ಟಿವಿ 9 ನೆಟ್ವರ್ಕ್​ ಸೂಪರ್​ ಮೆಕ್ಯಾನಿಕ್​ ಕಂಟೆಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

| Updated By: Lakshmi Hegde

Updated on: Apr 09, 2022 | 12:45 PM

Castrol Super Mechanic 2021: ಮೆಕ್ಯಾನಿಕ್ ಕ್ಷೇತ್ರದ ಅತ್ಯಂತ ದೊಡ್ಡ ಕಾರ್ಯಕ್ರಮ ಇದಾಗಿದ್ದು, 2017ರಿಂದ ಪ್ರಾರಂಭವಾಗಿದೆ. ಈ ಸ್ಪರ್ಧೆಯ 5ನೇ ಆವೃತ್ತಿ ಇದೇ ವರ್ಷದ ಪ್ರಾರಂಭದಲ್ಲಿ ಶುರುವಾಗಿದೆ.  ಮೊದಲ ಸುತ್ತಿಗೆ 1 ಲಕ್ಷದ 45 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದರು.

ಟಿವಿ 9 ನೆಟ್ವರ್ಕ್​ ಸೂಪರ್​ ಮೆಕ್ಯಾನಿಕ್​ ಕಂಟೆಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್
ಟಿವಿ9 ನೆಟ್ವರ್ಕ್​ ಸೂಪರ್ ಮೆಕ್ಯಾನಿಕ್ ಕಂಟೆಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​
Follow us on

ಭಾರತದ ಪ್ರಮುಖ ತೈಲ ಕಂಪನಿಯಾದ ಕ್ಯಾಸ್ಟೋಲ್​​, ಟಿವಿ 9 ನೆಟ್ವರ್ಕ್​ನ ಸಹಭಾಗಿತ್ವದಲ್ಲಿ ಆಯೋಜಿಸಿರುವ  ಸೂಪರ್​ ಮೆಕ್ಯಾನಿಕ್​ ಕಂಟೆಸ್ಟ್​ (ಇದೊಂದು ಸ್ಪರ್ಧಾ ಕಾರ್ಯಕ್ರಮ)ನಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಪಾಲ್ಗೊಂಡು, ಸ್ಪರ್ಧೆಯಲ್ಲಿ ಭಾಗವಹಿಸಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಮೆಕ್ಯಾನಿಕ್​ (ಯಂತ್ರಶಾಸ್ತ್ರ) ಕ್ಷೇತ್ರದಲ್ಲಿ ಕೌಶಲ ವೃದ್ಧಿ ಉತ್ತೇಜನದ ಸಲುವಾಗಿ ಈ ಸ್ಪರ್ಧೆಯನ್ನು ಟಿವಿ 9 ನೆಟ್ವರ್ಕ್ ಮತ್ತು ಕ್ಯಾಸ್ಟೋಲ್​ ಕಂಪನಿಗಳು ಸಹಭಾಗಿತ್ವದಲ್ಲಿ ಆಯೋಜಿಸಿವೆ.  ಮೆಕ್ಯಾನಿಕ್ ಕ್ಷೇತ್ರದ ಅತ್ಯಂತ ದೊಡ್ಡ ಕಾರ್ಯಕ್ರಮ ಇದಾಗಿದ್ದು, 2017ರಿಂದ ಪ್ರಾರಂಭವಾಗಿದೆ. ಈ ಸ್ಪರ್ಧೆಯ 5ನೇ ಆವೃತ್ತಿ ಇದೇ ವರ್ಷದ ಪ್ರಾರಂಭದಲ್ಲಿ ಶುರುವಾಗಿದೆ.  ಮೊದಲ ಸುತ್ತಿಗೆ 1 ಲಕ್ಷದ 45 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದರು. ಹಲವು ಸುತ್ತುಗಳ ಸ್ಪರ್ಧೆ ನಡೆದ ಬಳಿಕ ಇದೀಗ ಅಂತಿಮ ಹಂತಕ್ಕೆ 50 ಮಂದಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಸೂಪರ್ ಮೆಕ್ಯಾನಿಕ್ ಕಂಟೆಸ್ಟ್​ನ ಫೈನಲ್​ ಶುಕ್ರವಾರ ದೆಹಲಿಯಲ್ಲಿ ನಡೆಯಲಿದೆ.

