ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳು 2022-23ರಲ್ಲಿ ಪೂರ್ಣಗೊಳ್ಳಲಿವೆ: ವಿತ್ತ ಸಚಿವೆ

PM Awas Yojana 2022-23 ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಗುರುತಿಸಲಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಮತ್ತು ಈ ಉದ್ದೇಶಕ್ಕಾಗಿ ₹ 48,000 ಕೋಟಿಗಳನ್ನು ನಿಗದಿಪಡಿಸಲಾಗಿದೆ

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆಗಳು 2022-23ರಲ್ಲಿ ಪೂರ್ಣಗೊಳ್ಳಲಿವೆ: ವಿತ್ತ ಸಚಿವೆ
ನಿರ್ಮಲಾ ಸೀತಾರಾಮನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Feb 01, 2022 | 6:08 PM

ದೆಹಲಿ: ಮಂಗಳವಾರ ಲೋಕಸಭೆಯಲ್ಲಿ ಬಜೆಟ್  (Budget 2022) ಮಂಡಿಸಿದ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು 2022-23ನೇ ಸಾಲಿನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ(Pradhan Mantri Awas Yojana PMAY) ಗುರುತಿಸಲಾದ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸುವುದಾಗಿ ಘೋಷಿಸಿದರು. ಯೋಜನೆಯನ್ನು ಪೂರ್ಣಗೊಳಿಸಲು 48,000 ಕೋಟಿಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. “2022-23 ರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಗುರುತಿಸಲಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅರ್ಹ ಫಲಾನುಭವಿಗಳಿಗೆ 80 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುವುದು ಮತ್ತು ಈ ಉದ್ದೇಶಕ್ಕಾಗಿ ₹ 48,000 ಕೋಟಿಗಳನ್ನು ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.  ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಕೈಗೆಟಕುವ ದರದಲ್ಲಿ ವಸತಿಗಳನ್ನು ಉತ್ತೇಜಿಸಲು ಎಲ್ಲಾ ಭೂಮಿ ಮತ್ತು ನಿರ್ಮಾಣ ಸಂಬಂಧಿತ ಅನುಮೋದನೆಗಳಿಗೆ ಅಗತ್ಯವಿರುವ ಸಮಯವನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ.ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಮಿಷನ್ 25 ಜೂನ್ 2015 ರಂದು ಕಾರ್ಯರೂಪಕ್ಕೆ ಬಂದಿತು, ಇದು ಎಲ್ಲರಿಗೂ ವಸತಿ ನೀಡುವ ಉದ್ದೇಶದ ಯೋಜನೆ ಆಗಿದೆ.

ಎಲ್ಲರಿಗೂ ಮತ್ತು ಪ್ರತಿ ಅರ್ಹ ಕುಟುಂಬ, ಸ್ವೀಕೃತದಾರರಿಗೆ ಮನೆಗಳನ್ನು ನೀಡಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ನೋಡಲ್ ಏಜೆನ್ಸಿಗಳಮೂಲಕ ಕಾರ್ಯನಿರ್ವಹಣೆಯ ಕಚೇರಿಗಳಿಗೆ ಮಿಷನ್, ಕೇಂದ್ರ ಸಹಾಯವನ್ನು ನೀಡುತ್ತದೆ.

