AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಜಿ ಕೇಂದ್ರ ಸಚಿವ ಚಿದಂಬರಂ ಟ್ವೀಟ್ ಖಂಡಿಸಿ ಬಂಧನಕ್ಕೆ ಆಗ್ರಹಿಸಿದ ಟ್ವಿಟ್ಟಿಗರು

ಪ್ರತಿದಿನ ದಿನಪತ್ರಿಕೆಗಳಲ್ಲಿ ಓದುತ್ತಿರುವ ಸುದ್ದಿ ಸುಳ್ಳೇ? ಸುದ್ದಿವಾಹಿನಿಗಳು ಪ್ರಸಾರ ಮಾಡುತ್ತಿರುವ ದೃಶ್ಯಗಳು ಸಹ ಸುಳ್ಳೇ? ನಮ್ಮ ದೇಶದ ವೈದ್ಯರು ಸುಳ್ಳು ಹೇಳುತ್ತಿದ್ದಾರೇ? ಎಂದು ಪಿ. ಚಿದಂಬರ್ ಟ್ವೀಟ್ ಮೂಲಕ ಪ್ರಶ್ನಿಸಿದ್ದರು.

ಮಾಜಿ ಕೇಂದ್ರ ಸಚಿವ ಚಿದಂಬರಂ ಟ್ವೀಟ್ ಖಂಡಿಸಿ ಬಂಧನಕ್ಕೆ ಆಗ್ರಹಿಸಿದ ಟ್ವಿಟ್ಟಿಗರು
ಪಿ. ಚಿದಂಬರಂ (ಸಂಗ್ರಹ ಚಿತ್ರ)
Follow us
guruganesh bhat
|

Updated on: Apr 30, 2021 | 4:55 PM

ದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ವಿರುದ್ಧ ಇಂದು ಟ್ವಿಟ್ಟಿಗರು ಸಿಡಿದೆದ್ದಿದ್ದರು. ಏಪ್ರಿಲ್ 28ರಂದು ಪಿ.ಚಿದಂಬರಂ ಮಾಡಿದ್ದ ಟ್ವೀಟ್ ವಿರುದ್ಧ ನೆಟ್ಟಿಗರು ಟ್ವೀಟ್​ಗಳ ಮೂಲಕ ಪ್ರತಿಭಟನೆ ನಡೆಸಿದರು. ಏಪ್ರಿಲ್ 28ರಂದು ಕೇಂದ್ರ ಆರೋಗ್ಯ ಸಚಿವರ ಆಮ್ಲಜನಕ ಮತ್ತು ಕೊರೊನಾ ಸಂಬಂಧಿತ ಔಷಧಗಳ ಕೊರತೆ ಇಲ್ಲ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವೂ ಔಷಧಗಳ ಕೊರತೆ ಇಲ್ಲ ಎಂದು ನನಗೆ ತಿಳಿಸಿದೆ. ಆದರೆ ಪ್ರತಿದಿನ ದಿನಪತ್ರಿಕೆಗಳಲ್ಲಿ ಓದುತ್ತಿರುವ ಸುದ್ದಿ ಸುಳ್ಳೇ? ಸುದ್ದಿವಾಹಿನಿಗಳು ಪ್ರಸಾರ ಮಾಡುತ್ತಿರುವ ದೃಶ್ಯಗಳು ಸಹ ಸುಳ್ಳೇ? ನಮ್ಮ ದೇಶದ ವೈದ್ಯರು ಸುಳ್ಳು ಹೇಳುತ್ತಿದ್ದಾರೇ? ಎಂದು ಪಿ. ಚಿದಂಬರಂ ಟ್ವೀಟ್ ಮೂಲಕ ಪ್ರಶ್ನಿಸಿದ್ದರು. ಅಷ್ಟಕ್ಕೇ ನಿಲ್ಲದ ಅವರು, ಜನರನ್ನು ಮೂರ್ಖರು ಎಂದು ತಿಳಿದಿರುವ ಸರ್ಕಾರದ ವಿರುದ್ಧ ಜನಸಾಮಾನ್ಯರು ದಂಗೆ ಏಳಬೇಕು ಎಂದು ಹರಿಹಾಯ್ದಿದ್ದರು.

ಹಿರಿಯ ಕಾಂಗ್ರೆಸ್ ನಾಯಕ ಈ ಟ್ವಿಟ್ ಮಾಡಿದ ಎರಡು ದಿನಗಳ ನಂತರ ಕೆಲ ಟ್ವಿಟಿಗರು ಅವರ ವಿರುದ್ಧ ಸಿಡಿದುಬಿದ್ದಿದ್ದಾರೆ. ಪಿ. ಚಿದಂಬರಂ ಅವರ ಟ್ವೀಟ್ ದೇಶದ್ರೋಹವನ್ನು ಪ್ರಚೋದಿಸುವಂತಿದ್ದು, ಅವರನ್ನು ಬಂಧಿಸುವಂತೆ ಒತ್ತಾಯ ಮಾಡಿದ್ದಾರೆ. ಜತೆಗೆ ಬಿಜೆಪಿಯ ಐಟಿ ಸೆಲ್ ಸಹ ಪಿ. ಚಿದಂಬರಂ ಅವರ ವಿರುದ್ಧ ಸಿಡಿದಿದ್ದು, ಅವರ ಟ್ವೀಟ್ ದೇಶ ವಿರೋಧಿಯಾಗಿದೆ ಎಂದು ಟ್ವೀಟ್​ ಮಾಡಿದೆ.

ಇದನ್ನೂ ಓದಿ: ಭಾರತದ ಕೊವಿಡ್​ ಸೋಂಕಿತರಿಗಾಗಿ ಜಾಗತಿಕ ಮಟ್ಟದಲ್ಲಿ ಧ್ವನಿ ಎತ್ತಿದ ಪ್ರಿಯಾಂಕಾ ಪತಿ ನಿಕ್​ ಜೋನಸ್​

ಕೊವಿಡ್​ ನಿಯಂತ್ರಣಕ್ಕೆ ಮತ್ತಷ್ಟು ಬಿಗಿಕ್ರಮಗಳನ್ನು ಸೂಚಿಸಿದ ಕೇಂದ್ರ ಗೃಹ ಇಲಾಖೆ

(Tweets against Senior Congress Leader P Chidambaram to arrest him under sedition case)