TV9 What India Thinks Today: ಟಿವಿ9 ನೆಟ್‌ವರ್ಕ್ ಕಾರ್ಯಕ್ರಮದಲ್ಲಿ ದೇಶದ ಪ್ರಧಾನ ಸೇವಕ ಮೋದಿ ಭಾಗಿ
ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಭಾರತ ಬಹುದೊಡ್ಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. TV9 ನೆಟ್‌ವರ್ಕ್ ಪ್ರತಿ ವರ್ಷದಂತೆ ಈ ಬಾರಿಯೂ ದೊಡ್ಡ ಕಾರ್ಯಕ್ರಮವನ್ನು ಮಾಡುತ್ತಿದೆ. 'ವಾಟ್ ಇಂಡಿಯಾ ಥಿಂಕ್ಸ್ ಟುಡೇ' ಎಂಬ ಕಾರ್ಯಕ್ರಮದಲ್ಲಿ ಮೋದಿ ಅವರು ಸೇರಿಸಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
TV9 ನೆಟ್‌ವರ್ಕ್ ಪ್ರತಿ ವರ್ಷದಂತೆ ಈ ಬಾರಿ ದೊಡ್ಡ ಕಾರ್ಯಕ್ರಮವನ್ನು ಮಾಡುತ್ತಿದೆ. ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (TV9 What India Thinks Today) ಎಂಬ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಫೆ.25ರಿಂದ ಫೆ.27ರವರಗೆ ದೆಹಲಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಕೇಂದ್ರ ಸರ್ಕಾರದ ಸಚಿವರು ಒದೊಂದು ವಿಚಾರದ ಬಗ್ಗೆ ಸಂವಾದ ನಡೆಸಲಿದ್ದಾರೆ. ಇನ್ನು ಈ ಕಾರ್ಯಕ್ರಮದ ನೇತೃತ್ವವನ್ನು ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುನ್ ದಾಸ್ ಅವರು ವಹಿಸಿಕೊಂಡಿದ್ದಾರೆ.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. 2014ರಿಂದ ಇಲ್ಲಿಯವರೆಗೆ ದೇಶದ ಅಭಿವೃದ್ಧಿಯಲ್ಲಿ, ಸಂಸ್ಕೃತಿಯಲ್ಲಿ, ಯುವಜನತೆಗಳನ್ನು ಪೋತ್ಸಾಹವನ್ನು, ಇತರ ರಾಷ್ಟ್ರಗಳ ಜತೆಗಿನ ಉತ್ತಮ ಸಂಬಂಧಗಳನ್ನು ಬೆಳೆಸಿಕೊಂಡು ಬಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು POISED FOR THE NEXT BIG LEAP ಎಂಬ ವಿಚಾರದ ಬಗ್ಗೆ ಮಾತನಾಡಲಿದ್ದಾರೆ. ಭಾರತ ಮುಂದೆ ಅಮೃತ್ ಕಾಲದ ಕಲ್ಪನೆ ಇದೆ. ಇದಕ್ಕೆ ಪೂರಕವಾಗುವಂತೆ ಭಾರತ ಮತ್ತು ಆಡಳಿತ ಏನು? ಮಾಡಬೇಕು ಎಂಬ ಬಗ್ಗೆ ದೇಶದ ಯುವ ಸಮೂಹಕ್ಕೆ ಮೋದಿ ತಿಳಿಸಲಿದ್ದಾರೆ.
ಭಾರತಕ್ಕೆ ಜಾಗತಿಕ ಸ್ಥಾನಮಾನ ನೀಡಿದ ಮೋದಿ
ಮೋದಿ ಅವರ ಜಾಗತಿಕ ಪ್ರವಾಸ ಹಾಗೂ ಭಾರತ ಸೇರಿದಂತೆ ಇತರ ದೇಶಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಭಾರತಕ್ಕೆ ನೀಡಿದ ಸ್ಥಾನ ಗಮನಿಸಲೇಬೇಕು. ವಿದೇಶಿ ರಾಷ್ಟ್ರಗಳ ಜತೆಗೆ ಭಾರತ ಹೊಂದಿರುವ ಸಂಬಂಧಗಳೇ ಇದಕ್ಕೆ ಸಾಕ್ಷಿಯಾಗಿದೆ. ಆರ್ಥಿಕ ಬೆಳವಣಿಯಲ್ಲಿ, ಮಾನವ ಅಭಿವೃದ್ಧಿ, ಭ್ರಷ್ಟಾಚಾರ-ವಿರೋಧಿ ಮತ್ತು ಸಾಮಾಜಿಕ ಏಕೀಕರಣ ಪ್ರಯತ್ನಕ್ಕೆ ಭಾರತ ಶ್ರಮವನ್ನು ಇಡಿ ಜಗತ್ತಿನ ಮುಂದೆ ಮೋದಿ ತೋರಿಸಿಕೊಟ್ಟಿದ್ದಾರೆ.
ಮೋದಿ ತಮ್ಮ ಆಡಳಿತ ಸಂದರ್ಭದಲ್ಲಿ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಬಹುಪಕ್ಷೀಯ ಶೃಂಗಸಭೆ ನಡೆಸಿದ್ದಾರೆ. ಅದು ಪ್ರಪಂಚವೇ ಭಾರತದತ್ತ ನೋಡುವಂತೆ ಮಾಡಿದೆ. ಮೋದಿ ಸರ್ಕಾರ ಆರ್ಥಿಕತೆ, ರಾಜತಾಂತ್ರಿಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡಿತ್ತು. ಇದರ ಜತೆಗೆ ಚೀನಾದ ಬೆಳವಣಿಗೆಯನ್ನು ಸಮತೋಲನಗೊಳಿಸಲು ಮತ್ತು ಪ್ರಾದೇಶಿಕ ಮುಕ್ತತೆ ಮತ್ತು ಸ್ವಾಯತ್ತತೆಯನ್ನು ಉತ್ತೇಜಿಸಲು ಮೋದಿ ಸರ್ಕಾರವು ಪ್ರಮುಖ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬೆಳೆಸಿದೆ.
