿದರು. ಪಕ್ಷದ ಸ್ಥಳೀಯ ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ‘ಗೋವಾ ಎನ್ನುವುದು ಮುದ್ದಾಗಿರುವ ಸುಂದರ ಮತ್ತು ಬುದ್ಧಿವಂತ ರಾಜ್ಯ. ಇಲ್ಲಿ ಮುಖ್ಯಮಂತ್ರಿಯಾಗಬೇಕು ಎಂದು ನಾನು ಬಂದಿಲ್ಲ. ಚುನಾವಣೆ ಎದುರಿಸುವ ನಮ್ಮ ಅನುಭವವನ್ನು ಗೋವಾ ಜನರಿಗೆ ನೀಡಲು ಬಂದಿದ್ದೇನೆ’ ಎಂದರು.

40 ಸದಸ್ಯ ಬಲದ ಗೋವಾ ವಿಧಾನಸಭಾ ಚುನಾವಣೆಯು ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ. ಗೋವಾದ ಅತ್ಯಂತ ಹಳೆಯ ಪಕ್ಷವಾಗಿರುವ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು (Maharashtrawadi Gomantak Party – MGP) ಈಗಾಗಲೇ ಟಿಎಂಸಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಎರಡು ದಿನಗಳ ಭೇಟಿಗಾಗಿ ಗೋವಾಕ್ಕೆ ಭೇಟಿ ನೀಡಿರುವ ಮಮತಾ ಬ್ಯಾನರ್ಜಿ, ‘ಬಿಜೆಪಿಯನ್ನು ಸೋಲಿಸಬೇಕು ಎಂಬ ಉದ್ದೇಶ ಯಾರಿಗೇ ಇದ್ದರೂ, ನಮ್ಮನ್ನು ಬೆಂಬಲಿಸುವುದು ಅವರಿಗೆ ಬಿಟ್ಟ ವಿಷಯ’ ಎಂದರು. ಪಶ್ಚಿಮ ಬಂಗಾಳದ ಮಾದರಿಯಲ್ಲಿ ಗೋವಾಕ್ಕೂ ನಮ್ಮ ಬಳಿ ಒಂದು ಯೋಜನೆಯಿದೆ. ಅಧಿಕಾರಕ್ಕೆ ಬಂದ ಮೊದಲ ಆರು ತಿಂಗಳಲ್ಲಿ ಆ ಯೋಜನೆಯನ್ನು ಜಾರಿ ಮಾಡುತ್ತೇವೆ ಎಂದರು.

ಈ ಮೊದಲು ಗೋವಾದಲ್ಲಿ ಸ್ಪರ್ಧಿಸಬೇಕು ಎಂಬ ಆಲೋಚನೆ ನಮ್ಮ ಪಕ್ಷಕ್ಕೆ ಇರಲಿಲ್ಲ. ಆದರೆ ಇತರ ಪಕ್ಷಗಳು ಬಿಜೆಪಿಗೆ ಪ್ರಬಲ ಪ್ರತಿರೋಧ ಒಡ್ಡುತ್ತಿಲ್ಲ ಎನಿಸಿದಾಗ ನಾವು ಸ್ಪರ್ಧಿಸಬೇಕು ಎನಿಸಿತು. ಈವರೆಗೆ ನಾವು ಗೋವಾದಲ್ಲಿ ರಾಜಕಾರಣ ಮಾಡಿರಲಿಲ್ಲ. ಆದರೆ ಇಲ್ಲಿ ಯಾರೂ ಏನೂ ಮಾಡುತ್ತಿಲ್ಲ ಎಂದು ನಮಗೆ ಮನವರಿಕೆಯಾಯಿತು. ಬಿಜೆಪಿ ವಿರುದ್ಧ ಪ್ರಬಲ ಹೋರಾಟಕ್ಕೂ ಯಾರೂ ಸಿದ್ಧರಿರಲಿಲ್ಲ. ಹೀಗಾಗಿ ನಾವು ಇಲ್ಲಿಗೆ ಬರಬೇಕು ಎಂದುಕೊಂಡೆವು. ಕಾಂಗ್ರೆಸ್ ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ನೀವು ನಮ್ಮ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಸ್ಪರ್ಧಿಸಬಹುದಾದರೆ ನಾವೇಕೆ ನಿಮ್ಮ ವಿರುದ್ಧ ಗೋವಾದಲ್ಲಿ ಸ್ಪರ್ಧಿಸಬಾರದು. ನಿಮ್ಮೊಂದಿಗೆ ಕೆಲಸ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಇದೀಗ ನಮ್ಮ ಹೋರಾಟವನ್ನು ನಾವೇ ಮುನ್ನಡೆಸಲು ನಿರ್ಧರಿಸಿದ್ದೇವೆ. ನಿಮ್ಮ ಮಾತು ಕೇಳಿ ಬಿಜೆಪಿಯೊಂದಿಗೆ ಅರೆ ಹೊಂದಾಣಿಕೆಯ ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಗೋವಾದಲ್ಲಿ ‘ಖೇಲ್ ಜಾಟ್ಲೊ’ ಮೊಳಗಿಸಲಾಗುವುದು ಎಂದು ಘೋಷಿಸಿದರು. ಚಲನಚಿತ್ರಗಳು ಮತ್ತು ಫುಟ್​ಬಾಲ್ ಪ್ರೇಮ ಗೋವಾ ಮತ್ತು ಪಶ್ಚಿಮ ಬಂಗಾಳವನ್ನು ಬೆಸೆದಿವೆ. ಪಶ್ಚಿಮ ಬಂಗಾಳದ ಹಲವು ಫುಟ್​ಬಾಲ್ ತಾರೆಯರು ಗೋವಾಕ್ಕೆ ಬಂದು ಟಿಎಂಸಿ ಪರವಾಗಿ ಪ್ರಚಾರ ನಡೆಸಲಿದ್ದಾರೆ. ರೈಲ್ವೆ ಸಚಿವೆಯಾಗಿದ್ದಾಗ ಗೋವಾರದಲ್ಲಿ ಕೊಂಕಣ್ ರೈಲ್ವೆ ಯೋಜನೆ ಜಾರಿಯಾಗಲು ಸಾಕಷ್ಟು ಸಹಕಾರ ನೀಡಿದ್ದೆ. ಯೋಜನೆಯ ಉದ್ಘಾಟನೆಗೂ ಇಲ್ಲಿಗೆ ಬಂದಿದ್ದೆ. ಗೋವಾದಿಂದ ನಮ್ಮ ಪಕ್ಷ ಸ್ಪರ್ಧಿಸಬಹುದು ಎಂದು ಆ ದಿನಗಳಲ್ಲಿ ನಾನು ಊಹಿಸಿಯೂ ಇರಲಿಲ್ಲ ಎಂದರು.

