ಸೋನಿಯಾ ಗಾಂಧಿ ಅವರನ್ನು ತೆಲಂಗಾಣ ತಲ್ಲಿ ಎಂದು ಬಿಂಬಿಸಿದ್ದಕ್ಕೆ ಕಿಶನ್ ರೆಡ್ಡಿ ಆಕ್ಷೇಪ

|

Updated on: Sep 18, 2023 | 6:06 PM

ತೆಲಂಗಾಣದಲ್ಲಿ ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು 'ಭಾರತ ಮಾತೆ' ಎಂದು ಬಿಂಬಿಸುವ ಪೋಸ್ಟರ್‌ಗಳ ವಿರುದ್ಧ ಬಿಜೆಪಿ  ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ನಾಯಕತ್ವವನ್ನು ಟೀಕಿಸಿದ ಬಿಜೆಪಿ,  ಅವರು ರಾಷ್ಟ್ರ ಮತ್ತು ಅದರ ಜನರಿಗಿಂತ 'ಪರಿವಾರವಾದ' (ವಂಶದ ರಾಜಕೀಯ) ಆದ್ಯತೆ ಕೊಡುತ್ತಿದ್ದಾರೆ ಎಂದಿದೆ.

ಸೋನಿಯಾ ಗಾಂಧಿ ಅವರನ್ನು ತೆಲಂಗಾಣ ತಲ್ಲಿ ಎಂದು ಬಿಂಬಿಸಿದ್ದಕ್ಕೆ ಕಿಶನ್ ರೆಡ್ಡಿ ಆಕ್ಷೇಪ
ಜಿ ಕಿಶನ್ ರೆಡ್ಡಿ
Follow us on

ದೆಹಲಿ ಸೆಪ್ಟೆಂಬರ್ 18: ಸೆಪ್ಟೆಂಬರ್ 17 ರಂದು ಹೈದರಾಬಾದ್ ಹೊರವಲಯದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸಭೆ ಸಂದರ್ಭದಲ್ಲಿ ವಿವಿಧ ಹೋರ್ಡಿಂಗ್‌ಗಳಲ್ಲಿ ಸೋನಿಯಾ ಗಾಂಧಿಯನ್ನು (Sonia Gandhi) ತೆಲಂಗಾಣ ತಲ್ಲಿ (ತೆಲಂಗಾಣದ ತಾಯಿ) ಎಂದು ಬಿಂಬಿಸಿದ್ದಕ್ಕೆ ಬಗ್ಗೆ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ (G Kishan Reddy) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸಚಿವರು ಕಾಂಗ್ರೆಸ್ ನೇತೃತ್ವದ ಮೈತ್ರಿ ಮತ್ತು ಸನಾತನ ಧರ್ಮದ ಬಗ್ಗೆ ಅವರ ಅಭಿಪ್ರಾಯಗಳನ್ನು ಪ್ರಸ್ತಾಪಿಸಿದ್ದು, ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಮತ್ತು ವಿಸ್ತರಣೆಯ ಮೂಲಕ ಅನುಯಾಯಿಗಳನ್ನು ತೊಡೆದುಹಾಕಲು ಕಾಂಗ್ರೆಸ್ ಹೇಗೆ ಸಂಕಲ್ಪ ಮಾಡಿದೆ ಎಂಬುದರ ಕುರಿತು ಮಾತನಾಡಿದರು.

ಈ ಕುರಿತು ಟ್ವೀಟ್ ಮಾಡಿರುವ ಸಚಿವರು, “ಭಾರತದಾದ್ಯಂತ ಶಕ್ತಿ ಸ್ತ್ರೀ ರೂಪ ಮತ್ತು ಮಾತೃ ದೇವತೆಯ ವಿವಿಧ ಅಭಿವ್ಯಕ್ತಿಗಳನ್ನು ಸನಾತನ ಧರ್ಮದಲ್ಲಿ ಪೂಜಿಸಲಾಗುತ್ತದೆ. ತೆಲಂಗಾಣದ ಪ್ರತಿಯೊಂದು ಗ್ರಾಮವು ಗ್ರಾಮ ದೇವತೆಯನ್ನು ಹೊಂದಿದ್ದು, ಗ್ರಾಮವನ್ನು ರಕ್ಷಿಸುವ ಮತ್ತು ಜನರಿಗೆ ಶಕ್ತಿಯನ್ನು ನೀಡುವ ದೇವತೆಯಾಗಿದೆ. ಗ್ರಾಮದ ಜನರು ನಿತ್ಯವೂ ದೇವರ ಆಶೀರ್ವಾದ ಪಡೆಯುತ್ತಾರೆ.


