Castrol Super Mechanic 2021: ಕ್ಯಾಸ್ಟೋಲ್ ಸೂಪರ್ ಮೆಕಾನಿಕ್ ಕಾಂಟೆಸ್ಟ್ ಫೈನಲ್ಸ್ಗೆ 50 ಮೆಕಾನಿಕ್ಗಳು
ಮೆಕಾನಿಕ್ಗಳಿಗೆ ತಮ್ಮ ಪ್ರತಿಭೆ ಮತ್ತು ತಾಂತ್ರಿಕ ಕೌಶಲ ಪ್ರದರ್ಶನಕ್ಕೆ ಇದು ಅತ್ಯುತ್ತಮ ವೇದಿಕೆಯಾಗಿತ್ತು. ಮೆಕ್ಯಾನಿಕ್ಗಳಿಗೆ ರಾಷ್ಟ್ರಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲೂ ಇದರಿಂದ ಅವಕಾಶ ಸಿಕ್ಕಿತ್ತು.
ಬೆಂಗಳೂರು: ಟಿವಿ9 ನೆಟ್ವರ್ಕ್ ಸಹಯೋಗದಲ್ಲಿ ಪ್ರಸ್ತುತಪಡಿಸಿದ್ದ ಕ್ಯಾಸ್ಟೊಲ್ ಸೂಪರ್ ಮೆಕಾನಿಕ್ ಸ್ಪರ್ಧೆಯ 4ನೇ ಆವೃತ್ತಿಗೆ ದೇಶಾದ್ಯಂತ ಮೆಕಾನಿಕ್ ಸಮುದಾಯದಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗಿತ್ತು. 1.41 ಲಕ್ಷ ಮೆಕಾನಿಕ್ಗಳು ಮೊದಲ ಹಂತದ ಸ್ಪರ್ಧೆಗೆ ನೋಂದಾಯಿಸಿಕೊಂಡಿದ್ದರು. ಮೆಕಾನಿಕ್ಗಳಿಗೆ ತಮ್ಮ ಪ್ರತಿಭೆ ಮತ್ತು ತಾಂತ್ರಿಕ ಕೌಶಲ ಪ್ರದರ್ಶನಕ್ಕೆ ಇದು ಅತ್ಯುತ್ತಮ ವೇದಿಕೆಯಾಗಿತ್ತು. ಮೆಕ್ಯಾನಿಕ್ಗಳಿಗೆ ರಾಷ್ಟ್ರಮಟ್ಟದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲೂ ಇದರಿಂದ ಅವಕಾಶ ಸಿಕ್ಕಿತ್ತು. ಸ್ಪರ್ಧೆಗಾಗಿ ಈ ವರ್ಷ ‘ಕಲಿಯೋಣ ಗೆಲ್ಲೋಣ ಬೆಳೆಯೋಣ’ ಎಂಬ ಘೋಷವಾಕ್ಯ ನೀಡಲಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನವನ್ನು ಮೆಕ್ಯಾನಿಕ್ಗಳಿಗೆ ಪರಿಚಯಿಸುವ ಮೂಲಕ ಅವರನ್ನು ಭವಿಷ್ಯಕ್ಕೆ ಸಜ್ಜುಗೊಳಿಸಲು ಹಲವು ಉಕ್ರಮಗಳನ್ನು ಈ ಸ್ಪರ್ಧೆ ಒಳಗೊಂಡಿತ್ತು.
