Viral: ಹುಲಿಯಂತೆ ಕಾಣಲು ನಾಯಿಗಳಿಗೆ ಬಣ್ಣ ಬಳಿದ ಚೀನಾದ ಮೃಗಾಲಯ; ವಿಡಿಯೋ ವೈರಲ್
ಚೀನಾದಲ್ಲಿ ನಡೆಯುವಂತಹ ಕೆಲವೊಂದು ಚಿತ್ರ ವಿಚಿತ್ರ ಘಟನೆಗಳ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದ್ದು, ಚೀನಾದ ಮೃಗಾಲಯಯೊಂದು ಬಣ್ಣ ಬಳಿದ ನಾಯಿಗಳನ್ನೇ ಹುಲಿಯೆಂದು ಹೇಳಿ ಪ್ರವಾಸಿಗರಿಗೆ ಟೋಪಿ ಹಾಕಿದೆ. ಹೌದು ಹುಲಿಯಂತೆ ಕಾಣಲು ಚೌ ಚೌ ನಾಯಿಗಳಿಗೆ ಬಣ್ಣ ಬಳಿದಿದ್ದು, ಪ್ರಚಾರದ ಭಾಗವಾಗಿ ಹೀಗೆ ಮಾಡಿದ್ದು ಎಂದು ಮೃಗಾಲಯದ ಆಡಳಿತ ಮಂಡಳಿ ತಪ್ಪು ಒಪ್ಪಿಕೊಂಡಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ಮೃಗಾಲಯ, ಬೀಚ್, ಪಾರ್ಕ್ ಇನ್ನಿತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಹೊಸ ಹೊಸ ತಂತ್ರಗಳನ್ನು, ಒಳ್ಳೊಳ್ಳೆ ಪ್ರಚಾರ ಗಿಮಿಕ್‌ಗಳನ್ನು ಮಾಡಲಾಗುತ್ತದೆ. ಆದ್ರೆ ಇಲ್ಲೊಂದು ಮೃಗಾಲಯ ಬಣ್ಣ ಬಳಿದ ನಾಯಿಗಳನ್ನೇ ಹುಲಿಯೆಂದು ಹೇಳಿ ಪ್ರವಾಸಿಗರಿಗೆ ಟೋಪಿ ಹಾಕಿದೆ. ಹೌದು ಚೀನಾದ ಮೃಗಾಲಯ ಹುಲಿಯಂತೆ ಕಾಣಲು ಚೌ ಚೌ ನಾಯಿಗಳಿಗೆ ಬಣ್ಣ ಬಳಿದಿದ್ದು, ಪ್ರಚಾರದ ಭಾಗವಾಗಿ ಹೀಗೆ ಮಾಡಿದ್ದು, ಎಂದು ಮೃಗಾಲಯದ ಆಡಳಿತ ಮಂಡಳಿ ತಪ್ಪು ಒಪ್ಪಿಕೊಂಡಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಮೃಗಾಲಯದ ಈ ಗಿಮಿಕ್‌ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಚೀನಾದ ಜಿಯಾಂಗ್ಸು ಪ್ರಾಂತ್ಯದ ತೈಝೌನಲ್ಲಿರುವ ಮೃಗಾಲಯವೊಂದು ಚೌ ಚೌ ಜಾತಿಯ ನಾಯಿಗಳಿಗೆ ಕಪ್ಪು ಮತ್ತು ಕೇಸರಿ ಬಣ್ಣ ಬಳಿದು ಇದು ಪಟ್ಟೆ ಹುಲಿಯೆಂದು ಹೇಳಿ ಪ್ರವಾಸಿಗರಿಗೆ ಟೋಪಿ ಹಾಕಿದೆ. ಈ ನಾಯಿಗಳ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದು ಸಖತ್ ವೈರಲ್ ಆಗಿ ಮೃಗಾಲಯದ ವಿರುದ್ಧ ಬಾರೀ ಆಕ್ರೋಶ ಕೂಡಾ ವ್ಯಕ್ತವಾಗಿತ್ತು. ಇದಾದ ಬಳಿಕ ಮೃಗಾಲಯ ಸ್ಥಳೀಯ ಮಾಧ್ಯಮಗಳ ಬಳಿ ತಪ್ಪೊಪಿಕೊಂಡಿದ್ದು, “ಪ್ರಚಾರ ಗಿಮಿಕ್ ಸಲುವಾಗಿ ಚೌ ಚೌ ನಾಯಿಗಳಿಗೆ ಬಣ್ಣ ಬಳಿದಿದ್ದೇವೆ. ಇದರಿಂದ ನಾಯಿಗಳ ಆರೋಗ್ಯಕ್ಕೆ ಯಾವುದೇ ಅಪಾಯವಾಗಿಲ್ಲ ಮತ್ತು ಅವುಗಳಿಗೆ ಹಾನಿಯಾಗಿಲ್ಲ” ಎಂದು ಹೇಳಿದೆ.
ಇದೇ ಮೊದಲಲ್ಲ ಹೋದ ವರ್ಷ ಈ ಮೃಗಾಲಯ ಪಾಂಡಾಗಳನ್ನು ಹೋಲುವಂತೆ ನಾಯಿಗಳಿಗೆ ಬಣ್ಣ ಬಳಿದು ಸುದ್ದಿಯಾಗಿತ್ತು. ಇದೀಗ ಪ್ರಚಾರದ ಗಿಮಿಕ್‌ಗಾಗಿ ನಾಯಿಗಳಿಗೆ ಹುಲಿಯ ಬಣ್ಣವನ್ನು ಬಳಿದಿದೆ. ಮೃಗಾಲಯದ ಈ ಚೀಪ್ ಗಿಮಿಕ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
On January 24, 2025, at the “Qinhu Bay Forest Animal Kingdom” in Taizhou, Jiangsu Province, China, the park promoted itself on a Douyin livestream, claiming: “Our tigers are huge and very fierce!” pic.twitter.com/LFoGUm0fWc
— ( ͡ ͡° ͜ ʖ ͡ ͡°) (@eseLSMN) January 27, 2025
eseLSMN ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಹುಲಿಯಂತೆ ಹೋಲುವ ಎರಡು ನಾಯಿಗಳು ಮೃಗಾಲಯದಲ್ಲಿರುವಂತಹ ದೃಶ್ಯವನ್ನು ಕಾಣಬಹುದು. ಹುಲಿಯಂತೆ ಕಾಣಲು ಚೌ ಚೌ ನಾಯಿಗಳಿಗೆ ಕೇಸರಿ ಮತ್ತು ಕಪ್ಪು ಬಣ್ಣವನ್ನು ಬಳಿಯಲಾಗಿದೆ.
ಇದನ್ನೂ ಓದಿ: ಕುಂಭಮೇಳದಲ್ಲಿ ಮೂರು ಬಾರಿ ಕಳೆದೋದ ಹೆಂಡ್ತಿಯನ್ನು ಬಹುಬೇಗನೇ ಹುಡುಕಿಕೊಟ್ಟ ಪೊಲೀಸರ ವಿರುದ್ಧ ತಾತಪ್ಪನ ಅಸಮಾಧಾನ
ಜನವರಿ 27 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಥೇಟ್ ಹುಲಿಗಳಂತೆಯೇ ಕಾಣುತ್ತಿದೆ ಈ ನಾಯಿಗಳುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದೆಲ್ಲಾ ಚೀನಾದಲ್ಲಿ ಮಾತ್ರ ನಡೆಯಲು ಸಾಧ್ಯʼ ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