Udaipur murder ಉದಯಪುರ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಬಡ್ತಿ: ಅಶೋಕ್ ಗೆಹ್ಲೋಟ್

| Updated By: ರಶ್ಮಿ ಕಲ್ಲಕಟ್ಟ

Updated on: Jun 29, 2022 | 4:14 PM

ಕನ್ಹಯ್ಯಾ ಲಾಲ್ ಅವರನ್ನು ಬರ್ಬರವಾಗಿ ಹತ್ಯೆಗೈದ ಇಬ್ಬರ ವಿರುದ್ಧ ರಾಜಸ್ಥಾನ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಗೆಹ್ಲೋಟ್ ಬುಧವಾರ ತಿಳಿಸಿದ್ದಾರೆ

Udaipur murder ಉದಯಪುರ ಹತ್ಯೆಯ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಬಡ್ತಿ: ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್
Follow us on

ಉದಯಪುರದಲ್ಲಿ ಟೈಲರ್ ಆಗಿದ್ದ ಕನ್ಹಯ್ಯಾ ಲಾಲ್ (Kanhaiya Lal) ಹತ್ಯೆಯು ಭಯೋತ್ಪಾದನೆಯನ್ನು ಹರಡುವ ಉದ್ದೇಶದಿಂದ ನಡೆದಿದೆ  ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot)ಅವರು ಬುಧವಾರ ಹೇಳಿದ್ದಾರೆ . ಇಬ್ಬರು ಹಂತಕರಿಗೆ ವಿದೇಶದಲ್ಲಿ ಸಂಪರ್ಕವಿದೆ ಎಂಬ ಮಾಹಿತಿ ಸಿಕ್ಕಿದೆ. ಕನ್ಹಯ್ಯಾ ಲಾಲ್ ಅವರನ್ನು ಬರ್ಬರವಾಗಿ ಹತ್ಯೆಗೈದ ಇಬ್ಬರ ವಿರುದ್ಧ ರಾಜಸ್ಥಾನ ಪೊಲೀಸರು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಗೆಹ್ಲೋಟ್ ಬುಧವಾರ ತಿಳಿಸಿದ್ದಾರೆ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖೆ ನಡೆಸಲಿದೆ. ರಾಜಸ್ಥಾನ ಪೊಲೀಸ್‌ನ ಭಯೋತ್ಪಾದನಾ ನಿಗ್ರಹ ದಳ (ATS) ತನಿಖಾ ಸಂಸ್ಥೆಯೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತದೆ ಎಂದು ಅವರು ಹೇಳಿದರು. ಮೂರು ವಾರಗಳ ಹಿಂದೆ ಕನ್ಹಯ್ಯಾ ಲಾಲ್ ಅವರನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಬಂಧಿಸಲಾಗಿತ್ತು. ಅವರು ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೇ, ಜೀವ ಬೆದರಿಕೆ ಇದೆ ಎಂದು ಹೇಳಿ ಕನ್ಹಯ್ಯಾ ಪೊಲೀಸ್ ರಕ್ಷಣೆಯನ್ನು ಕೋರಿದ್ದರು ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

‘ಈ ಭಯೋತ್ಪಾದಕ ದಾಳಿಗೆ ರಾಜಸ್ಥಾನ ಸರ್ಕಾರವೇ ಸಂಪೂರ್ಣ ಹೊಣೆ’ – ಬಿಜೆಪಿ ನಾಯಕ ರಾಜ್ಯವರ್ಧನ್ ರಾಥೋಡ್

ಇದನ್ನೂ ಓದಿ
Udaipur Murder ಸಾಮಾಜಿಕ ಮಾಧ್ಯಮಗಳಲ್ಲಿ ಬೆದರಿಕೆ ಕಾರಣ ಕನ್ಹಯ್ಯಾ ಕೆಲಸಕ್ಕೆ ಹೋಗಿರಲಿಲ್ಲ, ರಜೆ ನಂತರ ಹೋದಾಗ ಹೀಗಾಯ್ತು: ಕನ್ಹಯ್ಯಾ ಲಾಲ್ ಪತ್ನಿ
ಕನ್ಹಯ್ಯಾ ಲಾಲ್‌ ಪಾರ್ಥಿವ ಶರೀರ ಕುಟುಂಬದವರಿಗೆ ಹಸ್ತಾಂತರ; ಮುಗಿಲು‌ ಮುಟ್ಟಿದ ಆಕ್ರಂದನ, ಪೊಲೀಸರ ವಿರುದ್ಧ ಆಕ್ರೋಶದ ಕೂಗು
Udaipur Murder: ಉದಯಪುರ ಟೈಲರ್ ಹತ್ಯೆಯ ತನಿಖೆಯ ಹೊಣೆ ಎನ್​ಐಎ ಹೆಗಲಿಗೆ; ಗೃಹ ಸಚಿವಾಲಯ ಆದೇಶ