2019ಕ್ಕೆ ಹೋಲಿಸಿದರೆ ಈ ಬಾರಿಯ ಸ್ಪರ್ಧೆಯಲ್ಲಿ ಮೆಕಾನಿಕ್ಗಳ ಸಂಖ್ಯೆಯನ್ನು ನಾಲ್ಕುಪಟ್ಟು ಹೆಚ್ಚಿಸಬೇಕೆಂಬ ಉದ್ದೇಶವನ್ನು ಕ್ಯಾಸ್ಟ್ರೋಲ್ ಹೊಂದಿತ್ತು. ಅದಕ್ಕಾಗಿ ಆಟೊಮೊಟಿವ್ ಸ್ಕಿಲ್ಸ್ ಡೆವಲಪ್ಮೆಂಟ್ ಕೌನ್ಸಿಲ್ ಸಹಯೋಗದಲ್ಲಿ ಕ್ಯಾಸ್ಟೋಲ್ ಈ ಸ್ಪರ್ಧೆಯನ್ನು ನಡೆಸಿತ್ತು. ಮೆಕ್ಯಾನಿಕ್ಗಳಿಗೆ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ತರಬೇತಿ ನೀಡುವ ಮತ್ತು ಅವರ ಕೌಶಲಗಳನ್ನು ಇನ್ನಷ್ಟು ಮೊನಚುಗೊಳಿಸಲು ಈ ಸಹಯೋಗವು ನೆರವಾಯಿತು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಕ್ಷೇತ್ರದ ವೃತ್ತಿಪರರಿಂದ ಹೊಸ ವಿಷಯಗಳನ್ನು ಕಲಿಯಲು ಈ ಸಹಯೋಗವು ಅವಕಾಶ ಕಲ್ಪಿಸಿಕೊಟ್ಟಿತು.
ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆಗೆ ಕೇಂದ್ರ ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಯ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಬೆಂಬಲವೂ ಸಿಕ್ಕಿತ್ತು. ಹೊಸ ಕೌಶಲಗಳನ್ನು ಅರಿತು ಅಳವಡಿಸಿಕೊಳ್ಳಲು ಈ ಸ್ಪರ್ಧೆಯು ಅತ್ಯುತ್ತಮ ಅವಕಾಶಗಳನ್ನು ಒದಗಿಸಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದರು. ಮೆಕ್ಯಾನಿಕ್ಗಳ ರಿಪೇರಿ ಕೌಶನ ಸುಧಾರಿಸಲು ಕಳೆದ ಹಲವು ವರ್ಷಗಳಿಂದ ಕ್ಯಾಸ್ಟ್ರೋಲ್ ಹಲವು ಉಪಕ್ರಮಗಳನ್ನು ತೆಗೆದುಕೊಂಡಿದೆ. ಮೆಕ್ಯಾನಿಕ್ಗಳ ಜೀವನ ಮತ್ತು ಬದುಕಿನ ರೀತಿಯನ್ನು ಸತತ ಪ್ರಯತ್ನ ನಡೆಯುತ್ತಿದೆ. 2017ರಲ್ಲಿ ಕ್ಯಾಸ್ಟೋಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆಯನ್ನು ಮೊದಲ ಬಾರಿಗೆ ಆರಂಭಿಸಿದೆವು. ನಂತರದ ದಿನಗಳಲ್ಲಿ ಸಾವಿರಾರು ಮೆಕ್ಯಾನಿಕ್ಗಳಿಗೆ ಅಗತ್ಯ ತರಬೇತಿ ಒದಗಿಸಿ, ರಾಷ್ಟ್ರಮಟ್ಟದಲ್ಲಿ ಅವರ ಕೌಶಲಗಳಿಗೆ ಬೆಳಕು ತೋರುವ ಕೆಲಸ ಮಾಡಿದೆವು. ಆಟೊಮೊಬೈಲ್ ಕ್ಷೇತ್ರದ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸುವುದು ಮತ್ತು ಕಲಿಕೆಯನ್ನು ಪ್ರಮಾಣಿಕರಿಸುವ ಉಪಕ್ರಮಗಳ ಮೂಲಕ ಮೆಕ್ಯಾನಿಕ್ಗಳಿಗೆ ಆದಾಯದ ಹರಿವು ಹೆಚ್ಚಿಸಲು ನೆರವಾಗಿದ್ದೇವೆ ಎನ್ನುತ್ತಾರೆ ಕ್ಯಾಸ್ಟೋಲ್ ಇಂಡಿಯಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಾಂಗ್ವಾನ್.
