TV9 WITT Summit 2024: ಭಾರತವು ಜಾಗತಿಕ ಸಾಫ್ಟ್ ಪವರ್ ಆಗಿ ಬೆಳೆಯುತ್ತಿದೆ, ಇದು ನಮ್ಮ ಭವಿಷ್ಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 24, 2024 | 12:59 PM

ದೇಶದ ನಂಬರ್​​ ಒನ್​​ ನೆಟ್​​​ವರ್ಕ್​​ ಟಿವಿ9 ಭಾರತದ ಮುಂದೆ ಮಹತ್ವದ ಕಾರ್ಯಕ್ರಮವೊಂದನ್ನು ನೀಡುತ್ತಿದೆ. ವಾಟ್ ಇಂಡಿಯಾ ಟುಡೇ ಗ್ಲೋಬಲ್ ಶೃಂಗಸಭೆ 2024 ಕಾರ್ಯಕ್ರಮದ ಮೂಲಕ ಭಾರತ ಅಮೃತ್​​ ಕಾಲದ ಬಗ್ಗೆ ಚರ್ಚೆಯನ್ನು ನಡೆಸಲು ವೇದಿಕೆಯನ್ನು ಸಜ್ಜುಗೊಳಿಸಿದೆ. ಫೆ.25ರಿಂದ ಫೆ.27ರವರೆಗೆ ಮೂರು ದಿನಗಳ ಕಾರ್ಯಕ್ರಮಗಳನ್ನು ನಡೆಸಲಿದೆ. ಪ್ರಧಾನಿ ಮೋದಿ, ಗೃಹಸಚಿವ ಅಮಿತ್​​ ಶಾ ಸೇರಿದಂತೆ ಅನೇಕ ನಾಯಕರು ಹಾಗೂ ಉದ್ಯಮಿಗಳು ಭಾಗವಹಿಸುತ್ತಿದ್ದಾರೆ.

TV9 WITT Summit 2024: ಭಾರತವು ಜಾಗತಿಕ ಸಾಫ್ಟ್ ಪವರ್ ಆಗಿ ಬೆಳೆಯುತ್ತಿದೆ, ಇದು ನಮ್ಮ ಭವಿಷ್ಯ
ಸಾಂದರ್ಭಿಕ ಚಿತ್ರ
Follow us on

