AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಕುಂಭದ ವೈರಲ್ ಹುಡುಗಿಗೆ ಬಾಲಿವುಡ್​ನಿಂದ ಬಂತು ಆಫರ್

Kumbh Mela Girl: ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಸುಂದರ ಯುವತಿಯ ಚಿತ್ರ ಇತ್ತೀಚೆಗೆ ವೈರಲ್ ಆಗಿತ್ತು. ಆ ಯುವತಿಯನ್ನು ಮೊನಾಲಿಸಾಗೆ ಹೋಲಿಸಲಾಗಿತ್ತು. ಭಾರತದ ಮೊನಾಲಿಸಾ ಎಂದೇ ಆ ಯುವತಿ ಫೇಮಸ್ ಆಗಿದ್ದರು. ಇದೀಗ ಆ ಯುವತಿಗೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಇಲ್ಲಿದೆ ಆ ಬಗ್ಗೆ ಮಾಹಿತಿ...

ಮಹಾಕುಂಭದ ವೈರಲ್ ಹುಡುಗಿಗೆ ಬಾಲಿವುಡ್​ನಿಂದ ಬಂತು ಆಫರ್
Kumbh Mela Girl
ಮಂಜುನಾಥ ಸಿ.
|

Updated on: Jan 21, 2025 | 12:54 PM

Share

ಈ ಸೋಷಿಯಲ್ ಮೀಡಿಯಾ ಕಾಲದಲ್ಲಿ ಎಲ್ಲೋ ಇದ್ದವರು ರಾತ್ರಿ ಕಳೆದು ಬೆಳಗಾಗುವದರೊಳಗೆ ಸ್ಟಾರ್ ಆಗಿಬಿಡುತ್ತಾರೆ. ಹಲವರ ಜೀವನವೇ ಬದಲಾಗಿ ಬಿಡುತ್ತದೆ. ಟೀ ಮಾರುವ ಹುಡುಗ ಮಾಡೆಲ್ ಆಗಿದ್ದು, ಭಿಕ್ಷುಕ ಮಾಡೆಲ್ ಆಗಿದ್ದು, ಮೀನು ಮಾರುವ ಹುಡುಗಿ ಫ್ಯಾಷನ್ ಶೋ ಮಾಡಿದ್ದು, ಒಂದು ಕಣ್ಸನ್ನೆಯಿಂದ ಪ್ರಿಯಾ ವಾರಿಯಸ್ ಸ್ಟಾರ್ ಆಗಿದ್ದು ಎಲ್ಲವೂ ಸಾಧ್ಯವಾಗಿದ್ದು ಇದೇ ಸೋಷಿಯಲ್ ಮೀಡಿಯಾದಿಂದ. ಇದೀಗ ಮಹಾಕುಂಭದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಹುಡುಗಿಗೆ ಇದೇ ಸಾಮಾಜಿಕ ಜಾಲತಾಣದಿಂದ ಅದೃಷ್ಟ ಖುಲಾಯಿಸಿದೆ. ವೈರಲ್ ಹುಡುಗಿಗೆ ಬಾಲಿವುಡ್​ನಿಂದ ಆಫರ್ ಬಂದಿದೆ.

ಮಹಾಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿಯೊಬ್ಬಾಕೆಯ ಚಿತ್ರವೊಂದು ಸಖತ್ ವೈರಲ್ ಆಗಿತ್ತು. ಆಕೆಯ ಸೌಂದರ್ಯಕ್ಕೆ ವಿಶೇಷವಾಗಿ ಆಕೆಯ ಸೆಳೆಯುವ ಕಣ್ಣುಗಳಿಗೆ ಜನ ಮಾರು ಹೋಗಿದ್ದರು. ಆ ಯುವತಿಯನ್ನು ಮೊನಾಲಿಸಾಗೆ ಹೋಲಿಸಲಾಗಿತ್ತು. ಭಾರತದ ಮೊನಾಲಿಸಾ ಎಂದೇ ಸಾಮಾಜಿಕ ಜಾಲತಾಣದಲ್ಲಿ ಆ ಚೆಲುವೆ ಫೇಮಸ್ ಆಗಿದ್ದರು. ಇದೀಗ ಬಾಲಿವುಡ್​ ಕಣ್ಣು ಯುವತಿಯ ಮೇಲೆ ಬಿದ್ದಿದೆ. ಯುವತಿಗೆ ಬಾಲಿವುಡ್​ನಿಂದ ಆಫರ್ ಬಂದಿದೆ.