ಸ್ಪರ್ಧೆಗಾಗಿಯೇ ರೂಪಿಸಿದ್ದ ಐವಿಆರ್ ಮತ್ತು ವೆಬ್ಸೈಟ್ ಮೂಲಕ ಪಾಲ್ಗೊಂಡಿದ್ದ ಒಟ್ಟು 35,000 ಮೆಕ್ಯಾನಿಕ್ಗಳು 2ನೇ ಸುತ್ತಿಗೆ ಆಯ್ಕೆಯಾದರು. ಪರಿಣಿತರೊಂದಿಗೆ ಆನ್ಲೈನ್ ಸೆಷನ್ಸ್, ಲೈವ್ ಮಾಸ್ಟರ್ ಕ್ಲಾಸ್ಗಳ ಮೂಲಕ ನಡೆದ ಹಲವು ಕಾರ್ಯಕ್ರಮಗಳಲ್ಲಿ ಈ ಸ್ಪರ್ಧಾಳುಗಳಿಗೆ ತರಬೇತಿ ಒದಗಿಸಲಾಯಿತು. ಆಟೊಮೊಟಿವ್ ವಲಯದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮೆಕ್ಯಾನಿಕ್ಗಳಿಗೆ ಮಾಹಿತಿ ಒದಗಿಸಲು ಆನ್ಲೈನ್ ಮಾಸ್ಟರ್ ಕ್ಲಾಸ್ಗಳು ನೆರವಾದವು. ಹಲವು ಪ್ರಾದೇಶಿಕ ಭಾಷೆಗಳಲ್ಲಿಯೂ ಆನ್ಲೈನ್ ಮಾಸ್ಟರ್ ಕ್ಲಾಸ್ಗಳು ಲಭ್ಯವಿವೆ.
ಕಠಿಣ ತರಬೇತಿ ಮತ್ತು ಕೌಶಲವೃದ್ಧಿ ಪ್ರಯತ್ನಗಳ ನಂತರ 1000 ಸ್ಪರ್ಧಿಗಳು ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾದರು. 50 ಫೈನಲಿಸ್ಟ್ಗಳ ಪೈಕಿ ಈ ಸೀಸನ್ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದವರು ಭಾರತದ ಸೂಪರ್ ಮೆಕ್ಯಾನಿಕ್ ಆಗಿ ಆಯ್ಕೆಯಾಗುತ್ತಾರೆ. ಕೊರೊನಾ ಪಿಡುಗು ವ್ಯಾಪಿಸಿದ್ದ ಹಿನ್ನೆಲೆಯಲ್ಲಿ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಂಡು ಗರಿಷ್ಠ ಸಂಖ್ಯೆಯ ಮೆಕ್ಯಾನಿಕ್ಗಳನ್ನು ತಲುಪಲು ಪ್ರಯತ್ನಿಸಲಾಯಿತು. ಈ ಅವಧಿಯ ಕ್ಯಾಸ್ಪ್ರೋಲ್ ಸೂಪರ್ ಮೆಕ್ಯಾನಿಕ್ ಸ್ಪರ್ಧೆಯನ್ನು ವರ್ಚುವಲ್ ವೇದಿಕೆಗಳ ಮೂಲಕ ನಿರ್ವಹಿಸಲಾಯಿತು. ಕೊರೊನಾ ಪಿಡುಗಿನ ಹಿನ್ನೆಲೆಯಲ್ಲಿ ಮೆಕ್ಯಾನಿಕ್ಗಳನ್ನು ತಲುಪುವುದು ಮತ್ತು ಅವರಿಗೆ ಮಾಹಿತಿ ಅಗತ್ಯ ಮಾಹಿತಿ ಒದಗಿಸುವುದು ಸವಾಲಿನ ಸಂಗತಿಯಾಗಿತ್ತು. ಈ ಮಿತಿಗಳ ನಡುವೆಯು ಸ್ಪರ್ಧೆಗೆ ದೊಡ್ಡ ಸಂಖ್ಯೆಯಲ್ಲಿ ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದರು.
