ಕಾಂಗ್ರೆಸ್ ಸುಳ್ಳಿನ ರಾಜಕೀಯ ಮಾಡುತ್ತಿದೆ, ಭ್ರಷ್ಟಾಚಾರ ಅವರ ಡಿಎನ್​​ಎಯಲ್ಲೇ ಇದೆ: ರಾಜೀವ್ ಚಂದ್ರಶೇಖರ್

|

Updated on: Oct 14, 2023 | 1:53 PM

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಸುಳ್ಳಿನ ರಾಜಕೀಯ ಮಾಡುತ್ತಿದೆ. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲೇ ಇದೆ. ಅವರಿಗೆ ದೇಶದ ಭವಿಷ್ಯ, ಆರ್ಥಿಕತೆ, ಉದ್ಯೋಗದ ಬಗ್ಗೆಯಾಗಲೀ ದೇಶದ ಬಗ್ಗೆಯಾಗಲೀ ಯಾವುದೇ ವಿಷನ್ ಇಲ್ಲ. ಅವರದ್ದೇನಿದ್ದರೂ ಫೇಕ್ ಗ್ಯಾರಂಟಿ, ಸುಳ್ಳು ವಾಗ್ದಾನ ಮತ್ತು ಭ್ರಷ್ಟಾಚಾರ. ಕಾಂಗ್ರೆಸ್ ಪಕ್ಷವೀಗ ತೆಲಂಗಾಣ  ಮತ್ತು ರಾಜಸ್ಥಾನದಲ್ಲಿಯೂ ಕರ್ನಾಟಕದಲ್ಲಿ ಮಾಡಿದಂತೆಯೇ ರಾಜಕೀಯ ಮಾಡಲು ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸುಳ್ಳಿನ ರಾಜಕೀಯ ಮಾಡುತ್ತಿದೆ, ಭ್ರಷ್ಟಾಚಾರ ಅವರ ಡಿಎನ್​​ಎಯಲ್ಲೇ ಇದೆ: ರಾಜೀವ್ ಚಂದ್ರಶೇಖರ್
ರಾಜೀವ್ ಚಂದ್ರಶೇಖರ್
Follow us on

ದೆಹಲಿ ಅಕ್ಟೋಬರ್ 14:  ಶನಿವಾರ ದೆಹಲಿಯಲ್ಲಿರುವ ಬಿಜೆಪಿ (BJP) ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar),  ಕರ್ನಾಟಕದಲ್ಲಿನ ಕಾಂಗ್ರೆಸ್ (Congress) ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸುಳ್ಳಿನ ರಾಜಕೀಯ ಮಾಡುತ್ತಿದೆ. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲೇ ಇದೆ. ಅವರಿಗೆ ದೇಶದ ಭವಿಷ್ಯ, ಆರ್ಥಿಕತೆ, ಉದ್ಯೋಗದ ಬಗ್ಗೆಯಾಗಲೀ ದೇಶದ ಬಗ್ಗೆಯಾಗಲೀ ಯಾವುದೇ ವಿಷನ್ ಇಲ್ಲ. ಅವರದ್ದೇನಿದ್ದರೂ ಫೇಕ್ ಗ್ಯಾರಂಟಿ, ಸುಳ್ಳು ವಾಗ್ದಾನ ಮತ್ತು ಭ್ರಷ್ಟಾಚಾರ. ಕಾಂಗ್ರೆಸ್ ಪಕ್ಷವೀಗ ತೆಲಂಗಾಣ  ಮತ್ತು ರಾಜಸ್ಥಾನದಲ್ಲಿಯೂ ಕರ್ನಾಟಕದಲ್ಲಿ ಮಾಡಿದಂತೆಯೇ ರಾಜಕೀಯ ಮಾಡಲು ನೋಡುತ್ತಿದ್ದಾರೆ. ಕಾಂಗ್ರೆಸ ಪಕ್ಷದ್ದು ಸುಳ್ಳಿನ ರಾಜಕೀಯ ಬಿಟ್ಟರೆ ಬೇರೇನೂ ಇಲ್ಲ.

ಕರ್ನಾಟಕದಲ್ಲಿ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಐಟಿ ದಾಳಿ ವೇಳೆ 42 ಕೋಟಿ ಹಣ ಪತ್ತೆಯಾಗಿದೆ. ಅಂಬಿಕಾಪತಿ, ಹಿಂದಿನ ಬಿಜೆಪಿ ಆಡಳಿತದ ವಿರುದ್ಧ “40% ಕಮಿಷನ್” ಆರೋಪವನ್ನು ಮಾಡಿದ ಕರ್ನಾಟಕದ ಬಹು ಗುತ್ತಿಗೆದಾರರ ಸಂಘಗಳ ಪದಾಧಿಕಾರಿಯಾಗಿದ್ದಾರೆ. ಬಿಜೆಪಿ 40% ಕಮಿಷನ್ ಕೇಳುತ್ತದೆ ಎಂದು ಆರೋಪಿಸಿರುವ ಕಾಂಗ್ರೆಸ್ ತಮ್ಮ ಸುಳ್ಳು ಸುಳ್ಳೇ ನಿರೂಪಣೆ ಮೂಲಕ ಮತದಾರರನ್ನು ಹಾದಿ ತಪ್ಪಿಸಿ ಅಧಿಕ್ಕಾರಕ್ಕೇರಿದ್ದಾರೆ.

