ಸುನೀತಾ ಕೇಜ್ರಿವಾಲ್ ಸಿಎಂ ಆಗಲು ರಾಬ್ರಿ ದೇವಿಯ ಹಾದಿ ಹಿಡಿದಿದ್ದಾರೆ: ಅನುರಾಗ್ ಠಾಕೂರ್
ದೆಹಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಅನುರಾಗ್ ಠಾಕೂರ್, “ಅರವಿಂದ್ ಕೇಜ್ರಿವಾಲ್ ನೈತಿಕತೆಯ ಬಗ್ಗೆ ಮಾತನಾಡುತ್ತಿದ್ದರು. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ತಾನು ರಾಜಕೀಯಕ್ಕೆ ಹೋಗುವುದಿಲ್ಲ ಮತ್ತು ಭ್ರಷ್ಟಾಚಾರದ ವಿರುದ್ಧ ತನ್ನ ಹೋರಾಟ ಎಂದು ಹೇಳುತ್ತಿದ್ದರು. ಇಂದು ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದ ಸುಳಿಯಲ್ಲಿ ಮುಳುಗಿರುವಂತೆ ಕಾಣುತ್ತಿದೆ ಎಂದಿದ್ದಾರೆ.
ದೆಹಲಿ ಮಾರ್ಚ್ 27: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಪತ್ನಿ ಸುನಿತಾ (Sunita Kejriwal) ಅವರು ತಮ್ಮ ಪತಿಯ ಬಂಧನದ ನಂತರ ಎರಡು ಬಾರಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಕ್ಕಾಗಿ ಬಿಜೆಪಿ ನಾಯಕ, ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಬುಧವಾರ ಟೀಕಿಸಿದ್ದಾರೆ. ಜಮ್ಮುವಿನಲ್ಲಿ ಮಾತನಾಡಿದ ಠಾಕೂರ್, ಸುನಿತಾ ಅವರ ನಡೆಯನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಡೆಯನ್ನು ಹೋಲಿಸಿದ್ದಾರೆ. ಮೇವು ಹಗರಣದಲ್ಲಿ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರನ್ನು ಬಂಧಿಸಿದಾಗ, ಅವರ ಪತ್ನಿ ರಾಬ್ರಿ ದೇವಿ ಅವರು ಘೋಷಣೆಗಳನ್ನು ಮಾಡಲು ಪ್ರಾರಂಭಿಸಿದರು ಮತ್ತು ಕ್ರಮೇಣ ಬಿಹಾರದ ಮುಖ್ಯಮಂತ್ರಿಯಾದರು. ಪತಿ ಬಂಧನದ ನಂತರ ಹೆಚ್ಚು ಸಾರ್ವಜನಿಕ ವ್ಯಕ್ತಿತ್ವವನ್ನು ಪಡೆದುಕೊಂಡಿರುವ ಅರವಿಂದ್ ಅವರ ಪತ್ನಿ ಸುನೀತಾ ಅವರು ದೆಹಲಿಯ ಮುಖ್ಯಮಂತ್ರಿಯಾಗಲು ಅದೇ ಮಾರ್ಗವನ್ನು ಅನುಸರಿಸುತ್ತಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ.
ದೆಹಲಿ ಸಿಎಂ ಮತ್ತು ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯವು ಗುರುವಾರ (ಮಾರ್ಚ್ 21) ಬಂಧಿಸಿದ್ದು, ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ (ಮಾರ್ಚ್ 21) ಬಂಧಿಸಲಾಗಿದೆ.
ಅನುರಾಗ್ ಠಾಕೂರ್ ವಾಗ್ದಾಳಿ
अनैतिक, अराजक, कट्टर बेईमान शराब घोटाले के किंगपिन अरविंद केजरीवाल जेल में हैं, मगर क्या…
सोनिया गांधी की गिरफ़्तारी की माँग करने करने वाले केजरीवाल पर कांग्रेस ने अब अपना ज़मीर बेच दिया है?