ಪಶ್ಚಿಮ ಬಂಗಾಳದಲ್ಲಿ ಮಾನವಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದು ಬಿಂಬಿಸಲು ಬಿಜೆಪಿಯು ಬಾಂಗ್ಲಾದೇಶದ ವಿಡಿಯೊಗಳನ್ನು ತಿರುಚಿ, ಹಂಚುತ್ತಿದೆ. ಅಂಥ ವಿಡಿಯೊ ಒಂದರ ವಿರುದ್ಧ ನಾವು ಸುಪ್ರೀಂಕೋರ್ಟ್​ ಕದ ತಟ್ಟಿದ್ದೇವೆ. ಅವರು ಪಶ್ಚಿಮ ಬಂಗಾಳವನ್ನು, ಮಮತಾ ಬ್ಯಾನರ್ಜಿಯನ್ನು ಮುಗಿಸಬೇಕು ಎಂದುಕೊಂಡಿದ್ದಾರೆ. ಅವರಿಂದ ಏನು ಸಾಧ್ಯವೋ ಅದನ್ನು ಮಾಡಲಿ. ಅದಕ್ಕಾಗಿಯೇ ನಾವು ಇಲ್ಲಿಗೆ ಬಂದಿದ್ದೇವೆ. ಗೋವಾ ರಾಜ್ಯವನ್ನು ನಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು, ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಉದ್ದೇಶವಲ್ಲ. ಗೋವಾ ಜನರೇ ಚುನಾವಣೆಯಲ್ಲಿ ನಮ್ಮ ಪಕ್ಷದ ಮುಖ ಆಗಿರುತ್ತಾರೆ. ನಮ್ಮ ಅನುಭವವನ್ನು ಅವರೊಂದಿಗೆ ಹಂಚಿಕೊಳ್ಳುವುದು ಮಾತ್ರ ನಮ್ಮ ಉದ್ದೇಶ ಎಂದರು.

2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ವಿಫಲವಾಯಿತು. ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರರ ನೆರವಿನಿಂದ ಬಿಜೆಪಿ ಸರ್ಕಾರ ರಚಿಸಿತ್ತು.

ಇದನ್ನೂ ಓದಿ: ನೆಚ್ಚಿನ ಸಂಗಾತಿಯೊಂದಿಗೆ ಗೋವಾದ ಕಡಲತೀರದಲ್ಲಿ ವಿವಾಹವಾಗುವ ಬಯಕೆ ಹೊಂದಿದ್ದೀರಾ? ಇಲ್ಲಿದೆ ಪೂರ್ಣ ಮಾಹಿತಿ ಇದನ್ನೂ ಓದಿ: ಗೋವಾದ ಬುಡಕಟ್ಟು ಮಹಿಳೆಯರೊಂದಿಗೆ ಜಾನಪದ ನೃತ್ಯ ಮಾಡಿದ ಪ್ರಿಯಾಂಕಾ ಗಾಂಧಿ; ನಾಚಿಕೆಯಾಗಲ್ವ? ಎಂದ ಬಿಜೆಪಿ

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