AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ಕಿತ್ತೊಗೆದು ದೇಶಕ್ಕೆ ಅಚ್ಛೇ ದಿನ್ ತರುತ್ತೇವೆ: ಮುಂಬೈನ ದಸರಾ ಸಮಾವೇಶದಲ್ಲಿ ಉದ್ಧವ್ ಠಾಕ್ರೆ ಮಾತು

ಮುಂಬೈ ದಸರಾ ಸಮಾವೇಶದಲ್ಲಿ ಉದ್ಧವ್ ಠಾಕ್ರೆ ಅವರು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ನಿಜವಾದ ‘ಅಚ್ಛೇ ದಿನ್’ ತರುವಂತೆ ಕರೆ ನೀಡಿದರು. ಬಿಜೆಪಿ ನಕಲಿ ಹಿಂದುತ್ವ ಪ್ರಚಾರ ಮಾಡುತ್ತಿದೆ, ಯುವಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಮತ್ತು ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗುತ್ತಿದೆ ಎಂದು ತೀವ್ರವಾಗಿ ಟೀಕಿಸಿದರು. ದೆಹಲಿಯ ಕೆಂಪುಕೋಟೆಯಲ್ಲೂ ಕೇಸರಿ ಧ್ವಜ ಹಾರಿಸುವ ಸಂಕಲ್ಪ ಮಾಡಿದರು.

ಬಿಜೆಪಿ ಕಿತ್ತೊಗೆದು ದೇಶಕ್ಕೆ ಅಚ್ಛೇ ದಿನ್ ತರುತ್ತೇವೆ: ಮುಂಬೈನ ದಸರಾ ಸಮಾವೇಶದಲ್ಲಿ ಉದ್ಧವ್ ಠಾಕ್ರೆ  ಮಾತು
ಉದ್ಧವ್ ಠಾಕ್ರೆ Image Credit source: PTI
ನಯನಾ ರಾಜೀವ್
|

Updated on: Oct 21, 2026 | 7:43 AM

Share

ಮುಂಬೈ, ಅಕ್ಟೋಬರ್ 21: ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ದೇಶದಲ್ಲಿ ಆಡಳಿತ ಬದಲಾವಣೆ ತರಲು ಮತ್ತು ನಿಜವಾದ ಅಚ್ಛೇ ದಿನ್ ಮರಳಿ ತರಲು ವಿರೋಧ ಪಕ್ಷಗಳು ಸಿದ್ಧವಾಗಿವೆ ಎಂದು ಶಿವಸೇನೆ(ಯುಟಿಬಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಮುಂಬೈನ ಐತಿಹಾಸಿಕ ಶಿವಾಜಿ ಪಾರ್ಕ್‌ನಲ್ಲಿ ನಡೆದ ಸಾಂಪ್ರದಾಯಿಕ ದಸರಾ ರ‍್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು. ಉದ್ಯೋಗ ಮತ್ತು ಹಕ್ಕುಗಳಿಗಾಗಿ ಬೀದಿಗೆ ಇಳಿದು ಧ್ವನಿ ಎತ್ತುತ್ತಿರುವ ಯುವ ಸಮುದಾಯವನ್ನು ಸರ್ಕಾರ ಹತ್ತಿಕ್ಕಬಾರದು. ಅವರು ನಕ್ಸಲರಲ್ಲ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕ್ರಾಂತಿಕಾರಿಗಳು. ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆಯುತ್ತಿದ್ದು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಮೂಲಕ ಯುವ ಹಾಗೂ ಹೊಸ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಠಾಕ್ರೆ ಗಂಭೀರ ಆರೋಪ ಮಾಡಿದರು.

