ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 56 ಲಕ್ಷ ಮನೆಗಳು ಪೂರ್ಣ: ಸರ್ಕಾರ

ಸಚಿವಾಲಯದ ಪ್ರಕಾರ ಮಿಷನ್ ಅಡಿಯಲ್ಲಿ ಒಟ್ಟು ಹೂಡಿಕೆಯು 7.70 ಲಕ್ಷ ಕೋಟಿ ರೂ.ಗಳಾಗಿದ್ದು, ಕೇಂದ್ರದ ನೆರವು 1.96 ಲಕ್ಷ ಕೋಟಿ ರೂ. ಇಲ್ಲಿಯವರೆಗೆ ಕೇಂದ್ರದ ನೆರವು 1.18 ಲಕ್ಷ ಕೋಟಿ ರೂಪಾಯಿಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 56 ಲಕ್ಷ ಮನೆಗಳು ಪೂರ್ಣ: ಸರ್ಕಾರ
ಪ್ರಧಾನ ಮಂತ್ರಿ ಆವಾಸ್ ಯೋಜನೆImage Credit source: https://pmay-urban.gov.in/
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Mar 31, 2022 | 5:15 PM

ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) ಅಡಿಯಲ್ಲಿ ಇದುವರೆಗೆ ಸುಮಾರು 56.3 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ಸರ್ಕಾರ ಹೇಳಿದೆ. ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ಮನೋಜ್ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರೀಯ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯ (CSMC) 60 ನೇ ಸಭೆಯಲ್ಲಿ, ಪಿಎಂಎವೈ-ಯು ಅಡಿಯಲ್ಲಿ 2.42 ಲಕ್ಷ ಮನೆಗಳ ನಿವ್ವಳ ಹೆಚ್ಚಳದೊಂದಿಗೆ ಆರು ರಾಜ್ಯಗಳಲ್ಲಿ ಯೋಜನಾ ಪ್ರಸ್ತಾವನೆಗಳನ್ನು ನಿರ್ಮಿಸಲು ಅನುಮೋದಿಸಲಾಗಿದೆ. ಫಲಾನುಭವಿಗಳ ನೇತೃತ್ವದ ನಿರ್ಮಾಣ (BLC), ಸಹಭಾಗಿತ್ವದಲ್ಲಿ ಕೈಗೆಟುಕುವ ವಸತಿ (AHP) ಮತ್ತು ಪಿಎಂಎವೈ-ಯು ನ ಇನ್-ಸಿಟು ಸ್ಲಂ ಪುನರ್ವಸತಿ (ISSR) ವರ್ಟಿಕಲ್‌ಗಳ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತ್ರಿಪುರಾ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಯೋಜನೆಯ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ. “ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) ಅಡಿಯಲ್ಲಿ ಮಂಜೂರಾದ ಒಟ್ಟು ಮನೆಗಳ ಸಂಖ್ಯೆ ಈಗ 117.9 ಲಕ್ಷ. ಅದರಲ್ಲಿ ಸುಮಾರು 95.2 ಲಕ್ಷ ನಿರ್ಮಾಣಕ್ಕಾಗಿ ನೆಲಸಮವಾಗಿದೆ ಮತ್ತು ಸುಮಾರು 56.3 ಲಕ್ಷವನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಗುರುವಾರ (ಮಾರ್ಚ್ 31) ತಿಳಿಸಿದೆ.

ಸಚಿವಾಲಯದ ಪ್ರಕಾರ ಮಿಷನ್ ಅಡಿಯಲ್ಲಿ ಒಟ್ಟು ಹೂಡಿಕೆಯು 7.70 ಲಕ್ಷ ಕೋಟಿ ರೂ.ಗಳಾಗಿದ್ದು, ಕೇಂದ್ರದ ನೆರವು 1.96 ಲಕ್ಷ ಕೋಟಿ ರೂ. ಇಲ್ಲಿಯವರೆಗೆ ಕೇಂದ್ರದ ನೆರವು 1.18 ಲಕ್ಷ ಕೋಟಿ ರೂಪಾಯಿಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಸಿಎಸ್ಎಂಸಿ ಸಭೆಯಲ್ಲಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿ ಆಂಧ್ರಪ್ರದೇಶದಲ್ಲಿ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳ (ARHCs) ಮಾದರಿ 2 ರ ಅಡಿಯಲ್ಲಿ ಪ್ರಸ್ತಾವನೆಗಳನ್ನು ಅನುಮೋದಿಸಿದರು.

