ದೆಹಲಿ: ಟ್ವಿಟರ್ ಇಂಡಿಯಾ (Twitter India) ಮುಖ್ಯಸ್ಥ ಮನೀಶ್ ಮಹೇಶ್ವರಿಗೆ (Manish Maheshwari) ಅಮೆರಿಕದಲ್ಲಿ ಉನ್ನತ ಹುದ್ದೆಯ ಜವಾಬ್ದಾರಿ ನೀಡಲಾಗಿದೆ ಎಂದು ಹಿರಿಯ ಕಂಪನಿ ಕಾರ್ಯನಿರ್ವಾಹಕರು ಶುಕ್ರವಾರ ಘೋಷಿಸಿದರು. ಟ್ವಿಟರ್ ಕಂಪನಿಯು ಭಾರತ ಸರ್ಕಾರದೊಂದಿಗೆ ಘರ್ಷಣೆಯ ನಡುವೆ ಮತ್ತು ಇತ್ತೀಚೆಗೆ ವಿರೋಧಗಳ ನಡುವೆಯೇ ಈ ಸುದ್ದಿ ಬಂದಿದೆ.
ಕಳೆದ 2+ ವರ್ಷಗಳಲ್ಲಿ ನಮ್ಮ ಭಾರತೀಯ ವ್ಯವಹಾರದ ನಿಮ್ಮ ನಾಯಕತ್ವಕ್ಕಾಗಿ ಮನೀಶ್ ಮಹೇಶ್ವರಿ ಅವರಿಗೆ ಧನ್ಯವಾದಗಳು. ವಿಶ್ವಾದ್ಯಂತದ ಹೊಸ ಮಾರುಕಟ್ಟೆಗಳಿಗೆ ಆದಾಯ ತಂತ್ರ ಮತ್ತು ಕಾರ್ಯಾಚರಣೆಗಳ ಉಸ್ತುವಾರಿಯಲ್ಲಿ ನಿಮ್ಮ ಹೊಸ ಅಮೆರಿಕ ಮೂಲದ ಜವಾಬ್ದಾರಿಗೆ ಅಭಿನಂದನೆಗಳು. ಟ್ವಿಟರ್‌ಗಾಗಿ ಈ ಪ್ರಮುಖ ಬೆಳವಣಿಗೆಯ ಅವಕಾಶವನ್ನು ನೀವು ಮುನ್ನಡೆಸುತ್ತಿರುವುದನ್ನು ನೋಡಿ ಉತ್ಸುಕನಾಗಿದ್ದೇನೆ “ಎಂದು ಟ್ವಿಟರ್‌ನ ಜಪಾನ್, ದಕ್ಷಿಣ ಕೊರಿಯಾ ಮತ್ತು ಏಷ್ಯಾ ಪೆಸಿಫಿಕ್ ವಿಭಾಗದ ಉಪಾಧ್ಯಕ್ಷ ಯು ಸಸಮೊಟೊ ಟ್ವೀಟ್ ಮಾಡಿದ್ದಾರೆ.
Thank you to @manishm for your leadership of our Indian business over the past 2+ years. Congrats on your new US-based role in charge of revenue strategy and operations for new markets worldwide. Excited to see you lead this important growth opportunity for Twitter.
— yu-san (@yusasamoto) August 13, 2021
ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ಹೊಸ ಮಾರುಕಟ್ಟೆಗಳ ಮೇಲೆ ಕೇಂದ್ರೀಕರಿಸಿರುವ ಕಂದಾಯ ಕಾರ್ಯತಂತ್ರ ಮತ್ತು ಕಾರ್ಯಾಚರಣೆಯ ಹಿರಿಯ ನಿರ್ದೇಶಕರ ಪಾತ್ರದಲ್ಲಿ ಅಮೆರಿಕಗೆ ತೆರಳುತ್ತಿದ್ದಾರೆ. ಅವರು ಟ್ವಿಟರ್‌ನಲ್ಲಿ ಗ್ಲೋಬಲ್ ಸ್ಟ್ರಾಟಜಿ ಮತ್ತು ಆಪರೇಷನ್ಸ್‌ನ ಹಿರಿಯ ನಿರ್ದೇಶಕರಾದ ಡಯೆಟ್ರಾ ಮರಾ ಅವರಿಗೆ ವರದಿ ಮಾಡಲಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.