ನೇಪಾಳ, ಸಿಂಗಾಪುರ, ಫ್ರಾನ್ಸ್, ಮಾರಿಷಸ್ ಮತ್ತು ಶ್ರೀಲಂಕಾ ಹಾಗೂ ಅಬುಧಾಬಿ UPI ಮತ್ತು ರುಪೇ ಕಾರ್ಡ್ ಸೇವೆಗಳನ್ನು ಪ್ರಾರಂಭಿಸಿದ್ದು, UAE ಯು ಭಾರತದ UPI ಪಾವತಿ ಸೇವೆಯನ್ನು ಸ್ವೀಕರಿಸುವ 7ನೇ ರಾಷ್ಟ್ರವಾಗಿದೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೆ ಕಾರಣ ಹೇಳಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತದ ‘ಸಾಫ್ಟ್ ಪವರ್’ ಹೆಚ್ಚುತ್ತಿದೆ:
ಭೌಗೋಳಿಕ ರಾಜಕಾರಣದ ಕ್ಷೇತ್ರದಲ್ಲಿ ಭಾರತ ಬಹುದೊಡ್ಡ ಸಾಧನೆಯನ್ನು ಮಾಡುತ್ತಿದೆ. ಭಾರತೀಯ ಸಾಂಸ್ಕೃತಿಕ ಅಂಶಗಳ ಮೇಲೆ ಮೋದಿ ಅವರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಕಳೆದ 10 ವರ್ಷಗಳಲ್ಲಿ ರಾಷ್ಟ್ರದ ಸ್ವಾಭಾವಿಕ ಮೌಲ್ಯಗಳು, ಪದ್ಧತಿಗಳು ಮತ್ತು ಸಾಂಸ್ಕೃತಿಕ ಪರಂಪರೆಯು ಹೆಚ್ಚುತ್ತಿದೆ. COVID-19 ಸಂದರ್ಭದಲ್ಲಿ ಭಾರತ ಬಹುದೊಡ್ಡ ಸಹಾಯವನ್ನು ಮಾಡಿದೆ. ಇತರ ರಾಷ್ಟ್ರಗಳಿಗೆ ಭಾರತದ COVID-19 ವ್ಯಾಕ್ಸಿನ್ನ್ನು ನೀಡುವ ಮೂಲಕ ಆಪತ್ಭಾಂದವಾಗಿತ್ತು.
ಮೋದಿಯಿಂದ ಭಾರತ ವಿಶ್ವಗುರುವಾಗುತ್ತಿದೆ:
ಭಾರತ ಜಗತ್ತಿನ ಮುಂದೆ ವಿಶ್ವಗುರುವಾಗುತ್ತಿದೆ. ಮೋದಿ ಅವರು ಈ ನಿಟ್ಟಿನಲ್ಲಿ ಕಠಿಣ ಕೆಲಸಗಳನ್ನು ಮಾಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರತದ ನಾಯಕತ್ವ, ಜಿ20 ಶೃಂಗಸಭೆಯ ನೇತೃತ್ವಗಳನ್ನು ವಹಿಸಿತ್ತು. ರಾಜತಾಂತ್ರಿಕ ನಿರ್ಧಾರಗಳನ್ನು ಕೂಡ ಭಾರತ ಮಾಡಿದೆ. ದೇಶ ದೇಶಗಳ ನಡುವಿನ ಯುದ್ಧದಲ್ಲೂ ಭಾರತ ತನ್ನ ನಿಲುವಿನಲ್ಲಿ ತೆಗೆದುಕೊಂಡ ನಿರ್ಧಾರಗಳು ಜಾಗತಿಕ ಮಟ್ಟದಲ್ಲಿ ಮಹತ್ವದ ಸದ್ದು ಮಾಡಿತ್ತು. ಹಾಗೆ ಎಲ್ಲ ವಿದೇಶಗಳ ಬಿಕ್ಕಟ್ಟಿನಲ್ಲಿ ಭಾರತ ಮಹತ್ವ ಪಾತ್ರವನ್ನು ವಹಿಸಿತ್ತು. ಇನ್ನು ಭಾರತಕ್ಕೆ ಭಾರೀ ಪೈಪೋಟಿ ನೀಡುತ್ತಿದ್ದ ಚೀನಾಕ್ಕೆ ಸರಿಯಾದ ಉತ್ತರವನ್ನು ಭಾರತ ನೀಡಿತ್ತು. ಗಡಿ ವಿವಾದ ಅಥವಾ ಏಷ್ಯಾ ಭಾಗದಲ್ಲಿ ಚೀನಾ ಮಾಡುತ್ತಿದ್ದ ಹಸ್ತಕ್ಷೇಪಕ್ಕೆ ಭಾರತ ಸರಿಯಾದ ಉತ್ತರವನ್ನು ನೀಡಿತ್ತು. ಇದೀಗ ಭಾರತವೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದಕ್ಕೆ ಪ್ರಮುಖ ಕಾರಣವಾದದ್ದು ಮೋದಿ ನಾಯಕತ್ವ ಹಾಗೂ ಆಡಳಿತ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:30 am, Wed, 21 February 24