Viral Video: ರೂಪ್ ತೇರಾ ಮಸ್ತಾನಾ ಹಾಡಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತರ ಮಹಿಳೆಯರೊಂದಿಗೆ ಹೆಜ್ಜೆಹಾಕಿದ್ದು ನೋಡಲು ಅಪ್ಯಾಯಮಾನ!

ತಿಳಿವರ್ಣದ ಸೀರೆಯುಟ್ಟಿರುವ ಇರಾನಿ ಎಲ್ಲ ಮಹಿಳೆಯರೊಂದುಗೆ ಆತ್ಮೀಯವಾಗಿ ಬೆರೆತು ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ಕ್ಷಣಗಳನ್ನು ಅವರು ಬಹಳ ಅನಂದಿಸರೆನ್ನುವುದು ಅವರ ಮುಖದಲ್ಲಿ ಮತ್ತು ವರ್ತನೆಯಲ್ಲಿ ವ್ಯಕ್ತವಾಗುತ್ತಿದೆ.

Viral Video: ರೂಪ್ ತೇರಾ ಮಸ್ತಾನಾ ಹಾಡಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇತರ ಮಹಿಳೆಯರೊಂದಿಗೆ ಹೆಜ್ಜೆಹಾಕಿದ್ದು ನೋಡಲು ಅಪ್ಯಾಯಮಾನ!
ಮಹಿಳೆಯರೊಂದಿಗೆ ಹೆಜ್ಜೆ ಹಾಕುತ್ತಿರುವ ಸ್ಮೃತಿ ಇರಾನಿ
Edited By:

Updated on: Mar 23, 2023 | 12:47 PM

ನವದೆಹಲಿ: ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ (Smriti Irani) ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೂ ಕ್ರಿಯಾತ್ಮಕ ಶೈಲಿಗಳಿಂದ ಲೈಮ್ ಲೈಟನ್ನು ತಮ್ಮ ಮೇಲೆ ಸೆಳೆದುಕೊಳ್ಳುತ್ತಾರೆ. ದೆಹಲಿಯಲ್ಲಿ (New Delhi) ಇತ್ತೀಚಿಗೆ ನಡೆದ ಮಹಿಳಾ ಸಬಲೀಕರಣ ಕಾರ್ಯಕ್ರಮವೊಂದರ (Women Empowerment) ಒಂದು ವಿಡಿಯೋ ಕ್ಲಿಪ್ ಮೂಲಕ ಅವರು ಮತ್ತೇ ಸುದ್ದಿಯಲ್ಲಿದ್ದಾರೆ. ಮಹಿಳೆಯರ ದಿನವನ್ನು ಸಬಲೀಕರಣಗೊಳಿಸುವತ್ತ ಸಾಮೂಹಿಕ ಪ್ರಯತ್ನಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇರಾನಿ ಅಲ್ಲಿದ್ದ ಮಹಿಳೆಯರೊಂದಿಗೆ ಕುಣಿದು ಎಲ್ಲರನ್ನು ರಂಜಿಸಿದರು. ಮಂಗಳವಾರ ಅಂದರೆ ಮಾರ್ಚ್ 21 ರಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಖ್ಯಾತ ಗಾಯಕ ದಿವಂಗತ ಕಿಶೋರ್ ಕುಮಾರ್ ಅವರ ‘ರೂಪ್ ತೇರಾ ಮಸ್ತಾನಾ ಪ್ಯಾರ್ ಮೇರಾ ದೀವಾನಾ..’ ಹಾಡಿನ ರಿಡಕ್ಸ್ ಆವೃತ್ತಿಗೆ ಅವರು ಮಹಿಳೆಯರೊಂದಿಗೆ ಲಯಬದ್ಧವಾಗಿ ಮತ್ತು ತನ್ನಯತೆಯಿಂದ ಹೆಜ್ಜೆ ಹಾಕಿದರು.