ಹಿಂದುತ್ವದ ವ್ಯಾಖ್ಯಾನ: ಕೇಸರಿ ಶಾಲು ಧರಿಸಿ ಮಹಿಳೆಯರನ್ನು ಕೀಟಲೆ ಮಾಡುವವರ ಹಿಂದುತ್ವವನ್ನು ನಾವು ಒಪ್ಪುವುದಿಲ್ಲ. ಬಿಜೆಪಿ ನಕಲಿ ಹಿಂದುತ್ವವನ್ನು ಪ್ರಚಾರ ಮಾಡುತ್ತಾ ಧರ್ಮಕ್ಕೆ ಅಪಖ್ಯಾತಿ ತರುತ್ತಿದೆ. ನಮ್ಮ ಹಿಂದುತ್ವ ಜನರನ್ನು ಬೆಸೆಯುವಂಥದ್ದು.

ಮತ್ತಷ್ಟು ಓದಿ: ಥಾಣೆಯಲ್ಲಿ ಶಿವಸೇನಾ ಮುಖಂಡನ ಭೀಕರ ಹತ್ಯೆ: ಕಚೇರಿ ಮುಂದೆಯೇ ಗುಂಡಿಕ್ಕಿ ಪ್ರದೀಪ್ ಪೂರ್ಣೇಕರ್ ಕೊಲೆ

ದೆಹಲಿಯ ಕೆಂಪು ಕೋಟೆಯಲ್ಲೂ ಭಗವಾ ಧ್ವಜ: ಮಹಾರಾಷ್ಟ್ರ ವಿಧಾನಸಭೆ ಮಾತ್ರವಲ್ಲದೆ ದೆಹಲಿಯ ಕೆಂಪುಕೋಟೆಯ ಮೇಲೂ ಭಗವಾ (ಕೇಸರಿ) ಧ್ವಜ ಹಾರಿಸುವುದೇ ನಮ್ಮ ಸಂಕಲ್ಪ. ತ್ರಿವರ್ಣ ಧ್ವಜದ ಬಣ್ಣಗಳನ್ನು ಪ್ರತ್ಯೇಕಿಸುವ ಮೂಲಕ ಬಿಜೆಪಿ ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಸೇನೆ ದಸರಾ ರ‍್ಯಾಲಿಯ 60ನೇ ವರ್ಷ: 1966ರಲ್ಲಿ ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಅವರು ‘ಮಣ್ಣಿನ ಮಕ್ಕಳು’ (ಮರಾಠಿ ಮನೂಸ್) ಪರಿಕಲ್ಪನೆಯೊಂದಿಗೆ ಇದೇ ಶಿವಾಜಿ ಪಾರ್ಕ್‌ನಲ್ಲಿ ಮೊದಲ ದಸರಾ ರ‍್ಯಾಲಿ ಆರಂಭಿಸಿದ್ದರು. ಈ ಬಾರಿ ಸಮಾವೇಶವು ತನ್ನ 60ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು.

ಸಂಜಯ್ ರಾವತ್ ಪ್ರತಿಕ್ರಿಯೆ: ‘ಆಡಳಿತ ಬದಲಾವಣೆ ಪ್ರಜಾಸತ್ತಾತ್ಮಕ ಹಕ್ಕು’ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಮಾತನಾಡಿ, “ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳನ್ನು ಬದಲಾಯಿಸುವುದು ನಾಗರಿಕರ ಹಕ್ಕು. 2014ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನು ಬದಲಾಯಿಸಿ ಎನ್‌ಡಿಎ ಅಧಿಕಾರಕ್ಕೆ ಬಂದಂತೆ, ಈಗಲೂ ಕೇಂದ್ರದಲ್ಲಿ ಬದಲಾವಣೆ ಅನಿವಾರ್ಯವಾಗಿದೆ” ಎಂದರು. ಆರ್‌ಎಸ್‌ಎಸ್  ಸರಸಂಘ ಚಾಲಕ ಮೋಹನ್ ಭಾಗವತ್ ಅವರ ವಿಜಯದಶಮಿ ಭಾಷಣದಲ್ಲಿನ ‘ಆಡಳಿತ ಬದಲಾವಣೆ’ ಕುರಿತಾದ ಹೇಳಿಕೆಗಳನ್ನು ಉಲ್ಲೇಖಿಸಿ ರಾವತ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More