ಕುಂಭಮೇಳದಲ್ಲಿ ಮೂರು ಬಾರಿ ಕಳೆದೋದ ಹೆಂಡ್ತಿಯನ್ನು ಬಹುಬೇಗನೇ ಹುಡುಕಿಕೊಟ್ಟ ಪೊಲೀಸರ ವಿರುದ್ಧ ತಾತಪ್ಪನ ಅಸಮಾಧಾನ
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಇದೀಗ ಅಂತಹದ್ದೇ ದೃಶ್ಯವೊಂದು ವೈರಲ್ ಆಗಿದ್ದು, ವೃದ್ಧರೊಬ್ಬರು ತಮ್ಮ ಹೆಂಡ್ತಿಯನ್ನು ಹುಡುಕಿಕೊಟ್ಟ ಪೊಲೀಸರ ವಿರುದ್ಧವೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕುಂಭಮೇಳದಲ್ಲಿ ಮೂರು ಬಾರಿ ಕಳೆದೋದ ಹೆಂಡ್ತಿಯನ್ನು ಅಷ್ಟು ಬೇಗ ಹುಡುಕಿದ್ದು ಸರಿಯೇ? ಇದೆಂಥಾ ವ್ಯವಸ್ಥೆ ಪೊಲೀಸ್ರೇ ಎಂದು ಕೇಳಿದ್ದಾರೆ. ತಾತಪ್ಪನ ಈ ತಮಾಷೆಯ ಮಾತನ್ನು ಕೇಳಿ ನೆಟ್ಟಿಗರು ನಸು ನಕ್ಕಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹಲವಾರು ವೀಡಿಯೋಗಳು ಹರಿದಾಡುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ದೃಶ್ಯಗಳು ಎಲ್ಲರ ಗಮನ ಸೆಳೆಯುತ್ತವೆ. ಸದ್ಯ ಅಂತಹದ್ದೊಂದು ಇದೀಗ ವೈರಲ್ ಆಗಿದ್ದು, ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ ಅವರು ಅಲ್ಲಿನ ಕ್ರೌಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಹೇಗಿದೆ ಎಂಬುದನ್ನು ವಿವರಿಸುತ್ತಾ, ಇಲ್ಲಿ ಮೂರು ಬಾರಿ ಕಳೆದೋದ ತಮ್ಮ ಪತ್ನಿಯನ್ನು ಕೇವಲ ಅರ್ಧ ಗಂಟೆಯೊಳಗೆ ಹುಡುಕಿಕೊಟ್ಟ ಪೊಲೀಸರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಹೌದು ನನ್ನ ಹೆಂಡ್ತಿಯನ್ನು ಅಷ್ಟು ಬೇಗ ಹುಡುಕಿದ್ದು ಸರಿಯೇ? ಇದೆಂಥಾ ವ್ಯವಸ್ಥೆ ಪೊಲೀಸ್ರೇ ಎಂದು ಕೇಳಿದ್ದು, ತಾತಪ್ಪನ ಈ ತಮಾಷೆಯ ಮಾತು ನೆಟ್ಟಿಗರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದಂತ ವೃದ್ಧರೊಬ್ಬರು ಅಲ್ಲಿನ ಕ್ರೌಡ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಹೇಗಿದೆ ಎಂಬುದನ್ನು ಹೇಳಿದ್ದಾರೆ. ಈ ವ್ಯವಸ್ಥೆ ತುಂಬಾ ಕೆಟ್ಟದಾಗಿದೆ ಏಕೆಂದರೆ ಮೊದಲೆಲ್ಲಾ ಜನರು ಕುಂಭಮೇಳಕ್ಕೆ ಹೋದಾಗ ದಾರಿ ತಪ್ಪಿದ್ರೆ ಅವರನ್ನು ಹುಡುಕಲು 10-15 ವರ್ಷಗಳೇ ಬೇಕಾಗುತ್ತಿದ್ದವು. ಈ ಬಾರಿ ನಾವು ಕುಂಭಮೇಳಕ್ಕೆ ಹೋದಾಗ ನನ್ನ ಹೆಂಡ್ತಿ ಮೂರು ಬಾರಿ ಕಾಣೆಯಾಗಿದ್ದಳು. ಆದ್ರೆ ಪ್ರತಿ ಬಾರಿಯೂ ಆಕೆಯನ್ನು ಪೊಲೀಸರು ಅರ್ಧಗಂಟೆಯೊಳಗೆ ಹುಡುಕಿಕೊಟ್ಟಿದ್ದಾರೆ. ನಾನು ಹೇಗಾದರೂ ಆಕೆಯಿಂದ ತಪ್ಪಿಸಿಕೊಳ್ಳಬೇಕೆಂದು ಬಯಸಿದ್ದೆ, ಆದ್ರೆ ಅದೂ ಆಗಿಲ್ಲ, ಈ ಸಿಸ್ಟಮ್ ಸರಿಯೇ ಇಲ್ಲ ಎಂದು ತಮಾಷೆಯಾಗಿ ಮಾತನಾಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
पूर्ण महाकुंभ में व्यवस्था बहुत खराब है, बुजुर्ग ने खोली व्यवस्थाओं को पोल 😂🤣 pic.twitter.com/2gJTiyn4uY
— Nitin Shukla 🇮🇳 (@nshuklain) January 28, 2025
ನಿತಿನ್ ಶುಕ್ಲಾ (Nitin Shukla) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಕೊಳ್ಳಲಾದ ಈ ವಿಡಿಯೋದಲ್ಲಿ ವೃದ್ಧರೊಬ್ಬರು ಕುಂಭಮೇಳದಲ್ಲಿ ಭಾಗವಹಿಸಿದ್ದಾಗ ನನ್ನ ಹೆಂಡ್ತಿ ಮೂರು ಬಾರಿ ಕಳೆದೋಗಿದ್ಳು. ಆದ್ರೆ ಪೊಲೀಸರು ಆಕೆಯನ್ನು ಅರ್ಧ ಗಂಟೆಯೊಳಗೆ ಹುಡುಕಿಕೊಟ್ಟಿದ್ದಾರೆ. ಇದೆಂಥಾ ಸಿಸ್ಟಮ್ ಎಂದು ತಮಾಷೆಯ ಮಾತುಗಳನ್ನಾಡುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ; ಬರ್ತ್‌ಡೇ ಸೆಲೆಬ್ರೇಟ್ ಮಾಡಿಲ್ಲವೆಂದು ಮನೆಬಿಟ್ಟು ಹೋದ ಬಾಲಕ; ವಿಶೇಷವಾಗಿ ಬಾಲಕನ ಹುಟ್ಟುಹಬ್ಬ ಆಚರಿಸಿದ ಪೊಲೀಸರು
ಜನವರಿ 28 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.6 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಯ್ಯೋ ಈ ವ್ಯಕ್ತಿ ತಮ್ಮ ಹೆಂಡ್ತಿಯನ್ನು ಇಲ್ಲೇ ಬಿಟ್ಟು ಹೋಗುವ ಯೋಜನೆಯಲ್ಲಿದ್ದರೆಂದು ಕಾಣುತ್ತದೆʼ ಎಂಬ ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼತಾತಪ್ಪನಿಗೆ ತುಂಬಾ ದುಃಖವಾದಂತೆ ಕಾಣುತ್ತಿದೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ವ್ಯಕ್ತಿಯ ಮಾತುಗಳನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