ಇದೇ ಗುತ್ತಿಗೆದಾರ ಡ್ರಾಮಾ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದಾಗ ಡಿಕೆಶಿ ಮತ್ತು ಸಿದ್ದರಾಮಯ್ಯ ಹಣ ಇಲ್ಲ ಎಂದೇ ಹೇಳಿದ್ದರು. ಅಂಬಿಕಾಪತಿಯ ಕುಟುಂಬದವರೆಲ್ಲರೂ ಕಾಂಗ್ರೆಸ್ ಪಕ್ಷದವರೇ. ಅಂಬಿಕಾಪತಿ ಮನೆಯಿಂದ 42 ಕೋಟಿ ರೂಪಾ.ಯಿ ಹೇಗೆ ಸಿಕ್ಕಿತು? 2022ರಲ್ಲಿ ಅವರು ಡ್ರಾಮಾ ಮಾಡಿದ್ದು ಎಂಬುದು ಇದರಿಂದ ಗೊತ್ತಾಗುತ್ತದೆ. ಅವರ ಹಿಂದಿನ ಉದ್ದೇಶವೂ ಈಗ ಬಯಲಾಗಿದೆ.
ಕಾಂಗ್ರೆಸ್ ಗ್ಯಾರಂಟಿ ಆಫ್ ಕರೆಪ್ಶನ್, ಅವರು ಭಾರತ್ ಜೋಡೋ ಅಲ್ಲ ಇಂಡಿಯಾ ಲೂಟೋ ಯಾತ್ರೆ ಮಾಡಬೇಕಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಟಿಎಂ ಆಗುತ್ತದೆ ಎಂದು ಬಿಜೆಪಿ ಹೇಳಿತ್ತು. ತೆಲಂಗಾಣದ ಚುನಾವಣೆಗೆ ಬೇಕಾಗಿ ಕರ್ನಾಟಕದಲ್ಲಿ ಫಂಡಿಂಗ್ ಮಾಡಲಾಗುತ್ತಿದೆ.
ಅಂಬಿಕಾಪತಿ ಒಬ್ಬರೇ ಇಲ್ಲ, ಮುಂದಿನ ದಿನಗಳಲ್ಲಿ ಇಂಥಾ ಭ್ರಷ್ಟಾಚಾರಗಳು ಹೊರಗೆ ಬರುತ್ತದೆ. ಎಲ್ಲ ಬಯಲಾಗುತ್ತದೆ.

ಈಗ ನೋಡಿ, ಮೈಸೂರ್ ದಸರಾದಲ್ಲಿ ಖ್ಯಾತ ಸರೋದ್ ವಾದಕ ಪಂಡಿತ್ ತಾರಾನಾಥ್ ಅವರಿಗೆ ಕಮಿಷನ್ ನೀಡಲು ಮುಂದಾಗಿದ್ದು ಬೆಳಕಿಗೆ ಬಂದಿವೆ. ನಾವು ಕಮಿಷನ್ ಫೀಸ್ ಹೆಚ್ಚಿಸುತ್ತೇವೆ, ಅದನ್ನು ನೀವು ನಮಗೆ ನೀಡಬೇಕು ಎಂದು ಅವರಿಗೆ ಹೇಳಲಾಗಿದೆ. ಅವರು ಅದನ್ನು ನಿರಾಕರಿಸಿದ್ದು, ದಸರಾದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: PM Modi: ಪ್ರತಿಯೊಬ್ಬರೂ ಪಾರ್ವತಿ ಕುಂಡ, ಜಗೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಬೇಕು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ಪ್ರಧಾನಿ ಮೋದಿ

ನಮ್ಮ ಸಾಂಸ್ಕೃತಿಕ ನಾಯಕರು ಕೂಡ ಕಮಿಷನ್ ಪೀಡೆ ಎದುರಿಸಬೇಕಾಗಿ ಬಂದಿದೆ. ಕಾಂಗ್ರೆಸ್ ಸರ್ಕಾರ ಎಂಥಾ ಖ್ಯಾತನಾಮರನ್ನೂ ಬಿಡುವುದಿಲ್ಲ. ಜಾರ್ಖಂಡ್ ಮತ್ತು ರಾಜಸ್ಥಾನದಲ್ಲಿಯೂ ಎನ್ ಡಿಎ ಇದೇ ರೀತಿ ಲೂಟಿ ಮಾಡುತ್ತಿದೆ. ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಅವರಿಗೆ ಇಡಿ ಸಮನ್ಸ್ ಕಳುಹಿಸಿದ್ದು, ಅದಕ್ಕೆ ತಡೆಬೇಕೆಂದು ಅವರು ಸಲ್ಲಿಸಿದ ಅರ್ಜಿಯನ್ನು ಜಾರ್ಖಂಡ್ ಹೈಕೋರ್ಟ್ ರದ್ದು ಮಾಡಿದೆ. ಸೋರೆನ್ ತನಿಖೆ ಎದುರಿಸುತ್ತಿದ್ದಾರೆ.

ರಾಜಸ್ಥಾನದಲ್ಲಿನ ಸ್ಟಾರ್ ಪರ್ಫಾರ್ಮರ್ ಅಶೋಕ್ ಗೆಹ್ಲೋಟ್ ವಿರುದ್ಧ ಪೇಪರ್ ಲೀಕ್ ಪ್ರಕರಣದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
ಕಾಂಗ್ರೆಸ್ ಗ್ಯಾರಂಟಿ ಎಂದರೆ ಗ್ಯಾರಂಟಿ ಆಫ್ ಕರಪ್ಶನ್. ಕರ್ನಾಟಕದಿಂದ ತೆಲಂಗಾಣ ಮತ್ತು ಇತರೆಡೆಗೆ ಇಂಡಿಯಾ ಲೂಟೋ ಯಾತ್ರೆ ನಡೆಯುತ್ತಿದೆ.ಕಾಂಗ್ರೆಸ್ ಪಕ್ಷದ ನಿಲುವು ಏನು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Sat, 14 October 23