ಭ್ರಷ್ಟ ಕಾಂಗ್ರೆಸ್ ನಾಯಕಿಯನ್ನು ತೆಲಂಗಾಣ ತಲ್ಲಿ ಎಂದು ಬಿಂಬಿಸುವ ಮೂಲಕ ಕಾಂಗ್ರೆಸ್ ಪಕ್ಷವು ಒಂದು ಕುಟುಂಬಕ್ಕಾಗಿ ಇಂತಹ ಅಸಭ್ಯ ವರ್ತನೆಯೊಂದಿಗೆ ಸನಾತನ ಧರ್ಮವನ್ನು ಅವಮಾನಿಸುತ್ತಿರುವುದು ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.

ತೆಲಂಗಾಣದಲ್ಲಿ ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ‘ಭಾರತ ಮಾತೆ’ ಎಂದು ಬಿಂಬಿಸುವ ಪೋಸ್ಟರ್‌ಗಳ ವಿರುದ್ಧ ಬಿಜೆಪಿ  ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ನಾಯಕತ್ವವನ್ನು ಟೀಕಿಸಿದ ಬಿಜೆಪಿ,  ಅವರು ರಾಷ್ಟ್ರ ಮತ್ತು ಅದರ ಜನರಿಗಿಂತ ‘ಪರಿವಾರವಾದ’ (ವಂಶದ ರಾಜಕೀಯ) ಆದ್ಯತೆ ಕೊಡುತ್ತಿದ್ದಾರೆ ಎಂದಿದೆ.


ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ತಯಾರಿಗಾಗಿ ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮೊದಲ ಸಭೆಯ ಹೊತ್ತಲ್ಲಿ ಸೋನಿಯಾ ಗಾಂಧಿಯನ್ನು ಭಾರತ ಮಾತೆ ಎಂದು ತೋರಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿದೆ. ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಉನ್ನತ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ಚಿತ್ರಗಳೂ ಪೋಸ್ಟರ್‌ಗಳಲ್ಲಿ ಕಾಣಿಸಿಕೊಂಡವು.

ಇದನ್ನೂ ಓದಿ:  ಪ್ರಧಾನಿ ಮೋದಿಯವರ ಮುಂದಿನ ಜನ್ಮದಿನಕ್ಕೆ ಇನ್ನೂ ದೊಡ್ಡ ಕೊಡುಗೆ ನೀಡುತ್ತೇವೆ: ಫಾಕ್ಸ್​ಕಾನ್ ಭರವಸೆ

ಕಾಂಗ್ರೆಸ್ ನ್ನು ಟೀಕಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಅವರು ನಿರಂತರವಾಗಿ ಭಾರತ ಮಾತೆಯನ್ನು ಅಗೌರವಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು. ಆರಾಧನಾ ಮಿಶ್ರಾ ಅವರಂತಹ ಕಾಂಗ್ರೆಸ್ ನಾಯಕರು ‘ಭಾರತ್ ಮಾತಾ ಕಿ ಜೈ’ ಹೇಳುವುದು ಪಕ್ಷದ ಶಿಸ್ತಿಗೆ ವಿರುದ್ಧವಾಗಿದೆ ಎಂದು ಸೂಚಿಸಿದ ಹಿಂದಿನ ನಿದರ್ಶನಗಳನ್ನು ಅವರು ಎತ್ತಿ ತೋರಿಸಿ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಬಿ.ಡಿ.ಕಲ್ಲಾ ಅವರು “ಭಾರತ್ ಮಾತಾ ಕೀ ಜೈ” ಬದಲಿಗೆ “ಸೋನಿಯಾ ಮಾತಾ ಕೀ ಜೈ” ಎಂಬ ಪದವನ್ನು ಬಳಸಿದ್ದಾರೆ. ಕಾಂಗ್ರೆಸ್ ಪಕ್ಷದ ಇತ್ತೀಚಿನ ನಡೆಯನ್ನು ನಾಚಿಕೆಗೇಡಿನ ಸಂಗತಿ ಎಂದು ಪೂನಾವಾಲಾ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