ಐಟಿಗೆ ಬಿಜೆಪಿಯವರ ಮನೆ ಬಿಟ್ಟು ಬೇರೆ ಪಕ್ಷದ ಮನೆ ಕಾಣಿಸುತ್ತೆ; ಸಚಿವ ಶಿವರಾಜ ತಂಗಡಗಿ

ಬಿಜೆಪಿಯವರಿಗೆ ಮಾಡುವುದಕ್ಕೆ ಏನೂ ಕೆಲಸವಿಲ್ಲ. ಇದೇ ರೀತಿ ಮಾತನಾಡಿದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರು ಬುದ್ಧಿ ಕಲಿಸುತ್ತಾರೆ. ಈ ಐಟಿಗೆ ಬಿಜೆಪಿಯವರ ಮನೆ ಬಿಟ್ಟು ಬೇರೆ ಪಕ್ಷದ ಮನೆ ಕಾಣಿಸುತ್ತೆ. ದೆಹಲಿಯಲ್ಲಿ ಎಎಪಿ, ಆಂದ್ರದೊಳಗೆ ಚಂದ್ರಬಾಬು ನಾಯ್ಡು, ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಕಾಣಿಸುತ್ತದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಐಟಿಗೆ ಬಿಜೆಪಿಯವರ ಮನೆ ಬಿಟ್ಟು ಬೇರೆ ಪಕ್ಷದ ಮನೆ ಕಾಣಿಸುತ್ತೆ; ಸಚಿವ ಶಿವರಾಜ ತಂಗಡಗಿ
ಸಚಿವ ಶಿವರಾಜ್​ ತಂಗಡಗಿ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 13, 2023 | 8:27 PM

ಕೊಪ್ಪಳ, ಅ.13: ತೆರಿಗೆ ವಂಚನೆ ಮಾಡಿರುವವರ ಮೇಲೆ ಐಟಿ ದಾಳಿಯಾಗಲಿ. ಉದ್ಯಮಿಗಳು ಹಾಗೂ ಗುತ್ತಿಗೆದಾರರ ಮೇಲೆ ಐಟಿ ದಾಳಿಯಾದರೆ ತಪ್ಪೇನಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ (Shivaraj Tangadagi) ಹೇಳಿದರು. ಕೊಪ್ಪಳ(Koppala)ದಲ್ಲಿ ಬೆಂಗಳೂರಿನಲ್ಲಿ ಆದ ಐಟಿ ದಾಳಿ ವಿಚಾರವಾಗಿ ಮಾತನಾಡಿದ ಅವರು, ‘ಈ ಐಟಿ ಹಾಗೂ ಇಡಿಯವರಿಗೆ ಬರೀ ಕಾಂಗ್ರೆಸ್​​ನವರೇ ಏಕೆ ಕಾಣ್ತಾರೆ?, ಬಿಜೆಪಿಯವರ ಮನೆಯಲ್ಲಿ ಹಣವಿಲ್ವಾ? ಎಂದು ಪ್ರಶ್ನಿಸಿದ್ದಾರೆ.

ಐಟಿಗೆ ಬಿಜೆಪಿಯವರ ಮನೆ ಬಿಟ್ಟು ಬೇರೆ ಪಕ್ಷದ ಮನೆ ಕಾಣಿಸುತ್ತೆ

ಇನ್ನು ಪಂಚರಾಜ್ಯ ಚುನಾವಣೆಗಾಗಿ ಹಣ ಕಲೆಕ್ಷನ್ ಆಗಿದೆ ಎನ್ನುವ ಆರೋಪ ‘ಬಿಜೆಪಿಯವರಿಗೆ ಮಾಡುವುದಕ್ಕೆ ಏನೂ ಕೆಲಸವಿಲ್ಲ. ಇದೇ ರೀತಿ ಮಾತನಾಡಿದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಜನರು ಬುದ್ಧಿ ಕಲಿಸುತ್ತಾರೆ. ಈ ಐಟಿಗೆ ಬಿಜೆಪಿಯವರ ಮನೆ ಬಿಟ್ಟು ಬೇರೆ ಪಕ್ಷದ ಮನೆ ಕಾಣಿಸುತ್ತೆ. ದೆಹಲಿಯಲ್ಲಿ ಎಎಪಿ, ಆಂದ್ರದೊಳಗೆ ಚಂದ್ರಬಾಬು ನಾಯ್ಡು, ರಾಜ್ಯದಲ್ಲಿ ಕಾಂಗ್ರೆಸ್ ಮಾತ್ರ ಕಾಣಿಸುತ್ತದೆ ಎಂದರು.

