Majority Test: ಬಹುಮತವಿದ್ದರೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶ್ವಾಸಮತ ಯಾಚನೆ

| Updated By: ನಯನಾ ರಾಜೀವ್

Updated on: Aug 29, 2022 | 3:16 PM

ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿ ನಡೆಸಿದ ಬಳಿಕ ಕೋಪಗೊಂಡಿರುವ ದೆಹಲಿ ಮುಖ್ಯಮಮತ್ರಿ ಅರವಿಂದ್ ಕೇಜ್ರಿವಾಲ್ ತಮಗೆ ಬಹುಮತವಿದ್ದರೂ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದಾರೆ.

Majority Test: ಬಹುಮತವಿದ್ದರೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶ್ವಾಸಮತ ಯಾಚನೆ
Arvind Kejriwal
Follow us on

ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿರುದ್ಧ ಸಿಬಿಐ ದಾಳಿ ನಡೆಸಿದ ಬಳಿಕ ಕೋಪಗೊಂಡಿರುವ ದೆಹಲಿ ಮುಖ್ಯಮಮತ್ರಿ ಅರವಿಂದ್ ಕೇಜ್ರಿವಾಲ್ ತಮಗೆ ಬಹುಮತವಿದ್ದರೂ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದಾರೆ.

ಪಕ್ಷಾಂತರ ಮಾಡಲು ಹಲವು ಎಎಪಿ ಶಾಸಕರಿಗೆ 20 ಕೋಟಿ ರೂಪಾಯಿ ನೀಡುವ ಆಮಿಷವನ್ನು ಬಿಜೆಪಿ ಒಡ್ಡಿತ್ತು ಎಂದು ಆಮ್​ ಆದ್ಮಿ ಪಕ್ಷ ಈ ಹಿಂದೆ ಆರೋಪ ಮಾಡಿತ್ತು. ಹಾಗೆಯೇ ಬಿಜೆಪಿ ಸೇರದೇ ಇದ್ದರೆ ಸಿಬಿಐ ಮತ್ತು ಇಡಿ ಪ್ರಕರಣಗಳನ್ನು ದಾಖಲಿಸುವ ಮೂಲಕ ದೆಹಲಿಯಲ್ಲಿ ತನ್ನ ಸರ್ಕಾರವನ್ನು ಉರುಳಿಸಲು ಬಿಜೆಪಿ ಸಂಚು ರೂಪಿಸಿದೆ ಎಂದು ಆರೋಪಿಸಿತ್ತು.

ಅದರ ಮುಂದುವರೆದ ಭಾಗವಾಗಿ ಯಾರು ಬಿಜೆಪಿಯ ಕಡೆ ಇದ್ದಾರೆ ಎಷ್ಟು ಶಾಸಕರು ಆಮ್​ ಆದ್ಮಿ ಪಕ್ಷದ ಕಡೆ ಎಷ್ಟು ಶಾಸಕರಿದ್ದಾರೆ ಎಂದು ತಿಳಿಯಲು ಈ ಸಾಹಸಕ್ಕೆ ಕೈ ಹಾಕಿದ್ದಾರೆ.

70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ 62 ಆಪ್​ ಶಾಸಕರಿದ್ದರೆ, 8 ಮಂದಿ ಮಾತ್ರ ಬಿಜೆಪಿಗರಿದ್ದಾರೆ.
ಸಾಂವಿಧಾನಿಕ ಸಂಸ್ಥೆಗಳ ಮೂಲಕ ದಾಳಿ ನಡೆಸಿ ದೆಹಲಿ ಸರ್ಕಾರವನ್ನು ಅಸ್ಥಿರ ಮಾಡಲು ಕೇಂದ್ರ ಸರ್ಕಾರ ಸಂಚು ಹೂಡುತ್ತಿದೆ. ಇದರಿಂದ ಸೋಮವಾರ ನಡೆಯುವ ವಿಶೇಷ ಅಧಿವೇಶನದಲ್ಲಿ ಸರ್ಕಾರದ ಉಳಿವಿಗಾಗಿ ವಿಶ್ವಾಸಮತಯಾಚನೆ ನಡೆಯಲಿದೆ.