ಮನೀಶ್ ಅವರ ಹೊಸ ಜವಾಬ್ದಾರಿ ಬಗ್ಗೆ ಇಮೇಲ್ನ ಪ್ರತಿ ಮನಿ ಕಂಟ್ರೋಲ್ ಗೆ ಲಭಿಸಿದ್ದು ಅದರ ಪ್ರಕಾರ “ನಮ್ಮ ಭಾರತ ದೇಶದ ನಿರ್ದೇಶಕರಾಗಿ ಮತ್ತು ಭಾರತದ ಮುಖ್ಯಸ್ಥರಾಗಿ 2 ವರ್ಷಗಳಿಗಿಂತಲೂ ಹೆಚ್ಚು ಕಾಲ ತಂಡವನ್ನು ಬೆಂಬಲಿಸಿದ ನಂತರ, ಮನೀಶ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹಿರಿಯ ನಿರ್ದೇಶಕರಾಗಿ ಹೊಸ ಪಾತ್ರವನ್ನು ವಹಿಸಲಿದ್ದಾರೆ, ಕಂದಾಯ ಕಾರ್ಯತಂತ್ರ ಮತ್ತು ಕಾರ್ಯಾಚರಣೆಗಳು ಹೊಸ ಮಾರುಕಟ್ಟೆ ಪ್ರವೇಶದ ಮೇಲೆ ಕೇಂದ್ರೀಕರಿಸುತ್ತವೆ. ಅವರು ಡಯೆಟ್ರಾ ಮರಾ ಅವರ ನೇತೃತ್ವದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದಿದೆ.
ಇಮೇಲ್ ಪ್ರಕಾರ ಟ್ವಿಟರ್‌ನಲ್ಲಿ ಪ್ರಸ್ತುತ ಮಾರಾಟ ವಿಭಾಗದ ಮುಖ್ಯಸ್ಥ ಕನಿಕಾ ಮಿತ್ತಲ್ ಮತ್ತು ಟ್ವಿಟರ್‌ನ ಪ್ರಸ್ತುತ ಬಿಸಿನೆಸ್ ಹೆಡ್ ನೇಹಾ ಶರ್ಮಾ ಕತ್ಯಾಲ್ ಅವರು ಜಂಟಿಯಾಗಿ ಭಾರತದ ಟ್ವಿಟರ್ ಸಂಸ್ಥೆಯನ್ನು-ಮುನ್ನಡೆಸಲಿದ್ದಾರೆ. ಇವರಿಬ್ಬರು Twitter JAPAC / ಟ್ವಿಟರ್ ಜಪಾನ್‌ನ ಯು ಸಸಮೊಟೊಗೆ ವರದಿ ಮಾಡಲಿದ್ದಾರೆ.
ಅಂದಹಾಗೆ ಈ ಹಠಾತ್ ವರ್ಗಾವಣೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ ಇತ್ತೀಚಿನ ದಿನಗಳಲ್ಲಿ ಹೊಸ ಐಟಿ ನಿಯಮಗಳ ಅನುಸರಣೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಟ್ವಿಟರ್ ನಡುವಿನ ತರ್ಕ ಆಗಿರಬಹುದೇ ಎಂಬುದು ಸದ್ಯದ ಊಹೆ.
ಇದನ್ನೂ ಓದಿ: ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ರಿಲೀಫ್
ಇದನ್ನೂ ಓದಿ: Twitter India: ಹಿಂದುಗಳ ಧಾರ್ಮಿಕ ಭಾವನೆಗೆ ಅವಮಾನದ ಆರೋಪ; ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿ ವಿರುದ್ಧ ದೂರು
(Twitter India chief Manish Maheshwari Gets new US based role)
Published On - 6:18 pm, Fri, 13 August 21