ಲಿಂಕ್ ಆಗದ ಆಧಾರ್​-ಪಾನ್ ಕಾರ್ಡ್​ಗಳು​; ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫನ್ನಿ ಪೋಸ್ಟ್​ಗಳು

|

Updated on: Apr 01, 2021 | 7:34 PM

ಮಾರ್ಚ್​ 31ರೊಳಗೆ ನೀವು ಆಧಾರ್​-ಪಾನ್​ ಕಾರ್ಡ್​ ಲಿಂಕ್​ ಮಾಡಿಕೊಳ್ಳದೆ ಹೋದರೆ ಪಾನ್​ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಹೀಗಾದಾಗ ಆದಾಯ ತೆರಿಗೆ ಸಲ್ಲಿಸುವ ವೇಳೆ 10 ಸಾವಿರ ರೂ.ವರೆಗೆ ದಂಡ ತುಂಬಬೇಕಾಗುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು.

ಲಿಂಕ್ ಆಗದ ಆಧಾರ್​-ಪಾನ್ ಕಾರ್ಡ್​ಗಳು​; ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫನ್ನಿ ಪೋಸ್ಟ್​ಗಳು
ಆಧಾರ್​-ಪಾನ್​ ಲಿಂಕ್​ಗೆ ಸಂಬಂಧಿಸಿದ ಫನ್ನಿ ಪೋಸ್ಟ್​
Follow us on

ಆಧಾರ್​ಕಾರ್ಡ್​-ಪಾನ್​ಕಾರ್ಡ್​ ಲಿಂಕ್ ಮಾಡಿಕೊಳ್ಳಲು ಮಾರ್ಚ್​ 31 ಕೊನೇ ದಿನ ಎಂದು ಹೇಳಿತ್ತು. ಈ ದಿನಾಂಕದ ಒಳಗೆ ಆಧಾರ್​-ಪಾನ್​ ಲಿಂಕ್ ಮಾಡಿಕೊಳ್ಳದೆ ಹೋದರೆ 1000 ರೂ.ದಂಡ ತುಂಬಬೇಕಾಗುತ್ತದೆ. ಅಲ್ಲದೆ, ಪಾನ್​ಕಾರ್ಡ್ ನಿಷ್ಕ್ರಿಯಗೊಳಿಸಲಾಗುವುದು ಎಂದೂ ಹೇಳಿತ್ತು. ಆಧಾರ್​-ಪಾನ್​ ಲಿಂಕ್​ನ್ನು ಆನ್​ಲೈನ್​ನಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾಗಿದ್ದರಿಂದ ನಿನ್ನೆ ಅನೇಕರು ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ ಇ ಫೈಲಿಂಗ್​ ವೆಬ್​​ಸೈಟ್​​ಗೆ ಭೇಟಿ ಕೊಟ್ಟು, ಲಿಂಕ್​ ಮಾಡಿಕೊಳ್ಳಲು ಪ್ರಯತ್ನಿಸದ ಪರಿಣಾಮ ಹಲವು ಟೆಕ್ನಿಕಲ್​ ಸಮಸ್ಯೆಗಳು ಕಾಣಿಸಿಕೊಂಡವು.

ಇಷ್ಟು ದಿನ ಟೈಂ ಕೊಟ್ಟರೂ ಇನ್ನೂ ಅನೇಕರ ಪಾನ್​-ಆಧಾರ್ ಕಾರ್ಡ್​ಗಳು ಲಿಂಕ್ ಆಗದ ಕಾರಣ ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ಮತ್ತೆ ಅವಧಿಯನ್ನು ವಿಸ್ತರಿಸಿದೆ. ಜೂನ್​ 30ರವರೆಗೆ ಟೈಂ ಕೊಟ್ಟಿದೆ. ಅವಧಿ ವಿಸ್ತರಣೆ ಬಗ್ಗೆ ಇಂದು ಘೋಷಿಸಲಾಗಿದ್ದು, ಅದಕ್ಕೂ ಮೊದಲು ನಿನ್ನೆ ಅನೇಕರು ಪರದಾಡಿದ್ದಾರೆ. ಕೆಲವರಿಗೆ ವೆಬ್​ಸೈಟ್​ ಓಪನ್​ ಆಗಿಲ್ಲ.. ಇನ್ನೂ ಅನೇಕರಿಗೆ ಆಧಾರ್ ಲಿಂಕ್​ ಎಂಬ ಪೇಜ್​ ತೆರೆದುಕೊಂಡಿಲ್ಲ. ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಂಡವು. ಒಂದೆಡೆ ಕೊನೇ ದಿನ ಎಂಬ ಟೆನ್ಷನ್​ ಬೇರೆ, ಇನ್ನೊಂದೆಡೆ ಪೇಜ್ ಓಪನ್ ಆಗುತ್ತಿಲ್ಲ ಎಂಬ ಆತಂಕ ಬೇರೆ.. ಒಟ್ಟಾರೆ ತುಂಬ ಜನರು ಕಂಗಾಲಾಗಿದ್ದರು. ಈ ಸಂದರ್ಭವನ್ನು ವಿವರಿಸುವ ಅನೇಕ ಮೀಮ್ಸ್​ಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್​ ಆಗುತ್ತಿವೆ.

ಮಾರ್ಚ್​ 31ರೊಳಗೆ ನೀವು ಆಧಾರ್​-ಪಾನ್​ ಕಾರ್ಡ್​ ಲಿಂಕ್​ ಮಾಡಿಕೊಳ್ಳದೆ ಹೋದರೆ ಪಾನ್​ಕಾರ್ಡ್​ ನಿಷ್ಕ್ರಿಯಗೊಳ್ಳುತ್ತದೆ. ಹೀಗಾದಾಗ ಆದಾಯ ತೆರಿಗೆ ಸಲ್ಲಿಸುವ ವೇಳೆ 10 ಸಾವಿರ ರೂ.ವರೆಗೆ ದಂಡ ತುಂಬಬೇಕಾಗುತ್ತದೆ ಎಂದೂ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು. ಅದೆಷ್ಟೋ ಜನ ಅವಸರವಸರವಾಗಿ ಲಿಂಕ್​ ಮಾಡಿಸಿಕೊಂಡಿದ್ದರೂ, ಇನ್ನೂ ಅನೇಕರದ್ದು ಬಾಕಿ ಇದೆ. ಈ ಮಧ್ಯೆ ಕೆಲವು ಮೀಮ್ಸ್​ಗಳು ಗಮನಸೆಳೆಯುತ್ತಿವೆ.

ಇದನ್ನೂ ಓದಿ: ಮಾಧ್ಯಮಗಳ ಕಣ್ತಪ್ಪಿಸುವ ತಂತ್ರ: 3 ಯುವತಿಯರನ್ನು 3 ಪ್ರತ್ಯೇಕ ಕಾರುಗಳಲ್ಲಿ ಕರೆದೊಯ್ದು ಎಸ್​ಐಟಿಯಿಂದ ತನಿಖೆ!

ನಿನ್ನ ಗರ್ಲ್​ಫ್ರೆಂಡ್​ಮೇಲೆ ಕೈ ಹಾಕಿದ್ದಕ್ಕೆ ಸಿಟ್ಟು ಬಂತಾ?; ಉರಿಯುವ ಬೆಂಕಿಗೆ ತುಪ್ಪ ಸುರಿದ ಪ್ರಶಾಂತ್ ಸಂಬರಗಿ ​

Published On - 7:22 pm, Thu, 1 April 21