ದೆಹಲಿ: ಅಸ್ಸಾಂನಲ್ಲಿ ಈ ಬಾರಿಯೂ ಆಡಳಿತಾರೂಢ ಎನ್ಡಿಎ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ ಎಂದು Tv9-Polstrat ಸಮೀಕ್ಷೆ ತಿಳಿಸಿದೆ. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಗಳಿಸುತ್ತದೆ ಎಂದು ತಿಳಿಸುವ ಸಮೀಕ್ಷೆ, ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಮತಗಳಿಕೆ ಪ್ರಮಾಣವು ಎನ್ಡಿಎ ಮೈತ್ರಿಕೂಟಕ್ಕಿಂತಲೂ ಹೆಚ್ಚಾಗಿರುತ್ತದೆ ಎಂದು ಹೇಳಿದೆ.
ಅಸ್ಸಾಂನಲ್ಲಿ ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6ರಂದು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು. ಒಟಟು 126 ಸದಸ್ಯ ಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಹುಮತ ಗಳಿಸಲು ಯಾವುದೇ ಪಕ್ಷ ಅಥವಾ ಮೈತ್ರಿಕೂಟವು 64 ಸ್ಥಾನ ಪಡೆಯಬೇಕಿದೆ. ಮೇ 2ರಂದು ಮತಎಣಿಕೆ ನಡೆಯಲಿದ್ದು ಫಲಿತಾಂಶ ಪ್ರಕಟವಾಗಲಿದೆ.
ಅಸ್ಸಾಂನಲ್ಲಿ Tv9-Polstrat ಸಮೀಕ್ಷೆ ವೇಳೆ ಪ್ರತಿಕ್ರಿಯಿಸಿದ್ದ ಪುರುಷ ಮತದಾರರ ಪೈಕಿ ಶೇ 41.30 ಮಂದಿ ಎನ್ಡಿಎಗೆ, ಶೇ 44.60 ಮಂದಿ ಯುಪಿಎ ಪರ ಮತ ಚಲಾಯಿಸಿದ್ದಾಗಿ ಹೇಳಿದ್ದರು. ಮಹಿಳೆಯರ ಪೈಕಿ ಶೇ 42.10 ಮಂದಿ ಎನ್ಡಿಎಗೆ, ಶೇ 46.20 ಮಂದಿ ಯುಪಿಎಗೆ ಮತ ಚಲಾಯಿಸಿದ್ದಾಗಿ ತಿಳಿಸಿದ್ದರು. ಒಟ್ಟಾರೆ ಮತಗಳಿಕೆಯಲ್ಲಿ ಎನ್ಡಿಎ ಶೇ 41.70, ಯುಪಿಎ ಶೇ 45.40, ಇತರರು ಶೇ 12.90 ಪಾಲು ಪಡೆಯುವ ಸಾಧ್ಯತೆಯಿದೆ.
ಸಮುದಾಯವಾರು ವಿಶ್ಲೇಷಣೆಯಲ್ಲಿ ಎಸ್ಸಿ/ಎಸ್ಟಿಗೆ ಸೇರಿದವರಲ್ಲಿ ಎನ್ಡಿಎಗೆ ಶೇ 53.90, ಯುಪಿಗೆ ಶೇ 31.90, ಇತರರಿಗೆ ಶೇ 14.20 ಮತ ಚಲಾಯಿಸಿದ್ದಾರೆ. ಮುಸ್ಲಿಮರ ಮತಗಳು ಯುಪಿಎಗೆ ಶೇ 79.90 ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೆಯಾಗಿದೆ. ಎನ್ಡಿಎಗೆ ಶೇ 13.90ರಷ್ಟು ಮತ ಸಿಕ್ಕಿದೆ. ಹಿಂದೂಗಳಲ್ಲಿ ಇತರ ಸಮುದಾಯದ ಮತಗಳು ಎನ್ಡಿಎಗೆ ಶೇ 57.90 ಹೆಚ್ಚಾಗಿ ಬಿದ್ದಿವೆ. ಯುಪಿಎಗೆ ಶೇ 24.90 ಮತಗಳು ಸಿಕ್ಕಿವೆ.
ಒಟ್ಟಾರೆ ಮತಗಳಿಕೆಯಲ್ಲಿ ಯುಪಿಎ ಶೇ 45.40 ಮುಂದಿದೆ. ಎನ್ಡಿಎ ಶೇ 41.70 ಮತಗಳಿಕೆ ಕಡಿಮೆಯಿದೆ. ಆದರೆ ಸ್ಥಾನಗಳಿಕೆ ವಿಚಾರದಲ್ಲಿ ಯುಪಿಎ 55-65 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆಯಿದೆ. ಆದರೆ ಎನ್ಡಿಎ 59-69 ಸ್ಥಾನಗಳೊಂದಿಗೆ ಅಧಿಕಾರ ಉಳಿಸಿಕೊಳ್ಳಬಹುದು ಎಂದು ಸಮೀಕ್ಷೆಯು ಭವಿಷ್ಯ ನುಡಿದಿದೆ.
(Tv9 Bharatvarsh exit poll results 2021 polstrat Assam assembly elections exit poll updates in Kannada)
ಇದನ್ನೂ ಓದಿ: Exit Poll Results 2021: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧ್ಯತೆ; Tv9-Polstrat ಸಮೀಕ್ಷೆ
ಇದನ್ನೂ ಓದಿ: Exit Poll Results 2021: ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಹಿನ್ನಡೆ, ಡಿಎಂಕೆ ಗದ್ದುಗೇರುವ ಸಾಧ್ಯತೆ; Tv9-Polstrat ಸಮೀಕ್ಷೆ
Published On - 9:17 pm, Thu, 29 April 21