Viral: ನೀವು ಸುರಕ್ಷಿತವಾಗಿದ್ದೀರಿ ಅಲ್ವಾ; ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ವ್ಯಕ್ತಿಗೆ ಸುರಕ್ಷತಾ ಸಂದೇಶ ಕಳುಹಿಸಿದ ರ್‍ಯಾಪಿಡೋ
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬಳಕೆದಾರರು ತಮ್ಮ ಜೀವನದಲ್ಲಿ ನಡೆಯುವ ಕೆಲವೊಂದು ಇಂಟರೆಸ್ಟಿಂಗ್ ವಿಚಾರಗಳ ಬಗ್ಗೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರು ವ್ಯಕ್ತಿ ರ್‍ಯಾಪಿಡೋ ತನ್ನ ಸುರಕ್ಷತೆಯ ಬಗ್ಗೆ ವಿಚಾರಿಸಲು ಸಂದೇಶ ಕಳುಹಿಸಿದ ಘಟನೆಯ ಬಗ್ಗೆ ಶೇರ್ ಮಾಡಿಕೊಂಡಿದ್ದಾರೆ. ಹೌದು ತಾನು ಬೆಂಗ್ಳೂರು ಟ್ರಾಫಿಕ್‌ನಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ನೀವು ಸೇಫ್ ಆಗಿದ್ದೀರಿ ಅಲ್ವಾ ಎಂದು ರ್‍ಯಾಪಿಡೋ ಸಂದೇಶ ಕಳುಹಿಸಿದ್ದು, ರ್‍ಯಾಪಿಡೋದ ಈ ಸುರಕ್ಷತಾ ಕ್ರಮವನ್ನು ಕಂಡು ಅವರು ಆಶ್ಚರ್ಯಚಕಿತರಾಗಿದ್ದಾರೆ.

ಬೆಂಗಳೂರು, ಮುಂಬೈ, ದೆಹಲಿಯಂತಹ ದೊಡ್ಡ ದೊಡ್ಡ ನಗರಗಳಲ್ಲಿ ಆನ್‌ಲೈನ್ ಟ್ಯಾಕ್ಸಿ ಸೇವೆಗಳಾದ ಉಬರ್, ಓಲಾ ಮತ್ತು ರ್‍ಯಾಪಿಡೋ ಜನರ ಜೀವನವನ್ನು ಸುಲಭಗೊಳಿಸಿವೆ. ಪ್ರಯಾಣಕ್ಕೆ ಅನುಕೂಲಕರವೆಂದು ಈ ನಗರಗಳಲ್ಲಿ ಜನರು ಹೆಚ್ಚಾಗಿ ಕ್ಯಾಬ್ ಸೇವೆಗಳನ್ನೇ ಆಯ್ಕೆ ಮಾಡುತ್ತಾರೆ. ಆದ್ರೆ ಎಲ್ಲ ಸಂದರ್ಭಗಳಲ್ಲಿ ಕ್ಯಾಬ್ ಸುರಕ್ಷಿತವೇ ಎಂದು ಹಲವರಲ್ಲಿ ಒಂದು ಗೊಂದಲವಿರುತ್ತದೆ. ಆದರೆ ಕ್ಯಾಬ್ ಸೇವೆಗಳು ನಿಜಕ್ಕೂ ಸುರಕ್ಷಿತವಾಗಿದೆ ಎಂಬುದನ್ನು ಇಲ್ಲೊಬ್ರು ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು ಬೆಂಗ್ಳೂರು ಟ್ರಾಫಿಕ್‌ನಲ್ಲಿ ಸಿಲುಕಿದ್ದ ಸಂದರ್ಭದಲ್ಲಿ ನೀವು ಸೇಫ್ ಆಗಿದ್ದೀರಿ ಅಲ್ವಾ ಎಂದು ರ್‍ಯಾಪಿಡೋ ಸಂದೇಶ ಕಳುಹಿಸಿದ್ದು, ರ್‍ಯಾಪಿಡೋದ ಈ ಸುರಕ್ಷತಾ ಕ್ರಮವನ್ನು ಕಂಡು ಅವರು ಆಶ್ಚರ್ಯಚಕಿತರಾಗಿದ್ದಾರೆ.