ಇದನ್ನೂ ಓದಿ:   ಲಿಂಗಾಯತ ಪಂಚಮಸಾಲಿಗೆ 2 ಸಿ, 2 ಡಿ ಮೀಸಲಾತಿ: ಯಥಾಸ್ಥಿತಿ ಆದೇಶ ತೆರವುಗೊಳಿಸಿದ ಹೈಕೋರ್ಟ್, ಸರ್ಕಾರಕ್ಕೆ ಬಿಗ್ ರಿಲೀಫ್

ತಿಳಿವರ್ಣದ ಸೀರೆಯುಟ್ಟಿರುವ ಇರಾನಿ ಎಲ್ಲ ಮಹಿಳೆಯರೊಂದುಗೆ ಆತ್ಮೀಯವಾಗಿ ಬೆರೆತು ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ಕ್ಷಣಗಳನ್ನು ಅವರು ಬಹಳ ಅನಂದಿಸರೆನ್ನುವುದು ಅವರ ಮುಖದಲ್ಲಿ ಮತ್ತು ವರ್ತನೆಯಲ್ಲಿ ವ್ಯಕ್ತವಾಗುತ್ತಿದೆ. ಎಎನ್ ಐ ಸುದ್ದಿಸಂಸ್ಥೆ ಶೇರ್ ಮಾಡಿರುವ ವಿಡಿಯೋಗೆ, ‘ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಮೊನ್ನೆ ರಾತ್ರಿ ಮಹಿಳೆಯರ ದಿನವನ್ನು ಸಬಲೀಕರಣಗೊಳಿಸುವತ್ತ ಸಾಮೂಹಿಕ ಪ್ರಯತ್ನಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಸಚಿವೆ, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರ ಮಹಿಳೆಯರೊಂದಿಗೆ ನೃತ್ಯ ಕೂಡ ಮಾಡಿದರು,’ ಅಂತ ಶೀರ್ಷಿಕೆ ನೀಡಲಾಗಿದೆ.

ಮಹಿಳೆಯರ ದಿನವನ್ನು ಸಬಲೀಕರಣಗೊಳಿಸುವತ್ತ ಸಾಮೂಹಿಕ ಪ್ರಯತ್ನಗಳು ಕಾರ್ಯಕ್ರಮದ ಮತ್ತಷ್ಟು ವಿಡಿಯೋ ತುಣುಕುಗಳನ್ನು ಸಚಿವೆಯು ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್ ಗಳಲ್ಲಿ ಶೇರ್ ಮಾಡಿದ್ದಾರೆ. ಅಯ್ಯೋ ಶ್ರದ್ಧಾ ಎಂಬ ಹೆಸರಿನಿಂದ ಗುರುತಿಸಿಕೊಳ್ಳುವ ಡಿಜೆಟಲ್ ಕ್ರಿಯೇಟರ್ ಶ್ರದ್ಧಾ ಅವರೊಂದಿಗಿನ ಮೂರು ಸೆಲ್ಫೀಗಳನ್ನು ಇರಾನಿ ಶೇರ್ ಮಾಡಿದ್ದಾರೆ. ಸ್ಮೃತಿ ಇರಾನಿ ಶೇರ್ ಮಾಡಿದ ಪೋಸ್ಟ್ ಗೆ ಆರ್ಡಿನರಿ ಶೀರ್ಷಿಕೆ ಇರಲು ಸಾಧ್ಯವೇ?

ಇದನ್ನೂ ಓದಿ: Radhika Pandit: ಮತ್ತೆ ವಿದೇಶದಲ್ಲಿರೋ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್

ತಮ್ಮ ಪೋಸ್ಟ್ ಗೆ ಇರಾನಿ ಅವರು, ‘ಎಲ್ಲ ದಿಟ್ಟ ಅತ್ತೆಯಂದಿರಿಗೆ ಮತ್ತು ಷಡ್ಯಂತ್ರ ರೂಪಿಸುವ ಸೊಸೆಯಂದಿರಿಗೆ ನಾನು ಮತ್ತು ಶ್ರದ್ಧಾ ‘ಅಯ್ಯೋ’ ಅಂತ ಹೇಳುತ್ತೇವೆ!, ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಜೋಡಿಯ ಮಾತುಗಳು ಅವರ ಅಭಿಮಾನಿಗಳನ್ನು ಬಹಳಷ್ಟು ಇಂಪ್ರೆಸ್ ಮಾಡಿವೆ. ಒಬ್ಬ ಅಭಿಮಾನಿ ‘ಅಯ್ಯೋ ಈ ಜೋಡಿ 100/100 ಆಗಿದೆ,’ ಅ.ತ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ‘ಇಂಡಿಯಾದ ಕೂಲೆಸ್ಟ್ ಮಿನಿಸ್ಟರ್.’ ಅಂತ ಹೇಳಿದ್ದಾರೆ. ಮೂರನೇಯವರು ನಗುವಿನ ಐಕಾನ್ ಜೊತೆ, ‘ನೀವು ಹೇಳಿದ್ದು ತುಂಬಾ ಇಷ್ಟವಾಯಿತು, ಅಪ್ಪಟ ಅತ್ತೆಯಂಥ ಲುಕ್,’ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Thu, 23 March 23