ಕಾಂಗ್ರೆಸ್​ನ​ ಹಗರಣ, ಭ್ರಷ್ಟಾಚಾರದ ವಿರುದ್ಧ ಚಕ್ರವ್ಯೂಹ ರಚಿಸಲಾಗಿದೆ: ಪ್ರಲ್ಹಾದ್ ಜೋಶಿ

|

Updated on: Jul 30, 2024 | 12:30 PM

ವಿರೋಧ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿಯ ಚಕ್ರವ್ಯೂಹ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಚಕ್ರವ್ಯೂಹ ರಚನೆಯಾಗುತ್ತಿದೆ ಆದರೆ ಕಾಂಗ್ರೆಸ್​ ಹಗರಣಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಎಂದು ಹೇಳಿದ್ದಾರೆ. ಎಎನ್​ಐ ಜತೆ ಮಾತನಾಡಿರುವ ಜೋಶಿ, ಇದನ್ನು ಡ್ರಾಮಾಬಾಜಿ ಎಂದು ಕರೆದಿದ್ದಾರೆ, 60 ವರ್ಷಗಳ ಮಾಡಿರುವ ಭ್ರಷ್ಟಾಚಾರ ಮತ್ತು ಹಗರಣವನ್ನು ಮುಚ್ಚಿಹಾಗಲು ಇದೆಲ್ಲವನ್ನೂ ಹೇಳುತ್ತಿದ್ದಾರೆ.

ಕಾಂಗ್ರೆಸ್​ನ​ ಹಗರಣ, ಭ್ರಷ್ಟಾಚಾರದ ವಿರುದ್ಧ ಚಕ್ರವ್ಯೂಹ ರಚಿಸಲಾಗಿದೆ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
Follow us on

ಲೋಕಸಭೆಯ ವಿರೋಧಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಅವರ ಚಕ್ರವ್ಯೂಹ(Chakravyuh) ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಕ್ರವ್ಯೂಹ ರಚನೆಯಾಗುತ್ತಿದೆ ಆದರೆ ಕಾಂಗ್ರೆಸ್​ ಹಗರಣಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಎಂದು ಹೇಳಿದ್ದಾರೆ. ಎಎನ್​ಐ ಜತೆ ಮಾತನಾಡಿರುವ ಜೋಶಿ, ಇದನ್ನು ಡ್ರಾಮಾಬಾಜಿ ಎಂದು ಕರೆದಿದ್ದಾರೆ, 60 ವರ್ಷಗಳ ಮಾಡಿರುವ ಭ್ರಷ್ಟಾಚಾರ ಮತ್ತು ಹಗರಣವನ್ನು ಮುಚ್ಚಿಹಾಗಲು ಇದೆಲ್ಲವನ್ನೂ ಹೇಳುತ್ತಿದ್ದಾರೆ.

ರಾಹುಲ್ ಗಾಂಧಿ ಹಾಗೂ ಅವರ ತಾಯಿ ರಿಮೋಟ್ ಕಂಟ್ರೋಲ್ ಮೂಲಕ ಸರ್ಕಾರವನ್ನು ಏಕೆ ಹರಿದುಹಾಕಿದರು, ಈಗ ಏಕೆ ನಾಟಕವಾಡುತ್ತಿದ್ದಾರೆ. ತಮ್ಮ ಸರ್ಕಾರದಲ್ಲಿ ಮಾಡಿದ ಹಗರಣವನ್ನು ಮುಚ್ಚಿಹಾಕುವ ಪ್ರಯತ್ನ ಇದು ಎಂದಿದ್ದಾರೆ.

ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ದೇಶವು ಈಗ ಕಮಲದ ಚಕ್ರವ್ಯೂಹದಲ್ಲಿ ಸಿಲುಕಿದೆ, 21ನೇ ಶತಮಾನದಲ್ಲಿ ಹೊಸ ಚಕ್ರವ್ಯೂಹವನ್ನು ರಚಿಸಲಾಗಿದೆ ಎಂದು ದೂರಿದ್ದರು.

ಮತ್ತಷ್ಟು ಓದಿ: 6 ಜನ ರಚಿಸಿರುವ ‘ಚಕ್ರವ್ಯೂಹ’ದಲ್ಲಿ ಆಧುನಿಕ ಭಾರತ ಸಿಲುಕಿದೆ; ಲೋಕಸಭೆಯಲ್ಲಿ ರಾಹುಲ್ ಗಾಂಧಿ ವಾಗ್ದಾಳಿ

ಅಭಿಮನ್ಯುವಿಗೆ ಮಾಡಿದ್ದನ್ನು ಇಂದು ಇಡೀ ಭಾರತ- ಯುವಜನರು, ರೈತರು, ಮಹಿಳೆಯರು, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೂ ಮಾಡಲಾಗುತ್ತಿದೆ. ಅಂದು ದ್ರೋಣಾಚಾರ್ಯ, ಕರ್ಣ, ಕೃಪಾಚಾರ್ಯ, ಕೃತವರ್ಮ, ಅಶ್ವತ್ಥಾಮ ಮತ್ತು ಶಕುನಿ ಇದ್ದಂತೆ, ಇಂದು ಕೂಡ ಚಕ್ರವ್ಯೂಹದ ಕೇಂದ್ರದಲ್ಲಿ ಆರು ವ್ಯಕ್ತಿಗಳಿದ್ದಾರೆ- ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಎಂದು ಹೇಳಿದರು.

ಇದಕ್ಕೆ ಸ್ಪೀಕರ್ ಓಂ ಬಿರ್ಲಾ ಅವರ ಮಧ್ಯಪ್ರವೇಶದ ನಂತರ, ನೀವು ಬಯಸಿದರೆ, ನಾನು ಅಜಿತ್ ದೋವಲ್, ಅಂಬಾನಿ ಮತ್ತು ಅದಾನಿ ಅವರ ಹೆಸರನ್ನು ಬಿಟ್ಟುಬಿಡುತ್ತೇನೆ ಮತ್ತು ಕೇವಲ 3 ಹೆಸರುಗಳನ್ನು ತೆಗೆದುಕೊಳ್ಳುತ್ತೇನೆ” ಎಂದು ರಾಹುಲ್ ಗಾಂಧಿ ಹೇಳಿದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