ಪಣಜಿ: ಕಾರವಾರ ಬಳಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯ್ಕ್ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದೆ. ಹೀಗಾಗಿ, ವೈದ್ಯರು ಇಂದು ಶ್ರೀಪಾದ್ ನಾಯ್ಕ್ ಅವರನ್ನು ICUನಿಂದ ಜನರಲ್ ವಾರ್ಡ್ಗೆ ಶಿಫ್ಟ್ ಮಾಡಿದರು.
ಸದ್ಯ, ಕೇಂದ್ರ ಸಚಿವ ಗೋವಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತೀಚೆಗೆ ಕಾರವಾರದ ಬಳಿ ಶ್ರೀಪಾದ್ ನಾಯ್ಕ್ ಅವರ ಕಾರು ಅಪಘಾತಕ್ಕೆ ಈಡಾಗಿತ್ತು. ಅವಘಡದಲ್ಲಿ ಸಚಿವರ ಪತ್ನಿ ಹಾಗೂ PA ಮೃತಪಟ್ಟಿದ್ದರು.
ಅಂಕೋಲ ಸಮೀಪ ರಸ್ತೆ ಅಪಘಾತ: ಕೇಂದ್ರ ಸಚಿವ ಶ್ರೀಪಾದ್ ನಾಯಕ್ಗೆ ಗಂಭೀರ ಗಾಯ, ಪತ್ನಿ ಸಾವು