‘2022 ರ ಹೊತ್ತಿಗೆ ಎಲ್ಲರಿಗೂ ವಸತಿ ಎಂಬುದು ಈಯೋಜನೆಯ ಉದ್ದೇಶವಾಗಿದ್ದು ಕ್ರೆಡಿಟ್-ಲಿಂಕ್ಡ್ PMAY ಸಬ್ಸಿಡಿ ಯೋಜನೆ (CLSS) ನಿರ್ದಿಷ್ಟ ಆರ್ಥಿಕ ವಿಭಾಗಗಳಿಗೆ ಸೇರಿದ ಭಾರತೀಯರಿಗೆ 2 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಈ ಉದ್ದೇಶಕ್ಕಾಗಿ 48,000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ನಗರ ಪ್ರದೇಶಗಳಲ್ಲಿ ಮಧ್ಯಮ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಕೈಗೆಟುಕುವ ವಸತಿಗಳನ್ನು ಉತ್ತೇಜಿಸಲು, ಎಲ್ಲಾ ಭೂಮಿ ಮತ್ತು ನಿರ್ಮಾಣ ಸಂಬಂಧಿತ ಅನುಮೋದನೆಗಳಿಗೆ ಅಗತ್ಯವಿರುವ ಸಮಯವನ್ನು ಕಡಿತಗೊಳಿಸಲು ಕೇಂದ್ರವು ರಾಜ್ಯಗಳೊಂದಿಗೆ ಕೆಲಸ ಮಾಡುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಮಧ್ಯವರ್ತಿ ವೆಚ್ಚದಲ್ಲಿ ಕಡಿತದ ಜೊತೆಗೆ ಬಂಡವಾಳದ ಪ್ರವೇಶವನ್ನು ವಿಸ್ತರಿಸಲು ನಾವು ಹಣಕಾಸು ವಲಯದ ನಿಯಂತ್ರಕರೊಂದಿಗೆ ಕೆಲಸ ಮಾಡುತ್ತೇವೆ” ಎಂದು ಸಚಿವರು ಹೇಳಿದರು. ಉತ್ತಮ ಭೂ ದಾಖಲೆಗಳ ನಿರ್ವಹಣೆಗಾಗಿ, ದಾಖಲೆಗಳ ಐಟಿ ಆಧಾರಿತ ನಿರ್ವಹಣೆಗೆ ಅನುಕೂಲವಾಗುವಂತೆ ವಿಶಿಷ್ಟ ಭೂ ಭಾಗದ ಗುರುತಿನ ಸಂಖ್ಯೆಯನ್ನು ಅಳವಡಿಸಿಕೊಳ್ಳಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುವುದು.

“ಯಾವುದೇ ಶೆಡ್ಯೂಲ್ VIII ಭಾಷೆಗಳಲ್ಲಿ ಭೂ ದಾಖಲೆಗಳ ಲಿಪ್ಯಂತರದ ಸೌಲಭ್ಯವನ್ನು ಸಹ ಹೊರತರಲಾಗುವುದು. ‘ಒನ್-ನೇಷನ್ ಒನ್-ರಿಜಿಸ್ಟ್ರೇಶನ್ ಸಾಫ್ಟ್‌ವೇರ್’ ನೊಂದಿಗೆ ರಾಷ್ಟ್ರೀಯ ಜೆನೆರಿಕ್ ಡಾಕ್ಯುಮೆಂಟ್ ನೋಂದಣಿ ವ್ಯವಸ್ಥೆ (NGDRS) ಅಳವಡಿಕೆ ಮೂಲಕ ನೋಂದಣಿ ಮತ್ತು ದಾಖಲೆಗಳನ್ನು ಎನಿವೇರ್ ರಿಜಿಸ್ಟ್ರೇಷನ್ ಮೂಲಕ ಏಕರೂಪದ ಪ್ರಕ್ರಿಯೆ ಮಾಡಲಾಗುವುದು.

ಪ್ರಧಾನ ಮಂತ್ರಿ ಆವಾಸ್ ಯೋಜನೆ – ಗ್ರಾಮೀಣ (PMAY-G) ಕಾರ್ಯಕ್ರಮದಡಿಯಲ್ಲಿ 2020-21 ರಲ್ಲಿ 33.99 ಲಕ್ಷ ಮನೆಗಳು ಮತ್ತು ನವೆಂಬರ್ 25, 2021 ರ ವೇಳೆಗೆ 26.20 ಲಕ್ಷ ಯೂನಿಟ್‌ಗಳು ಪೂರ್ಣಗೊಂಡಿವೆ ಎಂದು ಸೋಮವಾರ ಆರ್ಥಿಕ ಸಮೀಕ್ಷೆ ಹೇಳಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ – ನಗರ (PMAY-U), FY21 ರಲ್ಲಿ 14.56 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ. 2021-22ರಲ್ಲಿ 4.49 ಲಕ್ಷ ಮನೆಗಳು 2021ರ ಡಿಸೆಂಬರ್‌ವರೆಗೆ ಪೂರ್ಣಗೊಂಡಿವೆ ಎಂದು ಆರ್ಥಿಕ ಸಮೀಕ್ಷೆ ಹೇಳಿದೆ.

ಇದನ್ನೂ ಓದಿ:Budget 2022 ವರ್ಚುವಲ್‌ ಡಿಜಿಟಲ್‌ ಸ್ವತ್ತು, ಕ್ರಿಪ್ಟೊಕರೆನ್ಸಿಗಳ ಮೂಲಕ ಗಳಿಸುವ ಆದಾಯದ ಮೇಲೆ ಶೇ 30 ತೆರಿಗೆ: ಏನಿದು ಕ್ರಿಪ್ಟೊ ತೆರಿಗೆ? 

Published On - 5:41 pm, Tue, 1 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