ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಈ ವರ್ಷದ ಅತಿರೋಚಕ ಎಲೆಕ್ಷನ್ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಸಾಧಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಬಿಜೆಪಿ ಒಂದು ಕಡೆಯಾದರೆ ಸಿಎಂ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವ ಛಲಕ್ಕೆ ಬಿದ್ದಿದೆ.
ಹಾಗಾಗಿ, ಭರ್ಜರಿ ಚುನಾವಣಾ ಪ್ರಚಾರಕ್ಕೆ ಇಳಿದಿರುವ ಎರಡೂ ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ನಡುವೆ, ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಸಹ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟಿದ್ದಾರೆ.
2021ರ ನಂತರ, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಹೊಸ ಪಾರ್ಟಿ ಕಚೇರಿ ದೊರೆಯಲಿದೆ. ಅದು ಬೇರೆ ಯಾವುದೂ ಅಲ್ಲ, ಅಲಿಪುರ್ ಸೆಂಟ್ರಲ್ ಜೈಲ್ ಎಂದು ಸಚಿವ ಸುಪ್ರಿಯೊ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಎಲ್ಲಾ ತೃಣಮೂಲ ಕಾಂಗ್ರೆಸ್ನ ಸದಸ್ಯರು ಅಲ್ಲೇ ವಾಸವಿರಲಿದ್ದಾರೆ ಎಂದು ಸಹ ಟಾಂಗ್ ಕೊಟ್ಟಿದ್ದಾರೆ. ಪುರ್ಬ ಮೇದಿನಿಪುರ್ನಲ್ಲಿ ಭಾಷಣ ಮಾಡುವ ವೇಳೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಇದನ್ನು ಹೇಳಿದ್ದಾರೆ.
ಹಿಂದೂಗಳು ದೇಶ ವಿರೋಧಿಯಾಗಲು ಸಾಧ್ಯವಿಲ್ಲ: RSS ಸರ ಸಂಘಚಾಲಕ ಮೋಹನ್ ಭಾಗವತ್