AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3 ದಿನಗಳ ಭೇಟಿಗಾಗಿ ಶನಿವಾರ ಕಾಶ್ಮೀರಕ್ಕೆ ಆಗಮಿಸಲಿದ್ದಾರೆ ಅಮಿತ್ ಶಾ

Amit Shah 11 ನಾಗರಿಕರು ಸಾವನ್ನಪ್ಪಿರುವ ಉದ್ದೇಶಿತ ದಾಳಿಗಳ ಬೆನ್ನಲ್ಲೇ ಅಮಿತ್ ಶಾ ಭೇಟಿ ನಡೆಯುತ್ತಿದ್ದು ಪಂಚಾಯತ್ ಸದಸ್ಯರು ಹಾಗೂ ರಾಜಕೀಯ ಕಾರ್ಯಕರ್ತರನ್ನು ಉದ್ದೇಶಿಸಿ ಅವರು  ಮಾತನಾಡಲಿದ್ದಾರೆ

ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 3 ದಿನಗಳ ಭೇಟಿಗಾಗಿ ಶನಿವಾರ ಕಾಶ್ಮೀರಕ್ಕೆ ಆಗಮಿಸಲಿದ್ದಾರೆ ಅಮಿತ್ ಶಾ
ಅಮಿತ್ ಶಾ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Oct 21, 2021 | 5:41 PM

Share

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮೂರು ದಿನಗಳ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿಗಾಗಿ ಶನಿವಾರ ಶ್ರೀನಗರಕ್ಕೆ ಆಗಮಿಸಲಿದ್ದು ಭದ್ರತಾ ಪರಿಶೀಲನಾ ಸಭೆಗಳ ಅಧ್ಯಕ್ಷತೆ ವಹಿಸಲಿದ್ದಾರೆ. 11 ನಾಗರಿಕರು ಸಾವನ್ನಪ್ಪಿರುವ ಉದ್ದೇಶಿತ ದಾಳಿಗಳ ಬೆನ್ನಲ್ಲೇ ಅಮಿತ್ ಶಾ ಭೇಟಿ ನಡೆಯುತ್ತಿದ್ದು ಪಂಚಾಯತ್ ಸದಸ್ಯರು ಹಾಗೂ ರಾಜಕೀಯ ಕಾರ್ಯಕರ್ತರನ್ನು ಉದ್ದೇಶಿಸಿ ಅವರು  ಮಾತನಾಡಲಿದ್ದಾರೆ.  ಆಗಸ್ಟ್ 2019 ರಲ್ಲಿ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಶಾ ಅವರ ಮೊದಲ ಮೊದಲ ಭೇಟಿ ಇದಾಗಿದೆ. ಇದು ಐದು ವಲಸೆ ಕಾರ್ಮಿಕರನ್ನು ಸೇರಿದಂತೆ ನಾಗರಿಕರ ಹತ್ಯೆಗಳು ಇಲ್ಲಿ ನಡೆದಿದ್ದು ಈ ಹಿಂಸಾಚಾರವು ಅನೇಕ ವಲಸೆ ಕಾರ್ಮಿಕರನ್ನು ಕಾಶ್ಮೀರ ಕಣಿವೆಯನ್ನು ತೊರೆಯುವಂತೆ ಮಾಡಿತು.