ಅದಕ್ಕೂ ಮೊದಲು ನಿನ್ನೆ (ಏಪ್ರಿಲ್​  8) ಈ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಪಾಲ್ಗೊಂಡಿದ್ದರು. ಈ ಬಗ್ಗೆ  ಕೇಂದ್ರ ಶಿಕ್ಷಣ ಸಚಿವಾಲಯ ಟ್ವೀಟ್ ಮಾಡಿ, ಫೋಟೋಗಳನ್ನೂ ಶೇರ್ ಮಾಡಿಕೊಂಡಿದೆ. #SeekhengeJeetengeBadhenge ಸ್ಕೀಮ್​ನಲ್ಲಿ ಆಯೋಜಿಸಲಾಗುತ್ತಿರುವ ಟಿವಿ9 ನೆಟ್ವರ್ಕ್​ ಸೂಪರ್​ ಮೆಕ್ಯಾನಿಕ್​ ಕಂಟೆಸ್ಟ್​ ಸಮಾರಂಭದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಪಾಲ್ಗೊಂಡು ಎಲ್ಲ ಸ್ಪರ್ಧಿಗಳಿಗೆ, ವಿಜೇತರಿಗೆ ಶುಭ ಹಾರೈಸಿದರು ಎಂದು ಹೇಳಿದೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಟ್ವೀಟ್ ಮಾಡಿರುವ ಧರ್ಮೇಂದ್ರ ಪ್ರಧಾನ್​, ವೃತ್ತಿಪರ ತರಬೇತಿಗೆ ಹೊಸ ರೂಪದ ಕಲ್ಪನೆ ನೀಡುವ ಅಗತ್ಯವಿದೆ. ಮೆಕ್ಯಾನಿಕ್ ಪದವಿ ಅಥವಾ ಡಿಪ್ಲೋಮಾ ಮಾಡುವವರ ಕೊರತೆಯಿದೆ ಎಂಬ ಕಳಂಕವನ್ನು ತೊಡೆದುಹಾಕುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಇಂಥ ಸ್ಪರ್ಧೆಗಳು ಪೂರಕ ಎಂದು ಹೇಳಿದ್ದರು. ಹಾಗೇ, ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಶಿಕ್ಷಣ ಸಚಿವರು ಕಾರ್ಯಕ್ರಮವನ್ನು ಹೊಗಳಿದರು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಜಾಗತಿಕ ಕೌಶಲದ ಕೇಂದ್ರವಾಗುತ್ತಿದೆ. ಅತ್ಯುತ್ತಮವಾದ ಕಾರ್ಯಪಡೆ ಇದ್ದ ಹೊರತು, ಆತ್ಮ ನಿರ್ಭರ, ಸ್ವಾವಲಂಬಿ ಭಾರತ ನಿರ್ಮಾಣದ ಗುರಿ ತಲುಪಲು ಸಾಧ್ಯವಿಲ್ಲ ಎಂದು ಹೇಳಿದರು. ಕೌಶಲ ಮತ್ತು ಅಭಿವೃದ್ಧಿ ಯೋಜನೆಯ ಭಾಗವಾಗಿ ದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗವನ್ನು ಏಕೀಕರಣಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂಬುದನ್ನೂ ತಿಳಿಸಿದ್ದಾರೆ.

ಇದನ್ನೂ ಓದಿ: Castrol Super Mechanic 2021: ಕ್ಯಾಸ್ಟೋಲ್ ಸೂಪರ್ ಮೆಕಾನಿಕ್ ಕಾಂಟೆಸ್ಟ್ ಫೈನಲ್ಸ್​ಗೆ 50 ಮೆಕಾನಿಕ್​ಗಳು

Published On - 11:59 am, Sat, 9 April 22