ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್​ ಇಂಗ್ಲಿಷ್​​ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ

| Updated By: Lakshmi Hegde

Updated on: Feb 13, 2022 | 9:36 AM

ಸಂಸತ್ತಿನಲ್ಲಿ ಎದ್ದುನಿಂತ ನಿರ್ಮಲಾ ಸೀತಾರಾಮನ್​ ಹಿಂದೆಯೇ ಸಚಿವ ರಾಮದಾಸ್​ ಅಠಾವಳೆ ಕುಳಿತಿದ್ದು, ಅವರು ತಮ್ಮ ಕೈಯಿಂದ ಮೂಗು-ಬಾಯಿ ಮುಚ್ಚಿಕೊಂಡು, ಕಣ್ಣು ದೊಡ್ಡದಾಗಿ ಬಿಟ್ಟಿರುವ ಫೋಟೋವೊಂದನ್ನು ಶಶಿ ತರೂರ್​ ಟ್ವೀಟ್ ಮಾಡಿದ್ದಾರೆ.

ಟೀಕಿಸುವ ಭರದಲ್ಲಿ ತಪ್ಪು ಮಾಡಬೇಡಿ; ಶಶಿ ತರೂರ್​ ಇಂಗ್ಲಿಷ್​​ ತಿದ್ದಿದ ಕೇಂದ್ರ ಸಚಿವ ರಾಮದಾಸ್ ಅಠಾವಳೆ
ಶಶಿ ತರೂರ್ ಮತ್ತು ರಾಮದಾಸ್​ ಅಠಾವಳೆ
Follow us on

ಕಾಂಗ್ರೆಸ್ ಸಂಸದ ಶಶಿ ತರೂರ್ (Shashi Tharoor)​ ಅವರಿಗೆ ಇಂಗ್ಲಿಷ್ ಭಾಷೆ ಮೇಲೆ ಅಪಾರ ಹಿಡಿತವಿದೆ. ಹೊಸ ಶಬ್ದಗಳನ್ನು ಪರಿಚಯಿಸುತ್ತಾರೆ. ಇಂಗ್ಲಿಷ್​​ನಲ್ಲಿ ಅಗಾಧ ಪಾಂಡಿತ್ಯ ಹೊಂದಿರುವವರು ಎಂದೇ ಖ್ಯಾತರಾಗಿದ್ದಾರೆ.  ಆದರೆ ಅಂಥ ಶಶಿ ತರೂರ್​ ಕೂಡ ಇಂಗ್ಲಿಷ್​ನಲ್ಲಿ ಈಗ ತಪ್ಪು ಮಾಡಿದ್ದಾರೆ ಮತ್ತು ಕೇಂದ್ರ ಸಚಿವ ರಾಮ್​ದಾಸ್ ಅಠಾವಳೆ (Ramdas Athawale)ಅದನ್ನು ತಿದ್ದಿದ್ದಾರೆ.  ಅಷ್ಟಕ್ಕೂ ಇದೆಲ್ಲ ಆಗಿದ್ದು, ರಾಜಕೀಯ ಸಂಘರ್ಷದಲ್ಲಿ.  