ಇದನ್ನೂ ಓದಿ:Bengaluru IT Raid: ಬೆಂಗಳೂರಿನ ಫ್ಲಾಟ್​ ಒಂದರ ಮೇಲೆ ಐಟಿ ದಾಳಿ, ಮಂಚದಡಿ ಕಂತೆ ಕಂತೆ ನೋಟುಗಳು ಪತ್ತೆ

ಕಾಂಗ್ರೆಸ್ ATM ಸರ್ಕಾರ ಎನ್ನುವುದಕ್ಕೆ ದಾಖಲೆಗಳಿದ್ರೆ, ತೋರಿಸಲಿ

ಇನ್ನುಇದೇ ವೇಳೆ ಕಾಂಗ್ರೆಸ್ ATM ಸರ್ಕಾರ ಎನ್ನುವುದಕ್ಕೆ ದಾಖಲೆಗಳಿದ್ರೆ, ತೋರಿಸಲಿ. ಕೆಂಪಣ್ಣ ಅವರು ಆರೋಪ ಮಾಡಿದಾಗ ಈಗಾಗಲೇ ಅವರ ಜೊತೆ ಮಾತನಾಡಿದ್ದೆವೆ. ತಪ್ಪು ಇದ್ದರೆ ಸಲಹೆ ನೀಡಲು ಕೇಳಿದ್ದೇವೆ, ತಿದ್ದಿಕೊಳ್ಳುತ್ತೇವೆ. ದುಡ್ಡು ಸಿಕ್ಕಿದ್ದನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ. ಬಿಜೆಪಿ ಆಡಳಿತವಿದ್ದಾಗ ಏನೇನು ಆಗಿದೆ ಎಂದು ಎಲ್ಲವೂ ಗೊತ್ತಿದೆ. ನಾವು ಜನರ ಮಧ್ಯೆ, ಜನರ ಜೊತೆ ಇರುತ್ತೇವೆ. ನಮಗೆ ಯಾವುದೇ ಧರ್ಮ, ಜಾತಿ ಎನ್ನುವುದಿಲ್ಲ ಎಂದು ಹೇಳಿದರು.

ಲೋಡ್ ಶೆಡ್ಡಿಂಗ್ ಇರುವುದನ್ನು ಒಪ್ಪಿಕೊಂಡ ಸಚಿವ

ರಾಜ್ಯದಲ್ಲಿ ಸಹಜವಾಗಿ ವಿದ್ಯುತ್ ಅಭಾವವಿದೆ. ನನ್ನ ಕನಕಗಿರಿ ವಿಧಾನಸಭಾ ಕ್ಷೇತ್ರದ ರೈತರು ಕೂಡ ಪತ್ರ ಬರೆದಿದ್ದರು. ರೈತರ ಜಮೀನುಗಳಿಗೆ ಕನಿಷ್ಠ 7 ತಾಸು ವಿದ್ಯುತ್ ಅವಶ್ಯಕತೆ ಇದೆ. ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದು ನಾನು ಸರಿ‌ಪಡಿಸಿದ್ದೇನೆ. ಇನ್ನೂ ಒಂದೂವರೆ ತಿಂಗಳು ವಿದ್ಯುತ್ ನೀಡಿದ್ರೆ, ರೈತರ ಬೆಳೆ ಬರುತ್ತೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ಈಗಾಗಲೇ ತಂದಿದ್ದೇನೆ ಎಂದು ಕೊಪ್ಪಳದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್