ಭಾರತದ ನಂಬರ್​​ ಒನ್​​ ನೆಟ್​​​ವರ್ಕ್​​ ಟಿವಿ9 ಆಯೋಜಿಸಿರುವ ವಾಟ್ ಇಂಡಿಯಾ ಟುಡೇ ಗ್ಲೋಬಲ್ ಶೃಂಗಸಭೆ 2024 (What India Thinks Today Global Summit) ಫೆ.25ರಿಂದ ಫೆ.27ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅವರು India: Poised For The Next Big Leap ಕುರಿತು ಸಂವಾದ ನಡೆಸಲಿದ್ದಾರೆ. ಇದು ಟಿವಿ9 ನೆಟ್​​​ವರ್ಕ್​​ ನಡೆಸುತ್ತಿರುವ ಎರಡನೇ ಆವೃತ್ತಿಯಾಗಿದ್ದು, ಬಹುತೇಕ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಾರ್ಯಕ್ರಮವನ್ನು ಮುಂದು ನೋಡುತ್ತಿದೆ. ಭಾರತ ಸೇರಿದಂತೆ ಜಗತ್ತಿನ ಬೇರೆ ಬೇರೆ ದೇಶದ ನಾಯಕರು ಹಾಗೂ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಟಿವಿ9 ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇ 2047ಕ್ಕೆ ಭಾರತ ಅಮೃತ್​​ ಕಾಲದ ಕನಸನ್ನು ನನಸು ಮಾಡುವುದು. ಆ ಮೂಲಕ ಭಾರತದ ಮುಂದೆ ಇರುವ ಸಾವಲುಗಳು ಹಾಗೂ ಮುಖ್ಯ ಉದ್ದೇಶಗಳೇನು ಏನು ಎಂಬುದನ್ನು ಈ ಮೂಲಕ ತಿಳಿಸಲಾಗುವುದು. ಮುಂದಿನ ಯೋಜನೆಗಳೇನು? ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇದಲ್ಲದೇ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ಹೇಗೆ ಜಾಗತಿಕ ಸಾಫ್ಟ್ ಪವರ್ ಆಗಿ ಹೊರಹೊಮ್ಮಿದೆ ಎಂಬ ಬಗ್ಗೆ ಸಂವಾದ ನಡೆಸಲಿದ್ದಾರೆ. ಜತೆಗೆ ಈ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ, ಹಲವು ಪ್ರದರ್ಶನಗಳು ನಡೆಯಲಿದೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತದ ಚಿತ್ರಣ ಬದಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ತಮ್ಮ ಬಹುದೊಡ್ಡ ಸ್ಥಾನಮಾನವನ್ನು ಸ್ಥಾಪಿಸಿಕೊಂಡಿದೆ. ಭಾರತೀಯ ಕಲೆ, ಸಂಸ್ಕೃತಿಯನ್ನು ಹೆಚ್ಚಿಸುವ ಹಾಗೂ ವಿದೇಶದ ಮುಂದೆ ಭಾರತ ಹೇಗಿದೆ ಎಂಬುದನ್ನು ತೋರಿಸಲು ದ್ವಿಪಕ್ಷೀಯ ಸಂಬಂಧಗಳನ್ನು ವೃದ್ಧಿಸಿಕೊಳ್ಳುತ್ತಿದೆ. ಜತೆಗೆ ಭಾರತ ವ್ಯಾಪರ ಹಾಗೂ ಆರ್ಥಿಕತೆ ಮಹತ್ವದ ಸಾಧನೆಯನ್ನು ಮಾಡಿದೆ. ಈ ಹಿಂದೆ ಯಾವ ಸರ್ಕಾರಗಳು ತೆಗೆದುಕೊಳ್ಳದ ನಿರ್ಧಾರಗಳನ್ನು ಮೋದಿ ಸರ್ಕಾರ ತೆಗೆದುಕೊಳ್ಳುತ್ತಿದೆ.

ಭಾರತವು ಸಾಂಸ್ಕೃತಿಕ ಪರಂಪರೆಯನ್ನು ಉಳಿಯಲು ಮೋದಿ ನಿರಂತರ ಕೆಲಸ:

ಭಾರತವು ತನ್ನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಲು ನಿರಂತರವಾಗಿ ಕೆಸಲ ಮಾಡುತ್ತಿದೆ. ಭಾರತ ತನ್ನ ಹಳೆಯ ವಾಸ್ತುಶಿಲ್ಪಗಳನ್ನು ಮತ್ತೆ ಪಡೆಯಿತ್ತಿದೆ. ಹಾಗೂ ವಿದೇಶಗಳಿಗೆ ತನ್ನ ಸಾಂಸ್ಕೃತಿಕ ಪರಂಪರೆಯ ಅವಶೇಷಗಳನ್ನು ನೀಡುತ್ತಿದೆ. ಕಳೆದ ಐದು ದಶಕಗಳಲ್ಲಿ ಕೇವಲ ಎಂಟು ಬಾರಿ ಮಾತ್ರ ಈ ಅವಶೇಷಗಳನ್ನು ಭಾರತದಿಂದ ಹೊರಗೆ ಕಳುಹಿಸಲಾಗಿದೆ. 1976 ಮತ್ತು 2012ರಲ್ಲಿ ಶ್ರೀಲಂಕಾಕ್ಕೆ, 1993 ಮತ್ತು 2022 ರಲ್ಲಿ ಮಂಗೋಲಿಯಾಕ್ಕೆ, 1994 ಮತ್ತು 2007 ರಲ್ಲಿ ಸಿಂಗಾಪುರಕ್ಕೆ, 1995 ರಲ್ಲಿ ದಕ್ಷಿಣ ಕೊರಿಯಾ ಮತ್ತು 1995 ರಲ್ಲಿ ಥೈಲ್ಯಾಂಡ್‌ ತನ್ನ ಸಾಂಸ್ಕೃತಿಕ ಪರಂಪರೆಯ ಅವಶೇಷಗಳನ್ನು ನೀಡಿದೆ.