ಇತ್ತೀಚೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ಮಾಡಿದ್ದರು. ಈ ವೇಳೆ ನಿರ್ಮಲಾ ಸೀತಾರಾಮನ್​ ಭಾರತದ ಆರ್ಥಿಕತೆ ಬಗ್ಗೆ ಹೇಳಿಕೆ ನೀಡುತ್ತಿದ್ದರು. ಸಂಸತ್ತಿನಲ್ಲಿ ಎದ್ದುನಿಂತ ನಿರ್ಮಲಾ ಸೀತಾರಾಮನ್​ ಹಿಂದೆಯೇ ಸಚಿವ ರಾಮದಾಸ್​ ಅಠಾವಳೆ ಕುಳಿತಿದ್ದು, ಅವರು ತಮ್ಮ ಕೈಯಿಂದ ಮೂಗು-ಬಾಯಿ ಮುಚ್ಚಿಕೊಂಡು, ಕಣ್ಣು ದೊಡ್ಡದಾಗಿ ಬಿಟ್ಟಿರುವ ಫೋಟೋವೊಂದನ್ನು ಶಶಿ ತರೂರ್​ ಟ್ವೀಟ್ ಮಾಡಿಕೊಂಡಿದ್ದು, ಅದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಮಾತುಗಳನ್ನು ಸ್ವತಃ ಅಠಾವಳೆಯವರೇ ನಂಬುತ್ತಿಲ್ಲ ಎಂದು ಕ್ಯಾಪ್ಷನ್​ ಕೊಟ್ಟಿದ್ದರು. Nearly two-hour rely to the Bydget debate. The stunned and incredulous expression on Minister Ramdas Athawale’s face says it all: even the Treasury benches can’t believe FinMin Nirmala Sitharaman’s claims about the economy and her Budget! ಎಂದು ಇಂಗ್ಲಿಷ್​​ನಲ್ಲಿ ಟ್ವೀಟ್​ ಮಾಡಿದ್ದರು. ಇದರ ಅರ್ಥ ಬಜೆಟ್​​ ಡಿಬೇಟ್​​ನಲ್ಲಿ ನಿರ್ಮಲಾ ಸೀತಾರಾಮನ್​ ಅವರು ಸುಮಾರು ಎರಡು ತಾಸುಗಳ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಅಠಾವಳೆಯವರ ಮುಖದ ಮೇಲೆ ಮೂಡಿದ ದಿಗ್ಭ್ರಮೆ ಮತ್ತು ಅಪನಂಬಿಕೆಯೆಂಬ ಭಾವ ಎಲ್ಲವನ್ನೂ ಹೇಳುತ್ತಿದೆ. ಸಂಸತ್ತಿನಲ್ಲಿ ಮುಂದೆ ಕುಳಿತುಕೊಳ್ಳುವ ಸಚಿವರೂ ಕೂಡ ನಿರ್ಮಲಾ ಸೀತಾರಾಮನ್​​ರ ಬಜೆಟ್​ ಮತ್ತು ಆರ್ಥಿಕತೆಯ ಮೇಲಿನ ಅವರ ಪ್ರತಿಪಾದನೆಯನ್ನು ನಂಬುತ್ತಿಲ್ಲ ಎಂದು ಶಶಿ ತರೂರ್​ ಹೇಳಿದ್ದಾರೆ.

ಆದರೆ ಶಶಿ ತರೂರ್​ ಟ್ವೀಟ್​​ನಲ್ಲಿ ತಪ್ಪಿದೆ ಎಂದು ರಾಮದಾಸ್ ಅಠಾವಳೆ ಹೇಳಿದ್ದಾರೆ. ಅಷ್ಟೇ ಅಲ್ಲ ಅದನ್ನು ತಿದ್ದುವ ಪ್ರಯತ್ನವನ್ನೂ ಮಾಡಿದ್ದಾರೆ. ಶಶಿ ತರೂರ್​ ಜೀ, ಅನಗತ್ಯ ಹೇಳಿಕೆಗಳು, ಪ್ರತಿಪಾದನೆಗಳನ್ನು ಮಾಡುವಾಗ ತಪ್ಪಾಗುವುದು ಹೆಚ್ಚು ಎಂದು ದೊಡ್ಡವರು ಹೇಳುತ್ತಾರೆ. ಹಾಗೇ, ನೀವು ಮಾಡಿದ ಟ್ವೀಟ್​​ನಲ್ಲಿ Bydget ಎಂದು ಬರೆದಿದ್ದೀರಿ, ಆದರೆ ಅದು BUDGET. ಹಾಗೇ, ಇನ್ನೊಂದೆಡೆ rely ಎಂದು ಬರೆದುಕೊಂಡಿದ್ದೀರಿ, ಅದು Reply ಎಂಬುದು ಸರಿಯಾದ ಪ್ರಯೋಗ. ಇರಲಿ ಬಿಡಿ, ನಾವು ಅರ್ಥ ಮಾಡಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