ಕುಂಭಮೇಳದ ಚಲುವೆ ಮೊನಾಲಿಸಾ ಫೋಟೊಗಾಗಿ ಟೆಂಟ್​ಗೆ ನುಗ್ಗಿದ ವ್ಯಕ್ತಿ, ಸಹೋದರನ ಮೇಲೆ ಹಲ್ಲೆ

ಕುಂಭಮೇಳದಲ್ಲಿ ಎಲ್ಲರ ಬಾಯಲ್ಲೂ ಮೊನಾಲಿಸಾಳದಲ್ಲೇ ಮಾತು, ಆಕೆಯ ಆಕರ್ಷಣೀಯ ಕಣ್ಣುಗಳಿಗೆ ಮನಸೋತವರು ಎಷ್ಟೋ ಮಂದಿ. ಆದರೆ ಸೌಂದರ್ಯ ಹೊಗಳುವುದು, ಫೋಟೊ ಕ್ಲಿಕ್ಕಿಸಿಕೊಳ್ಳುವುದು ಅಷ್ಟೇ ಇದ್ದರೆ ಒಳ್ಳೆಯದು ಆದರೆ ಆಕೆಯ ಟೆಂಟ್​ಗೆ ನುಗ್ಗಿ ವ್ಯಕ್ತಿ ಆಕೆಯ ಸಹೋದರನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈಕೆ ತನ್ನ ಸಹಜ ಸೌಂದರ್ಯದಿಂದ ಪ್ರಖ್ಯಾತಿ ಪಡೆದಾಗಿನಿಂದಲೂ ಫೋಟೋಗಳಿಗಾಗಿ ಆಕೆಯ ಬೆನ್ನತ್ತಿದ್ದಾರೆ.

ಕುಂಭಮೇಳದ ಚಲುವೆ ಮೊನಾಲಿಸಾ ಫೋಟೊಗಾಗಿ ಟೆಂಟ್​ಗೆ ನುಗ್ಗಿದ ವ್ಯಕ್ತಿ, ಸಹೋದರನ ಮೇಲೆ ಹಲ್ಲೆ
ಮೊನಾಲಿಸಾ
Follow us
ನಯನಾ ರಾಜೀವ್
|

Updated on: Jan 23, 2025 | 3:00 PM

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ತನ್ನ ಕಣ್ಣುಗಳಿಂದಲೇ ಫೇಮಸ್ ಆಗಿರುವ ಮೊನಾಲಿಸಾಳನ್ನು ನೋಡಲು ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಆದರೆ ಅಷ್ಟಕ್ಕೇ ಮುಗಿದಿಲ್ಲ ವ್ಯಕ್ತಿಯೊಬ್ಬ ಟೆಂಟ್​ಗೆ ನುಗ್ಗಿ ಆಕೆಯ ಸಹೋದರನನ್ನು ಥಳಿಸಿರುವ ಘಟನೆ ವರದಿಯಾಗಿದೆ.

ಬಲವಂತವಾಗಿ ಟೆಂಟ್​ಗೆ ನುಗ್ಗಿ ಫೋಟೊ ತೆಗೆದುಕೊಳ್ಳಲು ವ್ಯಕ್ತಿ ಪ್ರಯತ್ನಿಸಿದಾಗ ಆಕೆಯ ಸಹೋದರ ಅದನ್ನು ತಡೆದು ಫೋಟೊವನ್ನು ಮೊಬೈಲ್​ನಿಂದ ಅಳಿಸುವಂತೆ ಕೇಳಿಕೊಂಡಿದ್ದಾರೆ, ಈ ಕಾರಣದಿಂದ ಆತನಿಗೆ ಥಳಿಸಿದ್ದಾರೆ. ಈಕೆ ತನ್ನ ಸಹಜ ಸೌಂದರ್ಯದಿಂದ ಪ್ರಖ್ಯಾತಿ ಪಡೆದಾಗಿನಿಂದಲೂ ಫೋಟೋಗಳಿಗಾಗಿ ಆಕೆಯ ಬೆನ್ನತ್ತಿದ್ದಾರೆ.

ನನಗೆ ಭಯವಾಗಿದೆ, ಇಲ್ಲಿ ಯಾರೂ ಇಲ್ಲ, ಯಾರಾದರೂ ಹಾನಿ ಮಾಡಬಹುದು ಎನಿಸುತ್ತಿದೆ. ಕರೆಂಟ್ ಇಲ್ಲ, ಆದರೂ ಜನರು ಬಲವಂತವಾಗಿ ಟೆಂಟ್ ಪ್ರವೇಶಿಸುತ್ತಿದ್ದಾರೆ ಎಂದು ಮೊನಾಲಿಸಾ ಅಳಲು ತೋಡಿಕೊಂಡಿದ್ದಾರೆ. ಮಹಾ ಕುಂಭಮೇಳದಲ್ಲಿ ವ್ಯಕ್ತಿಯೊಬ್ಬರು ಆಕೆಯನ್ನು ವೀಡಿಯೊದಲ್ಲಿ ಸೆರೆಹಿಡಿದು ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ಮೊನಾಲಿಸಾ ತನ್ನ ಅದ್ಭುತ ಸಹಜ ಸೌಂದರ್ಯದಿಂದ ಮನೆಮಾತಾಗಿದ್ದಾರೆ.

ಮತ್ತಷ್ಟು ಓದಿ: ಮಹಾಕುಂಭದ ವೈರಲ್ ಹುಡುಗಿಗೆ ಬಾಲಿವುಡ್​ನಿಂದ ಬಂತು ಆಫರ್

ಅಂದಿನಿಂದ ಆಕೆಯೊಂದಿಗೆ ರೀಲ್ಸ್​ ಮಾಡುವುದು, ಸಂದರ್ಶನ ನಡೆಸುವವರು, ಫೋಟೊ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಆಕೆಯ ತಂದೆ ಆಕೆಯನ್ನು ಮನೆಗೆ ಕಳುಹಿಸಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು. ಆದರೆ ಆಕೆಯ ಅಜ್ಜ ಅದನ್ನು ನಿರಾಕರಿಸಿದ್ದಾರೆ. ಆಕೆ ಕುಂಭಮೇಳದಲ್ಲಿಯೇ ಇದ್ದಾಳೆ ಎಂದು ಹೇಳಿದ್ದಾರೆ. ಜನರು ಆಕೆಯ ಹಿಂದೆ ಮುಂದೆ ಸುತ್ತುತ್ತಿರುವ ಕಾರಣ ಆಕೆಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ, ಆಕೆ ತಂದಿರುವ ವಸ್ತುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಕೆಯ ಅಜ್ಜ ಹೇಳಿದ್ದಾರೆ. ಆಕೆಯು ಮಧ್ಯಪ್ರದೇಶದ ಇಂದೋರ್​ ಮೂಲದವಳಾಗಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