ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರೊಟ್ಟಿಗೆ ನಿನ್ನೆ ರಾತ್ರಿ ಕಳೆದ ಗೃಹ ಸಚಿವ ಅಮಿತ್​ ಶಾ; ಹುತಾತ್ಮರಿಗೆ ಗೌರವ

| Updated By: Lakshmi Hegde

Updated on: Oct 26, 2021 | 11:42 AM

ಉಗ್ರರ ಬಗ್ಗೆ ಪ್ರಧಾನಿ ಮೋದಿ ಸರ್ಕಾರ ಶೂನ್ಯ ಸಹಿಷ್ಣುತಾ ಮನೋಭಾವ ಹೊಂದಿದೆ. ಕಾಶ್ಮೀರ ಕಣಿವೆಯಲ್ಲಿ ಸಂಪೂರ್ಣವಾಗಿ ಶಾಂತಿ ನೆಲೆಸುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಅಮಿತ್​ ಶಾ ಹೇಳಿದರು.

ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರೊಟ್ಟಿಗೆ ನಿನ್ನೆ ರಾತ್ರಿ ಕಳೆದ ಗೃಹ ಸಚಿವ ಅಮಿತ್​ ಶಾ; ಹುತಾತ್ಮರಿಗೆ ಗೌರವ
ಯೋಧರೊಂದಿಗೆ ಊಟ ಮಾಡಿದ ಅಮಿತ್​ ಶಾ
Follow us on

ದೆಹಲಿ: ಮೂರು ದಿನಗಳ ಜಮ್ಮು-ಕಾಶ್ಮೀರ ಪ್ರವಾಸ (Jammu-Kashmir Visit) ಹಮ್ಮಿಕೊಂಡು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಗೃಹ ಸಚಿವ ಅಮಿತ್​ ಶಾ, ನಿನ್ನೆ ರಾತ್ರಿ  ಪುಲ್ವಾಮಾದ ಸಿಆರ್​ಪಿಎಫ್​ ಕ್ಯಾಂಪ್​​​ನಲ್ಲಿ ಕಳೆದಿದ್ದಾರೆ. ಅವರು ನಿನ್ನೆ ಸಂಜೆ ದೆಹಲಿಗೆ ವಾಪಸ್​ ಆಗಬೇಕಿತ್ತು. ಆದರೆ ಅಮಿತ್​ ಶಾ (Amit Shah) ಹಾಗೆ ಮಾಡಲಿಲ್ಲ. 2019ರಲ್ಲಿ ಪುಲ್ವಾಮಾ(Pulwama)ದಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಿಂದ 40 ಯೋಧರು ಹುತಾತ್ಮರಾಗಿದ್ದರು. ನಿನ್ನೆ  ಸಿಆರ್​ಪಿಎಫ್​​ ಕ್ಯಾಂಪ್​​ನಲ್ಲಿ ಕಳೆದ ಅಮಿತ್​ ಶಾ ಅಂದು ಹುತಾತ್ಮರಾಧ ಯೋಧರಿಗೆ ಗೌರವ ಸಲ್ಲಿಸಿದರು. ಈ ವೇಳೆ ಅವರೊಂದಿಗೆ ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಇದ್ದರು. ಸಿಆರ್​ಪಿಎಫ್​ ಸಿಬ್ಬಂದಿಯೊಂದಿಗೆ ರಾತ್ರಿ ಔತಣಕೂಟ ನಡೆಸಿದರು. 

ಅದಕ್ಕೂ ಮೊದಲು ಭದ್ರತಾ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಅಮಿತ್​ ಶಾ, ಉಗ್ರರ ಬಗ್ಗೆ ಪ್ರಧಾನಿ ಮೋದಿ ಸರ್ಕಾರ ಶೂನ್ಯ ಸಹಿಷ್ಣುತಾ ಮನೋಭಾವ ಹೊಂದಿದೆ. ಕಾಶ್ಮೀರ ಕಣಿವೆಯಲ್ಲಿ ಸಂಪೂರ್ಣವಾಗಿ ಶಾಂತಿ ನೆಲೆಸುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದು ಹೇಳಿದರು. ಸಿಆರ್​ಪಿಎಫ್​ ಕ್ಯಾಂಪ್​​ನಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸೇನೆ, ಬಿಎಸ್​ಎಫ್​, ಸಿಆರ್​ಪಿಎಫ್​ ಅಥವಾ ಎಸ್​ಎಸ್​ಬಿ ಯಾವುದೇ ವಿಭಾಗವಾಗಿರಲಿ ಅವರು ನಮ್ಮ ದೇಶದ ಗಡಿಯ ಇಂಚಿಂಚನ್ನೂ ಕಾಪಾಡುತ್ತಿದ್ದಾರೆ. ಅಂಥವರೊಟ್ಟಿಗೆ ನಾನು ಕಾಲ ಕಳೆಯುವುದು ನಿಜಕ್ಕೂ ನನಗೆ ಖುಷಿಕೊಟ್ಟ ವಿಚಾರ.  ನನ್ನ ಮೂರು ದಿನಗಳ ಜಮ್ಮು-ಕಾಶ್ಮೀರ ಪ್ರವಾಸದಲ್ಲಿ ಇದು ನನ್ನ ಕೊನೆಯ ಮತ್ತು ಅತ್ಯಂತ ಮುಖ್ಯವಾದ ಕಾರ್ಯಕ್ರಮ ಎಂದು ಹೇಳಿದರು.

ಜಮ್ಮು-ಕಾಶ್ಮೀರದಲ್ಲಿ ಕಾನೂನು-ಸುವ್ಯವಸ್ಥೆ ಪರಿಸ್ಥಿತಿ ಸುಧಾರಿಸುತ್ತಿದೆ. ಪ್ರಧಾನಿ ಮೋದಿಯವರು ಇಲ್ಲಿ ಶಾಂತಿ ಸ್ಥಾಪನೆಗೆ ಪಣತೊಟ್ಟಿದ್ದಾರೆ. ಹಾಗೇ, ಜಮ್ಮು-ಕಾಶ್ಮೀರದಲ್ಲಿ ಶಾಂತಿ, ಕಾನೂನು-ಸುವ್ಯವಸ್ಥೆ ಸ್ಥಾಪನೆಯಾಗುವುದನ್ನು ನನ್ನ ಜೀವಿತಾವಧಿಯಲ್ಲಿ ನೋಡುತ್ತೇನೆ ಎಂಬ ಭರವಸೆ ಇದೆ.  ಇಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಅಂಥ ರಕ್ತಪಾತದ ಉಗ್ರದಾಳಿಗಳು ನಡೆದಿಲ್ಲ. ಆರ್ಟಿಕಲ್​ 370ನ್ನು ರದ್ದುಗೊಳಿಸಿದ್ದನ್ನು ಇಲ್ಲಿನ ಜನರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಪರೀಕ್ಷೆಯಲ್ಲಿ ಹೆಚ್ಚು ಅಂಕ ತೆಗೆದಿಲ್ಲ ಎಂದಿದ್ದಕ್ಕೆ ರೈಲಿನ ಕೆಳಗೆ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