कांग्रेस की ऐसी क्या मजबूरी है कि केजरीवाल के भ्रष्टाचार के साथ खड़ा होना ज़रूरी है? pic.twitter.com/9m0wYyz3sQ
— Anurag Thakur (मोदी का परिवार) (@ianuragthakur) March 27, 2024
ದೆಹಲಿ ಸಿಎಂ ಅವರನ್ನು ಇಡಿ ಬಂಧಿಸಿದ ನಂತರ ಸುನೀತಾ ಎರಡು ವಿಡಿಯೊ ಸಂದೇಶಗಳನ್ನು ಹಾಕಿದ್ದಾರೆ. ತನ್ನ ಪತಿ ಹಲವಾರು ಸಂದೇಶಗಳನ್ನು ನೀಡಿದ ಕುರ್ಚಿಯಲ್ಲಿ ಕುಳಿತ ಸುನೀತಾ ತನ್ನ ಪತಿಯನ್ನು ಸಮರ್ಥಿಸಿಕೊಂಡಿದ್ದು, ಕೇಜ್ರಿವಾಲ್ ಅವರ ಸಂದೇಶಗಳನ್ನು ಓದಿದ್ದಾರೆ. ಕೇಜ್ರಿವಾಲ್ ರಾಜೀನಾಮೆ ನೀಡುವಂತೆ ಒತ್ತಡ ಹೆಚ್ಚಾದಂತೆ ದೆಹಲಿ ಸರ್ಕಾರದ ಮುಖ್ಯಸ್ಥರಾಗಿ ಅರವಿಂದ್ ಅವರ ಸ್ಥಾನವನ್ನು ಸುನಿತಾ ಪಡೆದುಕೊಳ್ಳುತ್ತಾರೆ ಎಂಬ ಊಹಾಪೋಹವೂ ಹರಿದಾಡುತ್ತಿದೆ.
ಅರವಿಂದ್ ಕೇಜ್ರಿವಾಲ್ ಅವರು ಭಾರತೀಯ ಇತಿಹಾಸದಲ್ಲಿ ಬಂಧನಕ್ಕೊಳಗಾದ ಏಕೈಕ ಹಾಲಿ ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿರುವ ಕೇಜ್ರಿವಾಲ್ ಜೈಲಿನಿಂದ ದೆಹಲಿ ಸರ್ಕಾರ ನಡೆಸುತ್ತಿದ್ದಾರೆ.
ಇದನ್ನು ಟೀಕಿಸಿದ ಠಾಕೂರ್, “ಅವರು ತಮ್ಮ ಸಿಎಂ ಸ್ಥಾನವನ್ನು ತುಂಬಾ ಇಷ್ಟಪಡುತ್ತಾರೆ, ಅವರು ಎಂದಿಗೂ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳುತ್ತಿದ್ದವರು ಜೈಲಿನಲ್ಲಿದ್ದರೂ ಅದನ್ನು ಬಿಡುತ್ತಿಲ್ಲ ಎಂದಿದ್ದಾರೆ. ದೆಹಲಿ ಮುಖ್ಯಮಂತ್ರಿ ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆ ಎಂದು ಆರೋಪಿಸಿದ ಠಾಕೂರ್, “ದೊಡ್ಡ ಕಾರು, ದೊಡ್ಡ ಬಂಗಲೆ ಮತ್ತು ಸೆಕ್ಯೂರಿಟಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದ ವ್ಯಕ್ತಿ ದೊಡ್ಡ ಬಂಗಲೆಯನ್ನು ನಿರ್ಮಿಸಿ ಅದರಲ್ಲಿ ಕೋಟಿಗಟ್ಟಲೆ ಕಮಿಷನ್ ಪಡೆದಿದ್ದಾರೆ. ಎರಡು ರಾಜ್ಯಗಳು ಮತ್ತು ಒಂದಲ್ಲ ಹಲವಾರು ಐಷಾರಾಮಿ ಕಾರುಗಳನ್ನು ತೆಗೆದುಕೊಂಡರು. ಕಾಂಗ್ರೆಸ್ ಮತ್ತು ದೆಹಲಿಯಲ್ಲಿ ಅದರ ಮಾಜಿ ಪ್ರತಿಸ್ಪರ್ಧಿಯೊಂದಿಗೆ ಎಎಪಿ ಮುಖ್ಯಸ್ಥರು ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಠಾಕೂರ್ ವ್ಯಂಗ್ಯವಾಡಿದ್ದಾರೆ.
