Himachal Pradesh: ಮನಾಲಿಯಲ್ಲಿ ಇಂದು ಮುಂಜಾನೆ ಭೂಕಂಪ; 4.3ರಷ್ಟು ತೀವ್ರತೆ ದಾಖಲು
Himachal Pradesh Earthquake: ಇಂದು ಮುಂಜಾನೆ 6.2ರಹೊತ್ತಿಗೆ ಭೂಕಂಪ ಉಂಟಾಗಿದ್ದು, ಮನಾಲಿಯಿಂದ ಉತ್ತರ-ವಾಯುವ್ಯಕ್ಕೆ 108 ಕಿಮೀ ದೂರದಲ್ಲಿ, ಭೂಮೇಲ್ಮೈನಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ.
ಹಿಮಾಚಲಪ್ರದೇಶ (Himachal Pradesh)ದ ಪ್ರಸಿದ್ಧ ಪ್ರವಾಸಿ ತಾಣ ಮನಾಲಿಯಲ್ಲಿ ಇಂದು ಮುಂಜಾನೆ ಭೂಕಂಪನ (Earthquake)ವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ತಿಳಿಸಿದೆ. ಇಂದು ಮುಂಜಾನೆ 6.2ರಹೊತ್ತಿಗೆ ಭೂಕಂಪ ಉಂಟಾಗಿದ್ದು, ಮನಾಲಿಯಿಂದ ಉತ್ತರ-ವಾಯುವ್ಯಕ್ಕೆ 108 ಕಿಮೀ ದೂರದಲ್ಲಿ, ಭೂಮೇಲ್ಮೈನಿಂದ 10 ಕಿಮೀ ಆಳದಲ್ಲಿ ಭೂಮಿ ನಡುಗಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
Earthquake of Magnitude:4.3, Occurred on 26-10-2021, 06:02:10 IST, Lat: 33.18 & Long: 76.88, Depth: 10 Km ,Location: 108km NNW of Manali, Himachal Pradesh, India for more information download the BhooKamp App https://t.co/cuyqt9YQZC pic.twitter.com/ZaQ4O3bvvX
— National Center for Seismology (@NCS_Earthquake) October 26, 2021
ಕಳೆದ ಮೂರು ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಇದು ಮೂರನೇ ಬಾರಿಗೆ ಭೂಕಂಪನವಾಗುತ್ತಿದೆ. ಸೋಮವಾರ ಶಿಮ್ಲಾ ಮತ್ತು ಭಾನುವಾರ ಚಾಂಬಾದಲ್ಲಿ ಭೂಮಿ ನಡುಗಿತ್ತು. ನಿನ್ನೆ ಮುಂಜಾನೆ 4.08ರ ಹೊತ್ತಲ್ಲಿ ಶಿಮ್ಲಾದಲ್ಲಿ ಉಂಟಾದ ಭೂಕಂಪದ ತೀವ್ರತೆ ಕೇವಲ 2.1ರಷ್ಟಿತ್ತು. ಭೂ ಮೇಲ್ಮೈನಿಂದ 5 ಕಿಮೀ ಆಳದಲ್ಲಿ ಭೂಕಂಪನವಾಗಿತ್ತು. ಹಾಗೇ ಭಾನುವಾರ ಚಾಂಬಾದಲ್ಲೂ ಕೂಡ ಕಡಿಮೆ ಪ್ರಮಾಣದ ಭೂಕಂಪನ ಉಂಟಾಗಿತ್ತು.
ಇದನ್ನೂ ಓದಿ: ಕೊವಿಡ್ ಸಮಯದಲ್ಲಿ ಆರೋಗ್ಯಕರ ಮತ್ತು ಸುರಕ್ಷಿತ ದೀಪಾವಳಿ ಆಚರಣೆಗೆ ಸರಳ ಸಲಹೆಗಳು
ದೆಹಲಿಯಲ್ಲಿ ಬೆಂಗಳೂರು ಮೂಲದ ಉಗ್ರ ಮೊಹಮ್ಮದ್ ತಾಕೀರ್ ಬಂಧನ, ಉಗ್ರನ ನೆಟ್ವರ್ಕ್ ತಿಳಿದ್ರೆ ಬೆಚ್ಚಿ ಬೀಳ್ತಿರಾ
Published On - 9:57 am, Tue, 26 October 21