ಐಫೋನ್‌, ಆಂಡ್ರಾಯ್ಡ್‌ಗಳಲ್ಲಿ ವಿಭಿನ್ನ ದರ ನಿಗದಿ; ಉಬರ್, ಓಲಾಗೆ ಸರ್ಕಾರದಿಂದ ನೋಟಿಸ್

|

Updated on: Jan 23, 2025 | 4:38 PM

ಒಂದೇ ಜಾಗಕ್ಕೆ ಐಫೋನ್, ಆಂಡ್ರಾಯ್ಡ್ ಮೊಬೈಲ್​ಗಳಲ್ಲಿ ಪ್ರಯಾಣ ದರ ವ್ಯತ್ಯಾಸ ಉಂಟಾಗುತ್ತಿದೆ ಎಂಬ ಆರೋಪದ ಬಗ್ಗೆ ಓಲಾ, ಉಬರ್ ಕಂಪೆನಿಗಳಿಗೆ ಕೇಂದ್ರ ಸರ್ಕಾರ ನೊಟೀಸ್ ಜಾರಿ ಮಾಡಿದೆ. ಈ ಬಗ್ಗೆ ಓಲಾ, ಉಬರ್ ಕಂಪೆನಿಗಳ‌ ಪ್ರತಿಕ್ರಿಯೆ ಕೇಳಲಾಗಿದೆ. ಒಂದೇ ಜಾಗಕ್ಕೆ ಐಫೋನ್, ಆಂಡ್ರಾಯ್ಡ್​ ಮಧ್ಯೆ ಪ್ರಯಾಣ ದರ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಹಲವು ಪ್ರಯಾಣಿಕರು ಸೋಷಿಯಲ್‌ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು. ಐಫೋನ್​ನಲ್ಲಿ ಒಂದು ದರ, ಆಂಡ್ರಾಯ್ಡ್​​ ಮೊಬೈಲ್​ನಲ್ಲಿ‌ ಒಂದು ಬೆಲೆ ತೋರಿಸುತ್ತಿರುವುದೇಕೆ ಎಂದು ಪ್ರಶ್ನೆ ಮಾಡಿದ್ದರು.

ಐಫೋನ್‌, ಆಂಡ್ರಾಯ್ಡ್‌ಗಳಲ್ಲಿ ವಿಭಿನ್ನ ದರ ನಿಗದಿ; ಉಬರ್, ಓಲಾಗೆ ಸರ್ಕಾರದಿಂದ ನೋಟಿಸ್
Uber, Ola
Follow us on

ನವದೆಹಲಿ: ಐಫೋನ್ ಮತ್ತು ಆಂಡ್ರಾಯ್ಡ್ ಬಳಕೆದಾರರ ನಡುವೆ ಒಂದೇ ಸ್ಥಳದಲ್ಲಿ ದರ ವ್ಯತ್ಯಾಸ ಕಂಡುಬರುತ್ತಿದೆ ಎಂಬ ವರದಿಗಳ ನಂತರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಟ್ರಾವೆಲ್ ಆ್ಯಪ್ ಕಂಪನಿಗಳಾದ ಉಬರ್ ಮತ್ತು ಓಲಾಗಳಿಗೆ ನೋಟಿಸ್ ನೀಡಿದೆ. ಓಲಾ ಮತ್ತು ಉಬರ್​ನಲ್ಲಿ ಆ್ಯಂಡ್ರಾಯ್ಡ್ ಮತ್ತು ಐಫೋನ್​ಗಳಲ್ಲಿ ಒಂದೇ ಸ್ಥಳದಲ್ಲಿ ಬೇರೆ ಬೇರೆ ಬೆಲೆ ಕಂಡುಬರುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವೈರಲ್ ಆಗಿತ್ತು. ಈ ಆರೋಪದ ಬಗ್ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ತನಿಖೆ ನಡೆಸುತ್ತಿದೆ. ಉಬರ್ ಮತ್ತು ಓಲಾ ಉದ್ದೇಶಪೂರ್ವಕವಾಗಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪವನ್ನು ನಿರಾಕರಿಸಿವೆ.