ಬಾಲಿವುಡ್ ನಿರ್ದೇಶಕ ಸನೋಜ್ ಮಿಶ್ರ, ಆ ವೈರಲ್ ಯುವತಿಗೆ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ‘ಡೈರಿ ಆಫ್ ಮಣಿಪುರ್’ ಹೆಸರಿನ ಸಿನಿಮಾ ಅನ್ನು ಸನೋಜ್ ಮಿಶ್ರ ನಿರ್ದೇಶನ ಮಾಡುತ್ತಿದ್ದು, ಆ ಸಿನಿಮಾದಲ್ಲಿ ವೈರಲ್ ಹುಡುಗಿಯೇ ನಾಯಕಿ. ಇದಕ್ಕಾಗಿ ಮೊನಾಲಿಸಾ ಲುಕ್ ಟೆಸ್ಟ್ ಸಹ ನಡೆಸಲಾಗಿದೆ. ವೈರಲ್ ಯುವತಿಗೆ ಮೇಕೋವರ್ ಮಾಡಲಾಗಿದ್ದು, ಮೇಕೊವರ್ ವಿಡಿಯೋ ಇದೀಗ ವೈರಲ್ ಆಗಿದೆ. ಇದು ಮಾತ್ರವೇ ಅಲ್ಲದೆ ಮಹಾಕುಂಭದ ಮೊನಾಲಿಸಾಗೆ ನಟನಾ ತರಬೇತಿಯನ್ನು ಸಹ ಕೊಡಿಸಲಾಗುತ್ತಿದೆ.

ಇದನ್ನೂ ಓದಿ:Viral : ಸಹಜ ಸೌಂದರ್ಯದಿಂದಲೇ ಇಂಟರ್‌ನೆಟ್‌ ಸೆನ್ಸೇಷನ್ ಆದ ರಾಜಸ್ಥಾನಿ ಯುವತಿ, ವಿಡಿಯೋ ವೈರಲ್

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವರಿಗೆ ಸಿನಿಮಾ ಅವಕಾಶಗಳು ಇದು ಮೊದಲೇನೂ ಅಲ್ಲ. ಈ ಹಿಂದೆ ಬೀದಿಯಲ್ಲಿ ಹಾಡು ಹಾಡುತ್ತಿದ್ದ ರಾನು ಮಂಡಲ್​ಗೆ ಬಾಲಿವುಡ್ ಸಿನಿಮಾ ಹಾಡು ಹಾಡುವ ಅವಕಾಶ ನೀಡಲಾಗಿತ್ತು. ಇದರಿಂದಾಗಿ ರಾನು ಮಂಡಲ್ ರಾತ್ರೋರಾತ್ರಿ ಸೆಲೆಬ್ರಿಟಿ ಆಗಿಬಿಟ್ಟಿದ್ದರು. ಕೇರಳದಲ್ಲಿ ಮೀನು ಮಾರುತ್ತಿದ್ದ ಯುವತಿಗೆ ಫ್ಯಾಷನ್ ಶೋನಲ್ಲಿ ಶೋ ಸ್ಟಾಪರ್ ಮಾಡಲಾಗಿತ್ತು. ಮಲಯಾಳಿ ನಟಿ ಪ್ರಿಯಾ ವಾರಿಯರ್ ಸಹ ಸ್ಟಾರ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಅವರ ಒಂದು ಸಣ್ಣ ಕ್ಲಿಪ್​ನಿಂದಲೇ. ಇದೀಗ ಮಹಾಕುಂಭದ ಮೊನಾಲಿಸಾಳ ಸರದಿ. ಈ ಅವಕಾಶವನ್ನು ಯುವತಿ ಸದುಪಯೋಗ ಪಡಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