ದೆಹಲಿ: ಗಾಜಿಯಾಬಾದ್‌ನ ಲೋನಿ ಎಂಬಯಲ್ಲಿ ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಟ್ವಿಟರ್ ಇಂಡಿಯಾ 50 ಟ್ವೀಟ್‌ಗಳನ್ನು ನಿರ್ಬಂಧಿಸಿದೆ. ಟ್ವಿಟರ್ ಅಧಿಕಾರಿಗಳ ಪ್ರಕಾರ, ಅಬ್ದುಲ್ ಸಮದ್ ಸೈಫಿಯ ಮೇಲೆ ಹಲ್ಲೆ ನಡೆಸಿ ಮತ್ತು ಆತನ ಗಡ್ಡವನ್ನು ಕತ್ತರಿಸಲಾಗಿದೆಯೆಂದು ತೋರಿಸುವ ವಿಡಿಯೊಗೆ ಸಂಬಂಧಿಸಿದ ಟ್ವೀಟ್‌ಗಳನ್ನು ನಿರ್ಬಂಧಿಸಲಾಗಿದೆ.
ಆರೋಪದ ಬಗ್ಗೆ ಮಾತನಾಡಿದ ಸೈಫಿ, ಆರೋಪಿಯೊಬ್ಬರು ತನ್ನನ್ನು ಆಟೋದಲ್ಲಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಥಳಿಸಿ, ‘ಜೈ ಶ್ರೀ ರಾಮ್’ ಎಂದು ಕೂಗುವಂತೆ ಒತ್ತಾಯಿಸಿದ ಎಂದು ಹೇಳಿದ್ದರು. ಸೈಫಿ ‘ತಬೀಜ್’ (ತಾಯಿತ) ವನ್ನು ಮಾರಾಟ ಮಾಡುತ್ತಿದ್ದರು. ಆ ತಾಯಿತ ಕೆಲಸ ಮಾಡಿಲ್ಲ ಎಂದು ಆರೋಪಿಗಳು ಅವನನ್ನು ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಮು ದ್ವೇಷ ಉತ್ತೇಜಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ವೇದಿಕೆಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ನಡೆಸುತ್ತಿರುವ ತನಿಖೆಯ ಹಿನ್ನೆಲೆಯಲ್ಲಿ ಟ್ವಿಟರ್ ಈ ಕ್ರಮ ಕೈಗೊಂಡಿದೆ.
ನಮ್ಮ Country Withheld Policy ಯಲ್ಲಿ ವಿವರಿಸಿದಂತೆ, ಮಾನ್ಯ ಕಾನೂನು ಬೇಡಿಕೆಗೆ ಪ್ರತಿಕ್ರಿಯೆಯಾಗಿ ಅಥವಾ ಸ್ಥಳೀಯ ಕಾನೂನು (ಗಳನ್ನು) ಉಲ್ಲಂಘಿಸುವ ವಿಷಯ ಕಂಡುಬಂದಾಗ ಕೆಲವು ವಿಷಯಗಳಿಗೆ ಪ್ರವೇಶವನ್ನು ತಡೆಹಿಡಿಯುವುದು ಅಗತ್ಯವಾಗಬಹುದು. ತಡೆಹಿಡಿಯುವಿಕೆಯು ನಿರ್ದಿಷ್ಟ ನ್ಯಾಯವ್ಯಾಪ್ತಿ / ದೇಶಕ್ಕೆ ಸೀಮಿತವಾಗಿದೆ, ಅಲ್ಲಿ ವಿಷಯವು ಕಾನೂನುಬಾಹಿರವೆಂದು ನಿರ್ಧರಿಸಲಾಗುತ್ತದೆ. ಖಾತೆದಾರರಿಗೆ ನಾವು ನೇರವಾಗಿ ತಿಳಿಸುತ್ತೇವೆ, ಆದ್ದರಿಂದ ಖಾತೆ (ಗಳು) ಗೆ ಸಂಬಂಧಿಸಿದ ಇಮೇಲ್ ವಿಳಾಸಕ್ಕೆ ಸಂದೇಶವನ್ನು ಕಳುಹಿಸುವ ಮೂಲಕ ನಾವು ಖಾತೆಗೆ ಸಂಬಂಧಿಸಿದ ಕಾನೂನು ಆದೇಶವನ್ನು ಸ್ವೀಕರಿಸಿದ್ದೇವೆ ಎಂದು ಅವರಿಗೆ ತಿಳಿದಿರುತ್ತದೆ, ”ಎಂದು ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದೆ.
ಜಿಲ್ಲೆಯ ವೃದ್ಧ ವ್ಯಕ್ತಿಯೊಬ್ಬರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಟ್ವಿಟರ್ ಇಂಕ್, ಟ್ವಿಟರ್ ಕಮ್ಯುನಿಕೇಷನ್ಸ್ ಇಂಡಿಯಾ ಜೊತೆಗೆ ಮೊಹಮ್ಮದ್ ಜುಬರ್ ಮತ್ತು ರಾಣಾ ಅಯೂಬ್ ಸೇರಿದಂತೆ ಪತ್ರಕರ್ತರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ಐಪಿಸಿ ಸೆಕ್ಷನ್‌ಗಳು 153 (ಗಲಭೆಗೆ ಪ್ರಚೋದನೆ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ), 505 (ಕಿಡಿಗೇಡಿತನ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ದಾಖಲಿಸಲು ಗಾಜಿಯಾಬಾದ್ ಪೊಲೀಸರು ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿಯನ್ನು ಕರೆಸಿದ್ದಾರೆ.
ಇದನ್ನೂ ಓದಿ: Ghaziabad Assault Case: ತನಿಖೆಗೆ ಸಹಕರಿಸುವುದಾಗಿ ಹೇಳಿದ ಟ್ವಿಟರ್ ಇಂಡಿಯಾ, ಉತ್ತರ ತೃಪ್ತಿಕರ ಅಲ್ಲ ಎಂದ ಪೊಲೀಸರು
ಇದನ್ನೂ ಓದಿ: ಗಾಜಿಯಾಬಾದ್ನಲ್ಲಿ ವೃದ್ಧನ ಮೇಲೆ ಹಲ್ಲೆ ಪ್ರಕರಣ: ಪೊಲೀಸರ ವಾದ ತಳ್ಳಿದ ಸಂತ್ರಸ್ತ ಅಬ್ದುಲ್ ಸಮದ್ ಕುಟುಂಬ
(Twitter India has restricted 50 tweets in connection with the alleged assault of Abdul Samad Saifi in Loni Ghaziabad)
Published On - 5:53 pm, Mon, 21 June 21