ಒಟ್ಟು 1,388 ಹೊಸ ಎಆರ್ ಎಚ್ ಸಿ ಘಟಕಗಳನ್ನು (ಸಿಂಗಲ್ ಬೆಡ್‌ರೂಮ್ ಮತ್ತು ಡಾರ್ಮಿಟರಿ ಸೇರಿದಂತೆ) ನಗರ ವಲಸಿಗರು/ಬಡವರಿಗಾಗಿ ಅನುಮೋದಿಸಲಾಗಿದೆ, ಇದರಲ್ಲಿ 3.24 ಕೋಟಿ ರೂ.ನ ತಂತ್ರಜ್ಞಾನ ಆವಿಷ್ಕಾರ ಅನುದಾನ (ಟಿಐಜಿ) ಒಳಗೊಂಡಿರುತ್ತದೆ.

ಪಿಎಂಎಯು-ವೈ ಅಡಿಯಲ್ಲಿನ ಉಪ ಯೋಜನೆಯಾದ ಎಆರ್​​ಎಚ್​​ಸಿಗಳು, ನಗರ ವಲಸಿಗರು/ಬಡವರಿಗೆ ತಮ್ಮ ಕೆಲಸದ ಸ್ಥಳದ ಸಮೀಪವಿರುವ ನಗರ ಪ್ರದೇಶಗಳಲ್ಲಿ ಕೈಗೆಟುಕುವ ಬಾಡಿಗೆ ವಸತಿ ಸೌಕರ್ಯವನ್ನು ಒದಗಿಸುತ್ತದೆ.

ಎಆರ್​​ಎಚ್​​ಸಿ ಅನ್ನು ಎರಡು ಮಾದರಿಗಳ ಮೂಲಕ ಕಾರ್ಯಗತಗೊಳಿಸಲಾಗುತ್ತಿದೆ.ಅದು ಯಾವುದೆಂದರೆ ಮಾದರಿ 1 ರ ಅಡಿಯಲ್ಲಿ, ಅಸ್ತಿತ್ವದಲ್ಲಿರುವ ಸರ್ಕಾರಿ ಅನುದಾನಿತ ಖಾಲಿ ಮನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಅಥವಾ ಸಾರ್ವಜನಿಕ ಏಜೆನ್ಸಿಗಳ ಮೂಲಕ ಎಆರ್​​ಎಚ್​​ಸಿಗಳಾಗಿ ಪರಿವರ್ತಿಸಲಾಗುತ್ತದೆ. ಮಾದರಿ 2 ರ ಅಡಿಯಲ್ಲಿ, ಎಆರ್​​ಎಚ್​​ಸಿ ಗಳ ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಸಾರ್ವಜನಿಕ/ಖಾಸಗಿ ಸಂಸ್ಥೆಗಳು ತಮ್ಮ ಸ್ವಂತ ಖಾಲಿ ಭೂಮಿಯಲ್ಲಿ ಮಾಡುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಭಾರತದ ದೊಡ್ಡ ಪಕ್ಷ ಗೂಂಡಾಗಿರಿ ನಡೆಸಿದರೆ ಅದು ತಪ್ಪು ಸಂದೇಶ ರವಾನಿಸುತ್ತದೆ, ದೇಶಕ್ಕಾಗಿ ನಾನು ಪ್ರಾಣ ಕೊಡಬಲ್ಲೆ: ಅರವಿಂದ ಕೇಜ್ರಿವಾಲ್

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