ಪ್ರಯಾಣವನ್ನು ಬುಕ್ ಮಾಡಲು ಬಳಸುವ ಸ್ಮಾರ್ಟ್​ಫೋನ್ ಪ್ರಕಾರವನ್ನು ಆಧರಿಸಿ ವಿಭಿನ್ನ ಬೆಲೆ ನಿಗದಿ ಮಾಡಲಾಗುತ್ತಿದೆ ಎಂಬ ವರದಿಗಳ ಕುರಿತು ಕೇಂದ್ರ ಸರ್ಕಾರವು ಸ್ಪಷ್ಟೀಕರಣ ಕೋರಿದ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಓಲಾ ಮತ್ತು ಉಬರ್ ಕ್ಯಾಬ್ ಕಂಪನಿಗೆ ನೋಟಿಸ್ ನೀಡಿದೆ.


ಇದನ್ನೂ ಓದಿ: ಓಲಾ, ಊಬರ್, ರ್‍ಯಾಪಿಡೋಗೆ ಸೆಡ್ಡು: ನಗರ ಮೀಟರ್ ಆ್ಯಪ್ ಮೂಲಕ ಕಡಿಮೆ ಬೆಲೆಗೆ ಪ್ರಯಾಣ

ಇದೇ ರೀತಿಯ ಅಭಿಪ್ರಾಯವನ್ನು ಹಲವು ಗ್ರಾಹಕರು ವ್ಯಕ್ತಪಡಿಸಿದ್ದಾರೆ. ಇದರಿಂದ ಓಲಾ ಮತ್ತು ಉಬರ್​ ಕಂಪನಿಗಳಿಂದ ಸ್ಪಷ್ಟನೆ ಕೇಳಲಾಗಿದೆ. ಈ ಆ್ಯಪ್​ಗಳ ಬಳಕೆದಾರರು ಐಫೋನ್​ನಲ್ಲಿ ಬುಕಿಂಗ್ ಮಾಡುತ್ತಿದ್ದಾರಾ ಅಥವಾ ಆಂಡ್ರಾಯ್ಡ್ ಫೋನ್​ನಲ್ಲಿ ಬುಕಿಂಗ್ ಮಾಡುತ್ತಿದ್ದಾರೆಯೇ ಎಂಬುದರ ಆಧಾರದ ಮೇಲೆ ಓಲಾ ಮತ್ತು ಉಬರ್ ಒಂದೇ ಸೇವೆಗೆ ವಿಭಿನ್ನ ದರಗಳನ್ನು ವಿಧಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ ಎಂಬ ವರದಿಗಳ ನಂತರ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಈ ಕ್ರಮ ಕೈಗೊಂಡಿದೆ.


ಬೆಲೆ ನಿಗದಿಯು ಗ್ರಾಹಕರು ಬಳಸಿದ ಫೋನ್ ಪ್ರಕಾರವನ್ನು ಆಧರಿಸಿದೆ ಎಂಬುದನ್ನು ಉಬರ್ ನಿರಾಕರಿಸಿದೆ. ಪಿಕ್-ಅಪ್ ಪಾಯಿಂಟ್‌ಗಳು, ಆಗಮನದ ಅಂದಾಜು ಸಮಯ (ETA) ಮತ್ತು ಡ್ರಾಪ್-ಆಫ್ ಪಾಯಿಂಟ್‌ಗಳಿಂದಾಗಿ ದರ ವ್ಯತ್ಯಾಸಗಳು ಉಂಟಾಗಬಹುದು ಎಂದು ಕಂಪನಿ ಹೇಳಿದೆ.


ಇದನ್ನೂ ಓದಿ: ಬೆಂಗಳೂರು: ಮಹಿಳಾ ಪ್ರಯಾಣಿಕರಿಗಾಗಿ ಬಂದಿದೆ ಉಬರ್ ಮಹಿಳಾ ಬೈಕ್ ಟ್ಯಾಕ್ಸಿ

ಒಂದೇ ಜಾಗದಿಂದ ಕ್ಯಾಬ್​ ಬುಕ್ ಮಾಡಿದಾಗ ಆ್ಯಂಡ್ರಾಯ್ಡ್​ ಮತ್ತು ಐಫೋನ್​ನಲ್ಲಿ ಬೇರೆ ಬೇರೆ ಬೆಲೆ ಕಂಡುಬರುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಗ್ರಾಹಕರು ಆರೋಪಿಸಿದ್ದರು. ಇದರ ನಡುವೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಓಲಾ, ಉಬರ್ ಮತ್ತು ರಾಪಿಡೊದಂತಹ ಪ್ಲಾಟ್‌ಫಾರ್ಮ್‌ಗಳ ಬಗ್ಗೆ ತನಿಖೆ ನಡೆಸುವಂತೆ CCPAಗೆ ಆದೇಶಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