ನೋಂದಣಿ ಪ್ರಕ್ರಿಯೆಗಳ ನಿರ್ವಹಣೆಗಾಗಿ ಟಿವಿ ಪ್ರಕಟಣೆಗಳು, ಘೋಷಣೆಗಳು, ಆ್ಯಂಕರ್ಗಳ ಉಲ್ಲೇಖ, ರೇಡಿಯೊ ಜಾಹೀರಾತು, ಔಟ್ಡೋರ್ ಮತ್ತು ಡಿಜಿಟಲ್ ಜಾಹೀರಾತು, ವಾಟ್ಸ್ಆ್ಯಪ್ ಮೆಸೇಜ್, ಐವಿಆರ್ ಲೈನ್ ಮತ್ತು ಟೆಲಿ ಕಾಲಿಂಗ್ ಸೌಲಭ್ಯಗಳನ್ನು ಬಳಸಿಕೊಳ್ಳಲಾಯಿತು. ಬಹುಮಾಧ್ಯಮ ಬಳಕೆಯು ನೋಂದಣಿ ಪ್ರಕ್ರಿಯೆಯ ಸುಸೂತ್ರ ನಿರ್ವಹಣೆಗೆ ನೆರವಾದವು. ಮೆಕ್ಯಾನಿಕ್ಗಳಿಗೆ ಅನುಕೂಲ ಒದಗಿಸಿಕೊಡುವ ಉದ್ದೇಶದಿಂದ ಐವಿಆರ್ ಲೈನ್ಗಳನ್ನು ಹಲವು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸಲಾಗಿತ್ತು. ಸ್ಪರ್ಧಿಗಳು 9 ಭಾಷೆಗಳಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಇತ್ತು. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಕನ್ನಡ, ಗುಜರಾತಿ ಮತ್ತು ಮರಾಠಿ ಭಾಷೆಗಳಲ್ಲಿಯೇ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಇತ್ತು.
ಡಿಜಿಟಲ್ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದರಿಂದ ಸ್ಪರ್ಧಾಳುಗಳು ಅವರಿರುವ ದೂರದ ಪ್ರದೇಶಗಳಿಂದಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಂತೆ ಆಯಿತು. ಇದೇ ಕಾರಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು. ಪ್ರತಿ ಸ್ಪರ್ಧಿಗೂ ಕಾರ್ಯಕ್ರಮದ ಬಗ್ಗೆ ನಿಯಮಿತವಾಗಿ ಮಾಹಿತಿ ಒದಗಿಸಲಾಗುತ್ತಿದೆ. ಆಟೊಮೆಟಿವ್ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ಪರ್ಧೆಯ ಮುಂದಿನ ಹಂತಗಳ ಬಗ್ಗೆ ಮೆಕ್ಯಾನಿಕ್ಗಳಿಗೆ ನಿರಂತರವಾಗಿ ಮಾಹಿತಿ ಒದಗಿಸಲಾಗುತ್ತಿತ್ತು. ದೆಹಲಿಯಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಗಾಗಿ ಇವರೆಲ್ಲರೂ ಮೇಲಾಟ ನಡೆಸಲಿದ್ದಾರೆ. ಸ್ಪರ್ಧೆಯ ಈ ವರ್ಷದ ಆಶಯವು #SeekhengeJeetengeBadhenge (ಕಲಿಯೋಣ, ಗೆಲ್ಲೋಣ, ಬೆಳೆಯೋಣ) ಮೆಕ್ಯಾನಿಕ್ಗಳ ಕಲಿಯುವ, ಗೆಲ್ಲುವ, ಬೆಳೆಯುವ ಮನಸ್ಥಿತಿಯನ್ನು ಗೌರವಿಸುತ್ತದೆ. ಸ್ಪರ್ಧೆಯು ಇದೀಗ ಅಂತಿಮ ಹಂತದಲ್ಲಿದೆ. ‘2021ರ ಕ್ಯಾಸ್ಟ್ರೋಲ್ ಸೂಪರ್ ಮೆಕ್ಯಾನಿಕ್’ ಬಿರುದಿಗಾಗಿ ಎಲ್ಲ ಸ್ಪರ್ಧಾಳುಗಳು ತಮ್ಮ ಕೌಶಲ ಮತ್ತು ಪ್ರತಿಭೆಯನ್ನು ಪಣವಾಗಿಟ್ಟು ಶ್ರಮಿಸಲಿದ್ದಾರೆ.
ಕ್ಯಾಸ್ಟ್ರೋಲ್ ಇಂಡಿಯಾದ ಈ ಉಪಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿರುವವರು ಕ್ಯಾಸ್ಟ್ರೋಲ್ ಇಂಡಿಯಾದ ಅಧಿಕೃತ ವೆಬ್ಸೈಟ್ www.castrolsupermechaniccontest.in ಮತ್ತು ಯುಟ್ಯೂಬ್ ಚಾನೆಲ್ https://www.youtube.com/watch?v=ZrNECWMRs8g ಗೆ ಭೇಟಿ ನೀಡಬಹುದು.