ಇದನ್ನೂ ಓದಿ: ಟಿವಿ9 ನೆಟ್‌ವರ್ಕ್‌ ಕಾರ್ಯಕ್ರಮದಲ್ಲಿ ದೇಶದ ಪ್ರಧಾನ ಸೇವಕ ಮೋದಿ ಭಾಗಿ

ಸಂಸ್ಕೃತಿಯನ್ನು ಉತ್ತೇಜಿಸಲು ಮೋದಿ ಮೃದುತ್ವ:

ಪ್ರಧಾನಿ ಮೋದಿ ಅವರು ಭಾರತದ ಸಂಸ್ಕೃತಿ ವಿಚಾರದಲ್ಲಿ ಮೃದು ಮನೋಭಾವನೆಯನ್ನು ಹೊಂದಿದೆ. ಈ ಮೂಲಕ ಭಾರತ ತನ್ನ ಉತ್ತಮ ರಾಜತಾಂತ್ರಿಕ ವಿಚಾರಗಳನ್ನು ಮುಂದುವರಿಸುತ್ತಿದೆ. ಭಾರತದ ಈ ಮೂಲಕ ಐತಿಹಾಸಿಕ ಮೈಲುಗಲ್ಲುಗಳನ್ನು ಸಾಧಿಸುತ್ತಿದೆ. ಮೋದಿ ಅವರು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ವಿಚಾರಗಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ.

ಬಾಂಗ್ಲಾದೇಶ, ಮಂಗೋಲಿಯಾ, ಲಿಬಿಯಾದಲ್ಲಿ ಭಾರತೀಯ ಮಿಷನ್‌ಗಳಲ್ಲಿ ಕೆಲಸ ಮಾಡಿದ ರಾಯಭಾರಿ ಅನಿಲ್ ತ್ರಿಗುಣಾಯತ್ ಹೇಳುತ್ತಾರೆ, ಬೌದ್ಧಧರ್ಮವು ಭಾರತದ ಸಾಂಸ್ಕೃತಿಕ ಮತ್ತು ನಾಗರಿಕ ಪರಂಪರೆಯಾಗಿದೆ, ಇದರಲ್ಲಿ ಆಗ್ನೇಯ ಏಷ್ಯಾವು ಪ್ರಮುಖ ಕೊಂಡಿಯಾಗಿದೆ. ಇದು ಭಾರತದ ಸಾಫ್ಟ್ ಪವರ್ ಸ್ಪೆಕ್ಟ್ರಮ್ ಮತ್ತು ಟೂಲ್‌ಕಿಟ್‌ನ ಅವಿಭಾಜ್ಯ ಅಂಗವಾಗಿದೆ.

ಭಾರತದ ಪ್ರಭಾವವನ್ನು ಹೆಚ್ಚಿಸುವಲ್ಲಿ ಇದು ಸಹಾಯ ಮಾಡಿ

ಭಾರತದ ಮೃದು ಶಕ್ತಿಗೆ ಮತ್ತೊಂದು ಉದಾಹರಣೆ, ಅಗತ್ಯವಿರುವ ದೇಶಗಳಿಗೆ COVID-19 ಲಸಿಕೆಗಳನ್ನು ಕಳುಹಿಸುವುದು, ಕಳೆದ ವರ್ಷ G20 ಶೃಂಗಸಭೆಯಲ್ಲಿ ಸೇವೆ ಸಲ್ಲಿಸಿದ ರಾಗಿ-ಕೇಂದ್ರಿತ ಮೆನು, ಅಫ್ಘಾನಿಸ್ತಾನದಲ್ಲಿ ಸಲ್ಮಾ ಅಣೆಕಟ್ಟಿನ ನಿರ್ಮಾಣ ಮತ್ತು ಕಾಂಬೋಡಿಯಾದ ಅಂಕೋರ್ ವಾಟ್ ದೇವಾಲಯದ ಮರುಸ್ಥಾಪನೆಗೆ ಧನಸಹಾಯ ಇವುಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸುವಲ್ಲಿ ನೆರವಾಗಿವೆ. ಜತೆಗೆ ಇದು ಪ್ರಧಾನಿ ಮೋದಿಯನ್ನು ವ್ಯಕ್ತಿತ್ವ ಮತ್ತು ವಿಶ್ವ ನಾಯಕನನ್ನಾಗಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:59 am, Thu, 22 February 24