“ಸತ್ಯವನ್ನು ಮುಂದಕ್ಕೆ ತರಲು ಅವರು (ಎಎಪಿ) ಸೋನಿಯಾ ಗಾಂಧಿಯನ್ನು (ಮಾಜಿ ಕಾಂಗ್ರೆಸ್ ಮುಖ್ಯಸ್ಥೆ) ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತಿದ್ದರು. ಕಾಂಗ್ರೆಸ್ ತನ್ನ ಆತ್ಮಸಾಕ್ಷಿಯನ್ನು ಮಾರಿಕೊಂಡು ಮತ್ತೊಂದು ಭ್ರಷ್ಟ ಪಕ್ಷವಾದ ಆಮ್ ಆದ್ಮಿ ಪಕ್ಷದ ಜೊತೆ ಕೈ ಜೋಡಿಸಿದೆಯೇ? ಭ್ರಷ್ಟ ಆಮ್ ಆದ್ಮಿ ಪಕ್ಷದ ಜೊತೆ ನಿಲ್ಲಲು ಕಾಂಗ್ರೆಸ್‌ಗೆ ಏನು ಬಲ ಬಂತು? ನಿನ್ನೆಯವರೆಗೂ ಮದ್ಯ ಹಗರಣದ ಅಂಕಿ-ಅಂಶ ನೀಡುತ್ತಿದ್ದ ಕಾಂಗ್ರೆಸ್ ನಾಯಕರಿಗೆ ಕೇಸು ಹಾಕುವ ಬಗ್ಗೆ ಮಾತನಾಡುವಂತೆ ಕೇಳಿದ್ದೆ. ಆದರೆ ಇಂದು ದೇಶದ ಭ್ರಷ್ಟಾಚಾರದ ಎಲ್ಲ ದಾಖಲೆಗಳನ್ನು ಮುರಿದವರಿಗಾಗಿ ರ್ಯಾಲಿ ನಡೆಸುವುದಾಗಿ ಅವರು ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ರಿಲೀಫ್ ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ; ಏಪ್ರಿಲ್ 3ರಂದು ಮುಂದಿನ ವಿಚಾರಣೆ
ಎಎಪಿಯ ನಿಜವಾದ ಮುಖವನ್ನು ಜನರ ಮುಂದೆ “ಭ್ರಷ್ಟ, ಅನೈತಿಕ ಮತ್ತು ಅರಾಜಕತೆ” ಎಂದು ಬಹಿರಂಗಪಡಿಸಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.
ದೆಹಲಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಠಾಕೂರ್, “ಅರವಿಂದ್ ಕೇಜ್ರಿವಾಲ್ ನೈತಿಕತೆಯ ಬಗ್ಗೆ ಮಾತನಾಡುತ್ತಿದ್ದರು. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ತಾನು ರಾಜಕೀಯಕ್ಕೆ ಹೋಗುವುದಿಲ್ಲ ಮತ್ತು ಭ್ರಷ್ಟಾಚಾರದ ವಿರುದ್ಧ ತನ್ನ ಹೋರಾಟ ಎಂದು ಹೇಳುತ್ತಿದ್ದರು. ಇಂದು ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರದ ಸುಳಿಯಲ್ಲಿ ಮುಳುಗಿರುವಂತೆ ಕಾಣುತ್ತಿದೆ. ಎಎಪಿಯ ಸಂಸದರು, ಆರೋಗ್ಯ ಸಚಿವರು, ಉಪ ಮುಖ್ಯಮಂತ್ರಿ, ಶಿಕ್ಷಣ ಸಚಿವರು ಮತ್ತು ಅವರ ಎಂಎಲ್‌ಸಿ, ಎಲ್ಲರೂ ಜೈಲಿನಲ್ಲಿದ್ದಾರೆ. ಅವರ ಮುಖ್ಯಮಂತ್ರಿ ಮತ್ತು ಮದ್ಯ ಹಗರಣದ ಕಿಂಗ್‌ಪಿನ್, ‘ಕಟ್ಟರ್ ಬೇಇಮಾನ್’ ಅರವಿಂದ್ ಕೇಜ್ರಿವಾಲ್ ಕೂಡ ಜೈಲಿನಲ್ಲಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:24 pm, Wed, 27 March 24