ಜಮ್ಮು ಮತ್ತು ಕಾಶ್ಮೀರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುನಿಲ್ ಶರ್ಮಾ ಅವರು, ಶಾ ಅವರು ಶ್ರೀನಗರಕ್ಕೆ ಆಗಮಿಸುತ್ತಾರೆ ಮತ್ತು ನಂತರ ಜಮ್ಮುವಿಗೆ ಹೋಗುತ್ತಾರೆ ಎಂದು ಎಂದು ಹೇಳಿದರು. “ನವದೆಹಲಿಗೆ ತೆರಳುವ ಮುನ್ನ ಅವರು ಮತ್ತೊಮ್ಮೆ ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ” ಎಂದು ಶರ್ಮಾ ಹೇಳಿದರು. ಅವರು ಶಾ ಅವರ ಕಾರ್ಯಕ್ರಮವೊಂದಕ್ಕೆ ತಮ್ಮ ಜಿಲ್ಲಾ ಅಧ್ಯಕ್ಷರನ್ನು ಕರೆದಿದ್ದಾರೆ ಎಂದು ಅವರು ಹೇಳಿದರು. ಗೃಹ ಸಚಿವರು ಜಮ್ಮುವಿನಲ್ಲಿ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ” ಎಂದು ಅವರು ಶಾ ಭೇಟಿಯ ಬಗ್ಗೆ ಬಿಜೆಪಿ ನಡೆಸಿದ ಸಭೆಯಲ್ಲಿ ಭಾಗವಹಿಸಿದ ನಂತರ ಶರ್ಮಾ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಣಿವೆಯಾದ್ಯಂತ ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಸಲಾಗಿದೆ ಏಕೆಂದರೆ ಭದ್ರತಾ ಪಡೆಗಳು ವಿಶೇಷವಾಗಿ ಶ್ರೀನಗರದಲ್ಲಿ ತಪಾಸಣೆ ಮತ್ತು ಚುರುಕನ್ನು ಹೆಚ್ಚಿಸಿವೆ. ಇತ್ತೀಚಿನ ಹಿಂಸಾಚಾರದ ನಡುವೆ ಕಣಿವೆಯ 10 ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಗಳು 17 ಭಯೋತ್ಪಾದಕರನ್ನು ಹತ್ಯೆಮಾಡಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಬುಧವಾರ ಕಣಿವೆಯಲ್ಲಿ ನಡೆದ ದಂಗೆ ವಿರೋಧಿ ಕಾರ್ಯಾಚರಣೆಯಲ್ಲಿ ಓರ್ವ ಯೋಧ ಕೂಡ ಹುತಾತ್ಮರಾಗಿದ್ದಾರೆ.

ಕೇಂದ್ರದ ಮುಂದುವರಿದ ಪ್ರಚಾರ ಅಭಿಯಾನದ ಭಾಗವಾಗಿರುವ ಶಾ, ಅಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸುವ ನಿರೀಕ್ಷೆಯಿದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟವು ಎರಡನೇ ಅವಧಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಅವರು ಜೂನ್ 2019 ರಲ್ಲಿ ಕೊನೆಯದಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಶಾ ಅವರು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದರೊಂದಿಗೆ ಅಭಿವೃದ್ಧಿಯನ್ನು ವೇಗಗೊಳಿಸಲು ಮತ್ತು ರಾಜ್ಯದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸುವುದಕ್ಕಾಗಿ ಬದಲಾವಣೆ ತಂದಿದ್ದಾರೆ.

ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಜಿ ಕಿಶನ್ ರೆಡ್ಡಿ ಮತ್ತು ಜಾನ್ ಬಾರ್ಲಾ ಅವರು ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರಯಾಣಿಸಿದ್ದರು.  ಶಾ ಕಳೆದ ತಿಂಗಳು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಹಿರಿಯ ಭದ್ರತಾ ಅಧಿಕಾರಿಗಳೊಂದಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಶೀಲನಾ ಸಭೆ ನಡೆಸಿದರು ಮತ್ತು ಅಲ್ಲಿ ಜಾರಿಗೆ ತರಲಾದ ಅಭಿವೃದ್ಧಿ ಉಪಕ್ರಮಗಳನ್ನು ಪರಿಶೀಲಿಸಿದರು.

ಜೂನ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ನಾಯಕರನ್ನು ದೆಹಲಿಯ ತಮ್ಮ ನಿವಾಸದಲ್ಲಿ ಸಭೆಗೆ ಆಹ್ವಾನಿಸಿದರು. ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ನಾಯಕರು ಒತ್ತಾಯಿಸಿದರು.

ಇದನ್ನೂ ಓದಿ: 100 ಕೋಟಿ ಕೊವಿಡ್ ಲಸಿಕೆ ನೀಡಿಕೆ ಪೂರ್ಣ; ಉದ್ಯಮಶೀಲತೆ, ಭಾರತೀಯ ವಿಜ್ಞಾನದ ಸಾಧನೆಗೆ ಸಾಕ್ಷಿ: ಪ್ರಧಾನಿ ಮೋದಿ ಸಂತಸ