ಭಾರತದ ಮೊತ್ತ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಅನಾವರಣಗೊಳಿಸಿದ ನಿತಿನ್ ಗಡ್ಕರಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 18, 2022 | 6:52 PM

ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ ಈ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಹವಾನಿಯಂತ್ರಿತ ಬಸ್‌ನ ಮೊದಲ ಬಸ್ ಅನ್ನು ಪರಿಚಯಿಸಿದೆ.

ಭಾರತದ ಮೊತ್ತ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್ ಅನಾವರಣಗೊಳಿಸಿದ ನಿತಿನ್ ಗಡ್ಕರಿ
ಡಬಲ್ ಡೆಕ್ಕರ್ ಬಸ್ ಅನಾವರಣ
Follow us on

ಮುಂಬೈ: ದೇಶದ ಮೊದಲ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಹವಾನಿಯಂತ್ರಿತ ಬಸ್ ಅನ್ನು ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಗುರುವಾರ ಮುಂಬೈನಲ್ಲಿ ಅನಾವರಣಗೊಳಿಸಿದರು. ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (BEST) ಈ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಹವಾನಿಯಂತ್ರಿತ ಬಸ್‌ನ ಮೊದಲ ಬಸ್ ಅನ್ನು ಪರಿಚಯಿಸಿದೆ. ಇನ್ನುಳಿದ ಬಸ್ ಗಳು 2023 ರ ಮಧ್ಯಭಾಗದಲ್ಲಿ ರಸ್ತೆಗಿಳಿಯಲಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಬಸ್ ಗೆ ಚಾಲನೆ ನೀಡಿರುವುದರ ಬಗ್ಗೆ ಟ್ವೀಟ್ ಮಾಡಿದ ಗಡ್ಕರಿ, ಸುಸ್ಥಿರ ಕ್ರಾಂತಿಯ ಆರಂಭ, ಇಂದು ಮುಂಬೈನಲ್ಲಿ ಅಶೋಕ್ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್​​ಗೆ ಚಾಲನೆ ನೀಡಿದ್ದು ನನಗೆ ಅಪಾರ ಸಂತೋಷವನ್ನು ನೀಡಿದೆ ಎಂದು ಹೇಳಿದ್ದಾರೆ. ಈ ಕಾರ್ಯವು ಆತ್ಮನಿರ್ಭರ್ ಭಾರತ್‌ನ ದೃಷ್ಟಿಯನ್ನು ಎತ್ತಿಹಿಡಿಯುತ್ತದೆ ಮತ್ತು ಸುಸ್ಥಿರ ಮತ್ತು ಕಡಿಮೆ ವೆಚ್ಚದ ಪರಿಹಾರಗಳನ್ನು ನೀಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಸುಸ್ಥಿರ ಸಾರಿಗೆ ಕ್ಷೇತ್ರಕ್ಕೆ ಕ್ರಿಯಾತ್ಮಕ ಉತ್ತೇಜನವನ್ನು ನೀಡುವುದು, ಅಂತಹ ಉಪಕ್ರಮಗಳು ಕಡಿಮೆ ವೆಚ್ಚದ ಪರಿಹಾರಗಳಾಗಿವೆ. ತೈಲ ಆಮದುಗಳನ್ನು ಕಡಿತಗೊಳಿಸುವುದರ ಮೂಲಕ ಮತ್ತು ಸ್ಥಳೀಯ ಸಂಪನ್ಮೂಲಗಳು ಮತ್ತು ಸೇವೆಗಳನ್ನು ಉತ್ತೇಜಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ದೃಷ್ಟಿಕೋನವನ್ನು ಸಾಧಿಸುತ್ತವೆ ಎಂದು ಗಡ್ಕರಿ ಹೇಳಿದ್ದಾರೆ.


ಈ ಎಲೆಕ್ಟ್ರಿಕಲ್ ಬಸ್ ಗಳನ್ನು ಸ್ವಿಚ್ ಮೊಬಿಲಿಟಿ ಮತ್ತು ಅಶೋಕ್ ಲೇಲ್ಯಾಂಡ್‌ನ ಎಲೆಕ್ಟ್ರಿಕ್ ವೆಹಿಕಲ್ ವಿಭಾಗ ನಿರ್ಮಾಣ ಮಾಡಿದೆ. ವರದಿಯ ಪ್ರಕಾರ ಈ ಬಸ್ ನಲ್ಲಿ ಎರಡು ಪಟ್ಟು ಹೆಚ್ಚು ಪ್ರಯಾಣಿಕರು ಪ್ರಯಾಣಿಸಬಹುದು.

ಹಂತ ಹಂತವಾಗಿ 900 ಎಲೆಕ್ಟ್ರಿಕ್ ಬಸ್‌ಗಳ ಪೂರೈಕೆಗಾಗಿ ಕಂಪನಿಯು ಬೆಸ್ಟ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇವುಗಳಲ್ಲಿ, 50 ಪ್ರತಿಶತದಷ್ಟು ಬಸ್‌ಗಳನ್ನು ಮಾರ್ಚ್ 2023 ರೊಳಗೆ ಮತ್ತು ಉಳಿದ ಶೇಕಡಾ 50 ರಷ್ಟು ನಂತರ ವಿತರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

Published On - 6:47 pm, Thu, 18 August 22