ರಾಜ್ಯದಲ್ಲಿ “ಭಯೋತ್ಪಾದಕ” ಕೃತ್ಯಗಳನ್ನು ತಡೆಯಲು ರಾಜಸ್ಥಾನ ಸರ್ಕಾರವು ಏನೂ ಮಾಡಲಿಲ್ಲ ಎಂದು ಬಿಜೆಪಿ ನಾಯಕ ರಾಜ್ಯವರ್ಧನ್ ರಾಥೋಡ್ ಆರೋಪಿಸಿದ್ದಾರೆ. “ರಾಜ್ಯದಲ್ಲಿ ಭಯೋತ್ಪಾದಕ ಸಂಘಟನೆಗಳು ಅಭಿವೃದ್ಧಿ ಹೊಂದುತ್ತಿವೆ. ರಾಜ್ಯ ಸರ್ಕಾರವು ನೇರವಾಗಿ ಅಥವಾ ಪರೋಕ್ಷವಾಗಿ ಅವರನ್ನು ಪ್ರಚೋದಿಸಿದೆ” ರಾಥೋಡ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಕನ್ಹಯ್ಯಾ ಲಾಲ್‌ಗೆ ಕೊಲೆ ಬೆದರಿಕೆಗಳು ಬರುತ್ತಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ: ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್

ಕನ್ಹಯ್ಯಾ  ಲಾಲ್ ಅವರಿಗೆ ಜೀವ ಬೆದರಿಕೆಯ ಕುರಿತು ದೂರು ನೀಡಿದ್ದರೂ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾಗಿದ್ದಾರೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್  ಹೇಳಿದ್ದಾರೆ. “ಸಂತ್ರಸ್ತ ಕನ್ಹಯ್ಯ ಲಾಲ್‌ಗೆ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಕೊಲೆ ಬೆದರಿಕೆಗಳು ಬರಲಾರಂಭಿಸಿದವು. ಅವರು ಪೊಲೀಸರಿಗೆ ಮಾಹಿತಿ ನೀಡಿದರು … ಆದರೆ ಯಾವ ಒತ್ತಡದಲ್ಲಿ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ತಿಳಿದಿಲ್ಲ” ಎಂದು ಶೇಖಾವತ್ ಹೇಳಿದ್ದಾರೆ.

ಉದಯಪುರ ಹತ್ಯೆಯ ಆರೋಪಿಗಳನ್ನು ಬಂಧಿಸಿದ  ಪೊಲೀಸರಿಗೆ ಬಡ್ತಿ 

ಉದಯಪುರ ಹತ್ಯೆಯ  ಆರೋಪಿಗಳನ್ನು ಬಂಧಿಸಿದ ಐವರು ಪೊಲೀಸರು- ತೇಜ್ ಪಾಲ್, ನರೇಂದ್ರ,ಶೌಕತ್,ವಿಕಾಸ್ ,ಗೌತಮ್ ಅವರಿಗೆ  ಔಟ್ ಆಫ್ ಟರ್ಮ್ ಪ್ರೊಮೋಷನ್ ನೀಡಲು ನಿರ್ಧರಿಸಲಾಗಿದೆ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.

 ಕೊಲೆ ಪ್ರಕರಣವನ್ನು ರಾಜಸ್ಥಾನ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ

ಉದಯಪುರದಲ್ಲಿ ಟೈಲರ್‌ನ ಭೀಕರ ಹತ್ಯೆಯನ್ನು ತಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ . ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಉಗ್ರಗಾಮಿ  ಅಂಶಗಳು ಒಳಗೊಳ್ಳದೆ ಇಂತಹ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ಗೆಹ್ಲೋಟ್ ಹೇಳಿದ್ದಾರೆ.

Published On - 4:06 pm, Wed, 29 June 22