ಬೆಂಗ್ಳೂರು ಟ್ರಾಫಿಕ್ ಬಗ್ಗೆ ಗೊತ್ತೇ ಇದೆ ಅಲ್ವಾ. ಇಲ್ಲೊಬ್ರು ವ್ಯಕ್ತಿ ಕೂಡಾ ರ್‍ಯಾಪಿಡೋ ಆಟೋದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಾರತಹಳ್ಳಿಯಲ್ಲಿರುವ ಬ್ರಿಡ್ಜ್ ಮೇಲೆ ಸಿಕ್ಕಿಹಾಕಿಕೊಂಡಿದ್ದರು. ದೀರ್ಘಕಾಲದವರೆಗೆ ಆಟೋ ಚಲಿಸದೆ ಟ್ರಾಫಿಕ್‌ನಲ್ಲಿ ನಿಂತಿದ್ದ ಕಾರಣ, ಸುರಕ್ಷತೆಯ ದೃಷ್ಟಿಯಿಂದ ರ್‍ಯಾಪಿಡೋ “ನೀವು ಪ್ರಯಾಣಿಸುತ್ತಿರುವ ವಾಹನ ಹಲವು ಹೊತ್ತಿನಿಂದ ಮೂವ್ ಆಗುತ್ತಿಲ್ಲ ಎಂಬುದು ನಮಗೆ ತಿಳಿದು ಬಂದಿದೆ, ನೀವು ಸೇಫ್ ಆಗಿದ್ದೀರಿ ತಾನೇ” ಎಂದು ಆ ವ್ಯಕ್ತಿಗೆ ಸುರಕ್ಷತಾ ಸಂದೇಶವನ್ನು ಕಳುಹಿಸಿದೆ. ಇದನ್ನು ನೋಡಿ ಅವರು ಫುಲ್ ಶಾಕ್ ಆಗಿದ್ದಾರೆ. ಗ್ರಾಹಕರ ಮೇಲೆ ರ್‍ಯಾಪಿಡೋ ಇಟ್ಟಿರುವ ಕಾಳಜಿಗೆ ಅವರು ಫುಲ್ ಖುಷಿಯಾಗಿದ್ದಾರೆ. ದೀರ್ಘ ಸಮಯದವರಗೆ ಆಟೋ ಚಲಿಸದೆ ಇದ್ದ ಕಾರಣ ಏನೋ ಸಮಸ್ಯೆ ಆಗಿರಬಹುದೆಂದು ಪ್ರಯಾಣಿಕನ ಸುರಕ್ಷತೆಯ ದೃಷ್ಟಿಯಿಂದ ರ್‍ಯಾಪಿಡೋ ನೀವು ಸೇಫ್ ಆಗಿದ್ದೀರಿ ಅಲ್ವಾ ಎಂಬ ಸಂದೇಶವನ್ನು ಕಳುಹಿಸಿದೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
Rapido just asked if I am safe because apparently my auto hadn’t moved in a while Brother in Christ I am not in danger I’m just on Marathahalli bridge
— unfunni (@unnimanga) January 28, 2025
ಈ ಕುರಿತ ಪೋಸ್ಟ್ ಒಂದನ್ನು unfunni ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ಆಗುತ್ತಿರುವ ಫೋಟೋದಲ್ಲಿ “ನೀವು ಪ್ರಯಾಣಿಸುತ್ತಿರುವ ವಾಹನ ಹಲವು ಹೊತ್ತಿನಿಂದ ಮೂವ್ ಆಗುತ್ತಿಲ್ಲ ಎಂಬುದು ನಮಗೆ ತಿಳಿದು ಬಂದಿದೆ, ನೀವು ಸೇಫ್ ಆಗಿದ್ದೀರಿ ತಾನೇ” ಎಂದು ರ್‍ಯಾಪಿಡೋ ಸುರಕ್ಷತಾ ಸಂದೇಶವನ್ನು ಕಳುಹಿಸಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಉಚಿತ ತಿಂಡಿ, ನೀರಿನಿಂದ ವೈ-ಫೈವರೆಗೆ ಯಾವ ವಿಮಾನಕ್ಕಿಂತಲೂ ಕಮ್ಮಿಯಿಲ್ಲ ಪ್ರಯಾಣಿಕರಿಗೆ ಈ ಕ್ಯಾಬ್‌ನಲ್ಲಿರುವ ಸೌಲಭ್ಯ
ಜನವರಿ 28 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 2.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼ ರ್‍ಯಾಪಿಡೋದ ಈ ನಡೆ ಮೆಚ್ಚುವಂತಹದ್ದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನನಗೆ ಉಬರ್ ಕೂಡಾ ಇದೇ ರೀತಿಯ ಸಂದೇಶ ಕಳುಹಿಸಿದೆʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